8.90 ಲಕ್ಷಕ್ಕೆ ನಿಸ್ಸಾನ್ ಟೆರನೊ ಆಗಮನ?
ನಿಸ್ಸಾನ್ ಡಸ್ಟರ್ ಎಂದೇ ಪರಿಗಣಿಸಲ್ಪಟ್ಟಿರುವ ನಿಸ್ಸಾನ್ ಟೆರನೊ ಪ್ರೀಮಿಯಂ ಎಸ್‌ಯುವಿ ಕಾರು ಅಕ್ಟೋಬರ್ ತಿಂಗಳಲ್ಲಿ ಲಾಂಚ್ ಆಗುವ ಸಾಧ್ಯತೆಗಳಿವೆ ಎಂದು ದೇಶದ ಮುಂಚೂಣಿಯ ಆಟೋ ವೆಬ್‌ಸೈಟ್ ಮೋಟಾರ್‌ಬೀಮ್ ಅಭಿಪ್ರಾಯಪಟ್ಟಿದೆ.
ಈ ಪ್ರೀಮಿಯಂ ಎಸ್‌ಯುವಿ ಕಾರಿನ ದರ 8.90 ಲಕ್ಷ ರು.ಗಳಾಗಿರುವ ನಿರೀಕ್ಷೆಯಿದೆ. ಮಾರುಕಟ್ಟೆಯಲ್ಲಿ ಪೆಟ್ರೋಲ್ ಕಾರುಗಳಿಗೆ ಬೇಡಿಕೆ ಕುಸಿಯುತ್ತಿರುವ ಹಿನ್ನಲೆಯಲ್ಲಿ ಡೀಸೆಲ್ ವೆರಿಯಂಟ್ ಮಾತ್ರ ಆಗಮನವಾಗುವ ಸಾಧ್ಯತೆಯಿದೆ.
ಒಟ್ಟು ನಾಲ್ಕು ವೆರಿಯಂಟ್‌ಗಳಲ್ಲಿ ನಿಸ್ಸಾನ್ ಟೆರೆನೊ ಲಭ್ಯವಾಗಲಿದೆ. ಅವುಗಳೆಂದರೆ ಎಕ್ಸ್‌ಎಲ್, ಎಕ್ಸ್‌ಎಲ್ (ಒ), ಎಕ್ಸ್‌ವಿ ಹಾಗೂ ಎಕ್ಸ್‌ವಿ ಪ್ರೀಮಿಯಂ. ಇವೆಲ್ಲವೂ 1.5 ಲೀಟರ್ ಕೆ9ಕೆ ರೆನೊ ಡೀಸೆಲ್ ಮಿಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಹಾಗೆಯೇ ಫೈವ್ ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್‌ನಲ್ಲಿ ಪವರ್ ಸಪ್ಲೇಯಾಗಲಿದೆ.
ನೂತನ ಎಸ್‌ಯುವಿ ನಿಸ್ಸಾನ್ ಗ್ರಿಲ್, ಪರಿಷ್ಕೃತ ಅಳಾಯ್ ವೀಲ್ ಹಾಗೂ ಹೊಸ ವಿನ್ಯಾಸ ಪಡೆದುಕೊಳ್ಳಲಿದೆ. ಹಾಗಿದ್ದರೂ ಪ್ರೀಮಿಯಂ ರೂಪದಲ್ಲಿ ಆಗಮನವಾಗಲಿರುವುದರಿಂದ ರೆನೊ ಡಸ್ಟರ್‌ಗೆ ಸ್ಪರ್ಧೆ ಒಡ್ಡುವ ಸಾಧ್ಯತೆ ಕಡಿಮೆಯಾಗಿದೆ.


Click it and Unblock the Notifications
