ಸದ್ಯದಲ್ಲೇ ಮರ್ಸಿಡಿಸ್ ಬೆಂಝ್ ಇ-ಕ್ಲಾಸ್ ಲಾಂಚ್

ಜರ್ಮನಿ ಮೂಲದ ಪ್ರೀಮಿಯಂ ಕಾರು ತಯಾರಕ ಸಂಸ್ಥೆಯಾಗಿರುವ ಮರ್ಸಿಡಿಸ್ ಬೆಂಝ್, ಸದ್ಯದಲ್ಲೇ ಇ-ಕ್ಲಾಸ್ ಫೇಸ್‌ಲಿಫ್ಟ್ ವರ್ಷನ್ ಲಾಂಚ್ ಮಾಡಲಿದೆ. ಸದ್ಯ ಲಭ್ಯವಿರುವ ಮಾಹಿತಿ ಪ್ರಕಾರ ಜೂನ್ 25ರಂದು ಬೆಂಝ್ ಇ-ಕ್ಲಾಸ್ ಫೇಸ್‌ಲಿಫ್ಟ್ ವರ್ಷನ್ ಬಿಡುಗಡೆಯಾಗಲಿದೆ.

ನಾಲ್ಕು ವರ್ಷಗಳ ಹಿಂದೆ W212 ಜನರೇಷನ್ ಇ-ಕ್ಲಾಸ್ ಭಾರತದಲ್ಲಿ ಪರಿಚಯವಾಗಿತ್ತು. ಇದೀಗ ಹಲವು ಬದಲಾವಣೆಗಳೊಂದಿಗೆ ಪರಿಷ್ಕೃತ ಮಾದರಿ ಆಗಮನವಾಗಲಿದೆ. ಇದರಲ್ಲಿ ಎಲ್‌ಇಡಿ ಹೆಡ್‌ಲ್ಯಾಂಪ್ ಪ್ರಮುಖವಾಗಿದೆ.

ನೂತನ ಕಾರು ಹೆಚ್ಚು ಆಕ್ರಮಣಕಾರಿ ಲುಕ್ ಪಡೆಯಲಿದೆ. ಸ್ಪೋರ್ಟಿಯರ್ ಸ್ಟೀರಿಂಗ್ ವೀಲ್, ಏರ್-ಕಾನ್ ವೆಂಟ್ಸ್ ಹಾಗೆಯೇ ನೂತನ ಆಡಿಯೋ ಸಿಸ್ಟಂ ಪಡೆಯಲಿದೆ. ಇದರ ಜತೆಗೆ ಪಾರ್ಕ್ ಅಸಿಸ್ಟ್ ಸಿಸ್ಟಂ ಇರಲಿದೆ.

ಭಾರತದಲ್ಲಿ ಒಟ್ಟು ಎರಡು ಎಂಜಿನ್ ಆಯ್ಕೆಗಳಲ್ಲಿ ಬೆಂಝ್ ಇ-ಕ್ಲಾಸ್ ಆಗಮನವಾಗಲಿದೆ. ಇದರ 2.0 ಲೀಟರ್ ಪೆಟ್ರೋಲ್ ಡೈರಕ್ಟ್ ಇಂಜೆಕ್ಷನ್ ಮೋಟಾರ್ 185 ಬಿಎಚ್‌ಪಿ ಪವರ್ ಉತ್ಪಾದಿಸಲಿದೆ. ಹಾಗೆಯೇ 2.1 ಲೀಟರ್ ಡೀಸೆಲ್ ಎಂಜಿನ್ 204 ಬಿಎಚ್‌ಪಿ ಪವರ್ ಉತ್ಪಾದಿಸಲಿದೆ. ಇವೆರಡು ಫೋರ್ ಸಿಲಿಂಡರ್ 7ಜಿ-ಟ್ರಾನಿಕ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಹೊಂದಿದೆ.

Article Published On: Thursday, June 13, 2013, 15:17 [IST]
English summary
German car maker Mercedes Benz is going to launch E-Class facelift soon. As per information, Mercedes Benz will launch new E-Class on 25th June this year.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+