ಬರುತ್ತಿದೆ ಸೊಳ್ಳೆ ಶಬ್ದವನ್ನುಂಟು ಮಾಡುವ ಎಫ್1 ರೇಸ್
ನೀವು ಯಾವತ್ತಾದರೂ ಟಿ.ವಿ. ಪರದೆ ಅಥವಾ ಇನ್ನಿತರ ಸಂದರ್ಭಗಳಲ್ಲಿ ಫಾರ್ಮುಲಾ ಒನ್ ರೇಸನ್ನು ಸೂಕ್ಷ್ಮವಾಗಿ ಗಮನಿಸಿದ್ದೀರಾ? ಇಲ್ಲಿ ಎಫ್1 ರೇಸ್ ಕಾರುಗಳ ಶಬ್ದವು ಸೊಳ್ಳೆಗಳ ಶಬ್ದಕ್ಕೆ ಹೋಲಿಕೆಯಾಗುವುದನ್ನು ಗಮನಿಸಿರಬಹುದು.
ಇನ್ನು ಕೆಲವು ಕ್ರೀಡಾಪ್ರೇಮಿಗಳು ಇದನ್ನು ಜೇನು ನೊಣದ ಶಬ್ದಕ್ಕೆ ಹೋಲಿಸುತ್ತಾರೆ. ಅಂದ ಹಾಗೆ ಮುಂದಿನ ವರ್ಷದ ಫಾರ್ಮುಲಾ ಒನ್ ರೇಸ್ ಹಲವು ಕಾರಣಗಳಿಂದಾಗಿ ಹೆಚ್ಚಿನ ಪ್ರಾಮುಖ್ಯತೆ ಪಡೆದುಕೊಳ್ಳಲಿದೆ.
ಅಂದರೆ 2014 ಎಫ್1 ಆವೃತ್ತಿಯು ಹೊಸ ಎಂಜಿನ್ ಪಡೆದುಕೊಳ್ಳಲಿದೆ. ಇದುವರೆಗೆ ಎಫ್1 ರೇಸಿಂಗ್ ಎಂಜಿನ್‌ಗಳು ರಿಯರ್ ಮೌಂಟೆಡ್ 2.4 ವಿ8 ಎಂಜಿನ್‌ನಿಂದ ನಿಯಂತ್ರಿಸಲ್ಪಟ್ಟಿದ್ದವು. ಇದನ್ನು ನೂತನ ಟರ್ಬೊಚಾರ್ಜ್ಡ್ 1.6 ಲೀಟರ್ ವಿ6 ಎಂಜಿನ್ ಬದಲಾಯಿಸಿಕೊಳ್ಳಲಿದೆ. ಇದು ಹೆಚ್ಚು ಮಿತವ್ಯಯ ಎಂಜಿನ್ ಕೂಡಾ ಆಗಿರಲಿದೆ. ಇದಕ್ಕಾಗಿ ಹೊಸ ಎಂಜಿನ್ ಆಳವಡಿಸಲು ನಿರ್ಧರಿಸಲಾಗಿದೆ.
ಈ ಸಂಬಂಧ ಮರ್ಸಿಡಿಸ್ ಬೆಂಝ್ ಎಎಂಜಿ ಮೊದಲ ಆಡಿಯೋ ಕ್ಲಿಪ್ ಬಿಡುಗಡೆಗೊಳಿಸಿದೆ. ಇದು ಸೊಳ್ಳೆ ಶಬ್ದವನ್ನು ಹೋಲುತ್ತಿದ್ದು, ರೇಸ್ ಪ್ರಿಯರಲ್ಲಿ ರೋಚಕತೆ ಸೃಷ್ಟಿಮಾಡಲಿದೆ.
<center><iframe width="600" height="450" src="//www.youtube.com/embed/ebpkJXJ7CFo" frameborder="0" allowfullscreen></iframe></center>


Click it and Unblock the Notifications









