ಡಟ್ಸನ್‌ನಿಂದ ಸಣ್ಣ ಕಾರು ಆಗಮನ ಸುನಿಶ್ಚಿತ
ಜಪಾನ್ ಮೂಲದ ಪ್ರತಿಷ್ಠಿತ ಕಾರು ತಯಾರಕ ಸಂಸ್ಥೆಯಾದ ನಿಸ್ಸಾನ್, ತನ್ನ ಜನಪ್ರಿಯ ದಟ್ಸನ್ ಬ್ರಾಂಡ್ ಅನ್ನು ಭಾರತಕ್ಕೆ ಮತ್ತೆ ಪರಿಚಯಿಸಲಿದೆ. ಈ ಮೂಲಕ ಸಣ್ಣ ಕಾರು ಮಾರುಕಟ್ಟೆಯಲ್ಲಿ ಹೊಸ ಎದುರಾಳಿ ಸಿದ್ಧವಾಗುತ್ತಿರುವುದು ಬಹುತೇಕ ಖಚಿತವಾಗಿದೆ.
ಕಂಪನಿಯ ಮೂಲದ ಪ್ರಕಾರ ದಟ್ಸನ್ ಬ್ರಾಂಡ್ ಜುಲೈ 15ರಂದು ರಿ ಲಾಂಚ್ ಆಗಲಿದೆ. 'Be a part of the rising' ಟ್ಯಾಗ್ ಅಡಿಯಲ್ಲಿ ಡಟ್ಸನ್ ಆಗಮನವಾಗಲಿದೆ.
ಈಗಾಗಲೇ ದಟ್ಸನ್ ಮೊದಲ ಕಾಂಪಾಕ್ಟ್ ಹ್ಯಾಚ್‌ಬ್ಯಾಕ್ ಮಾಡೆಲ್ ಕೆ2 ಎಂಬ ಕೋಡ್ ಪಡೆದುಕೊಂಡಿದ್ದು, ಮೈಕ್ರಾ ಫ್ಲಾಟ್‌ಫಾರ್ಮ್‌ನಲ್ಲಿ ನಿರ್ಮಾಣವಾಗಲಿದೆ.
ದಟ್ಸನ್ ಹ್ಯಾಚ್‌ಬ್ಯಾಕ್ ಕಾರು ನಾಲ್ಕು ಲಕ್ಷ ರು.ಗಳ ಅಸುಪಾಸಿನಲ್ಲಿರಲಿದೆ. ದೇಶದ ಮಧ್ಯಮ ವರ್ಗದ ಜನರು ಎಂಟ್ರಿ ಲೆವೆಲ್ ಕಾರುಗಳನ್ನು ಹೆಚ್ಚು ಅವಲಂಬಿಸಿರುವುದರಿಂದ ಡಟ್ಸನ್‌ಗೆ ಉತ್ತಮ ಪ್ರತಿಕ್ರಿಯೆ ದೊರಕುವ ಸಂಭವವಿದೆ.
ಅಂದ ಹಾಗೆ ಜುಲೈ 15ರಂದು ಗುರ್ಗಾಂವ್‌ನ ಕಿಂಗ್‌ಡಮ್ ಆಫ್ ಡ್ರೀಮ್ಸ್‌ನಲ್ಲಿ ದಟ್ಸನ್ ದೇಶಕ್ಕೆ ಅದ್ದೂರಿ ಪ್ರವೇಶ ಪಡೆಯಲಿದೆ.


Click it and Unblock the Notifications
