ನೂತನ ಹ್ಯುಂಡೈ ಐ10 ಬರಮಾಡಿಕೊಳ್ಳಲು ಸನ್ನದ್ಧರಾಗಿ!
2012ನೇ ಸಾಲಿನಲ್ಲಿ ದೇಶದಲ್ಲಿ ಅತಿ ಹೆಚ್ಚು ಮಾರಾಟಗೊಂಡ ಅಗ್ರ ಐದು ಕಾರುಗಳ ಪೈಕಿ ಹ್ಯುಂಡೈ ಸ್ಥಾನ ಗಿಟ್ಟಿಸಿಕೊಂಡಿರುವುದು ನಮಗೆ ತಿಳಿದಿರುವ ವಿಚಾರ. ಅಂದರೆ ದೇಶದಲ್ಲಿ ನಂ.1 ಸ್ಥಾನದಲ್ಲಿರುವ ಮಾರುತಿಯನ್ನು ಹೊರತುಪಡಿಸಿದರೆ ಅತ್ಯುತ್ತಮ ಮಾರಾಟ ದಾಖಲೆಯನ್ನು ಹ್ಯುಂಡೈ ಹೊಂದಿದೆ.
ಮೊದಲ ನಾಲ್ಕು ಸ್ಥಾನಗಳಲ್ಲಿ ಕಾಣಿಸಿಕೊಂಡಿರುವ ಮಾರುತಿ ಕಾರುಗಳನ್ನು ಹೊರತುಪಡಿಸಿದರೆ ಹ್ಯುಂಡೈ ಐ10 ನಿಕಟ ಸ್ಪರ್ಧೆ ಒಡ್ಡಿರುವುದು ಕಾರಿನ ಜನಪ್ರಿಯತೆಗೆ ಸಾಕ್ಷಿಯಾಗಿದೆ. ಅಂದ ಹಾಗೆ ದೇಶದ ಸಣ್ಣ ಕಾರು ಮಾರುಕಟ್ಟೆಯಲ್ಲಿ ತನ್ನದೇ ಆದ ಸ್ಥಾನಮಾನ ಉಳಿಸಿಕೊಂಡಿರುವ ದಕ್ಷಿಣ ಕೊರಿಯಾದ ಈ ಕಾರು ತಯಾರಕ ಕಂಪನಿಯು ಮುಂಬರುವ ದಿನಗಳಲ್ಲಿ ಐ10 ಮಾದರಿಯ ಪರಿಷ್ಕೃತ ಆವೃತ್ತಿ ಲಾಂಚ್ ಮಾಡಲಿದೆ ಎಂಬುದು ಈಗಿನ ಬಿಸಿಬಿಸಿ ಸುದ್ದಿ.
ಕಾರಿನ ಅಭಿವೃದ್ಧಿಯಲ್ಲಿ ತೊಡಗಿರುವ ಕಂಪನಿಯು ಈಗಾಗಲೇ ಟೆಸ್ಟ್ ಡ್ರೈವ್ ನಡೆಸುತ್ತಿದೆ. ಈ ನಡುವೆ ಕಾರಿನ ರಹಸ್ಯ ಚಿತ್ರಣಗಳು ಬಿಡುಗಡೆಯಾಗಿವೆ. ಆದರೆ ಕಪ್ಪು ಬಟ್ಟೆಯಿಂದ ಸಂಪೂರ್ಣವಾಗಿ ಮುಚ್ಚಲ್ಪಟ್ಟಿರುವುದರಿಂದ ಕಾರಿನ ಕಾಸ್ಮೆಟಿಕ್ ಬದಲಾವಣೆಗಳು ಪತ್ತೆಯಾಗಿಲ್ಲ.
2010 ಹಾಗೂ 2011ನೇ ಸಾಲಿನಲ್ಲಿ ದೇಶದ ಕಾರು ಮಾರಾಟದಲ್ಲಿ ಮೂರನೇ ಸ್ಥಾನದಲ್ಲಿದ್ದ ಹ್ಯುಂಡೈ ಐ10 ಪ್ರಸಕ್ತ ಸಾಲಿನಲ್ಲಿ ಕೊಂಚ ಹಿನ್ನಡೆ ಅನುಭವಿಸಿದ್ದು ಐದನೇ ಸ್ಥಾನಕ್ಕೆ ಕುಸಿದಿತ್ತು. ಆದರೆ ಪ್ರಸ್ತುತ ಆಗಮನವಾಗಲಿರುವ ಅಪ್‌ಗ್ರೇಡ್ ವರ್ಷನ್ ಬಗ್ಗೆ ತಿಳಿದುಕೊಳ್ಳಲು ಕಾರು ಪ್ರಿಯರು ಕುತೂಹಲದಿಂದ ಕಾಯುತ್ತಿದ್ದಾರೆ.
ಪ್ರಸ್ತುತ ಬಂದಿರುವ ಮಾಹಿತಿ ಪ್ರಕಾರ ಹ್ಯುಂಡೈ ಐ10 2014ರಲ್ಲಿ ಜಾಗತಿಕವಾಗಿ ಬಿಡುಗಡೆಯಾಗಲಿದ್ದು, ಕಾರು ಪರೀಕ್ಷಾ ಕಾಲಘಟ್ಟದಲ್ಲಿದೆ. ಭಾರತ ಸೇರಿದಂತೆ ಯುರೋಪ್ ಹಾಗೂ ಅಮೆರಿಕ ಮಾರುಕಟ್ಟೆಗಳಲ್ಲಿ ಸಣ್ಣ ಕಾರು ಬೇಡಿಕೆಯನ್ನು ಪರಿಗಣಿಸಿರುವ ಹ್ಯುಂಡೈ ಅತ್ತ ದಾಪುಗಾಲನ್ನಿಟ್ಟಲು ಸಿದ್ಧವಾಗುತ್ತಿದೆ.
ಹಾಗಿದ್ದರೆ ಹ್ಯುಂಡೈ ಐ10 ವೈಶಿಷ್ಟ್ಯಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ...

ನೂತನ ಹ್ಯುಂಡೈ ಐ10
ಪ್ರಸ್ತುತ ಚಾಲ್ತಿಯಲ್ಲಿರುವ ಐ10 ಕಾರಿಗೆ ಹೋಲಿಸಿದರೆ ಹೊಸ ಹ್ಯುಂಡೈ ಐ10 ಕಾರಿನಲ್ಲಿ ಕಾಸ್ಮೆಟಿಕ್ ಸೇರಿದಂತೆ ಕೆಲವೊಂದು ಗಮನಾರ್ಹ ಬದಲಾವಣೆಗಳನ್ನು ಕಂಡುಬರಲಿದೆ. ಅಂದರೆ ಕಾರಿನ ಒಟ್ಟಾರೆಯಾಗಿನ ಆಕಾರದಲ್ಲಿ ಬದಲಾವಣೆಯಾಗಲಿದೆ.

ನೂತನ ಹ್ಯುಂಡೈ ಐ10
ಈಗಿರುವ ಹ್ಯುಂಡೈ ಐ10ಗಿಂತ ಹೊಸ ಐ10 ಮಾದರಿ ಹೆಚ್ಚು ಉದ್ದ ಹಾಗೂ ಅಗಲವಾಗಿರಲಿದೆ. ಕಾರಿನ ರೂಫ್ ಪರಿಷ್ಕೃತಗೊಳಿಸಲಾಗುತ್ತಿದ್ದು ಕಾರಿನೊಳಗೂ ಹೆಚ್ಚು ಸ್ಥಳವಕಾಶ ಕಲ್ಪಿಸಲಾಗಿದೆ.

ನೂತನ ಹ್ಯುಂಡೈ ಐ10
ಫ್ರಂಟ್ ಸೇರಿದಂತೆ ರಿಯರ್ ಪಿಲ್ಲರ್‌ಗಳಿಗೆ ಆಧುನಿಕ ವಿನ್ಯಾಸ ನೀಡಲಾಗಿದೆ. ಇದು ಕಾರಿನ ಅಂದವನ್ನು ಹೆಚ್ಚಿಸಲಿದೆ.

ನೂತನ ಹ್ಯುಂಡೈ ಐ10
2013ರ ಅಂತ್ಯದ ವೇಳೆಗೆ ಟರ್ಕಿಯಲ್ಲಿರುವ ಹ್ಯುಂಡೈ ಘಟಕದಲ್ಲಿ ಹೊಸ ಐ10 ಉತ್ಪಾದನಾ ಕಾರ್ಯ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

ನೂತನ ಹ್ಯುಂಡೈ ಐ10
ಏತನ್ಮಧ್ಯೆ 2013 ಜಿನೆವಾ ವೋಟಾರ್ ಶೋ ಹಾಗೂ 2013 ಫ್ರಾಂಕ್‌ಫುರ್ಟ್ ಮೋಟಾರ್ ಶೋದಲ್ಲಿ ನೂತನ ಹ್ಯುಂಡೈ ಐ10 ಪ್ರದರ್ಶನಗೊಳ್ಳುವ ನಿರೀಕ್ಷೆಯಿದೆ.

ನೂತನ ಹ್ಯುಂಡೈ ಐ10
ಹ್ಯುಂಡೈ ಡೀಸೆಲ್ ಆವೃತ್ತಿ ಮಾರುಕಟ್ಟೆಯಲ್ಲಿ ಬಾರಿ ಸದ್ದು ಮಾಡುವ ನಿರೀಕ್ಷೆಯಿದೆ. ಉತ್ತಮ ನಿರ್ವಹಣೆ ಜತೆಗೆ ಗರಿಷ್ಠ ಇಂಧನ ಕ್ಷಮತೆಗೆ ಹ್ಯುಂಡೈ ಮಹತ್ವ ಕೊಡುತ್ತಿದೆ.

ನೂತನ ಹ್ಯುಂಡೈ ಐ10
ಹ್ಯುಂಡೈ ಕಾರು ಪ್ರಿಯರಿಗೆ ಖಂಡಿತವಾಗಿಯೂ ಈ ನೂತನ ಅಪ್‌ಗ್ರೇಡ್ ವರ್ಷನ್ ಇಷ್ಟವಾಗಲಿದೆ.

ನೂತನ ಹ್ಯುಂಡೈ ಐ10
ಮಾರುತಿ ಸವಾಲನ್ನು ಹ್ಯುಂಡೈ ಯಾವ ರೀತಿ ಎದುರಿಸಲಿದೆ ಎಂಬುದಕ್ಕೆ ಮುಂದಿನ ದಿನಗಳಲ್ಲಿ ಉತ್ತರ ಲಭಿಸಲಿದೆ.
Image source: carscoop.blogspot.com


Click it and Unblock the Notifications








