ಕಹಿ ಸುದ್ದಿ; ಮಹೀಂದ್ರ ನೂತನ ಕಾರು ಸದ್ಯಕ್ಕಿಲ್ಲ

By Nagaraja

ಭಾರತದ ವಾಹನ ಪ್ರಿಯರಿಗೆ ಕಹಿ ಸುದ್ದಿ ಬಂದಿದ್ದು, ಮುಂದಿನ ಕೆಲವು ವರ್ಷಗಳ ಕಾಲ ನೂತನ ಕಾರು ಲಾಂಚ್ ಮಾಡದಿರಲು ದೇಶದ ಮುಂಚೂಣಿಯ ಕಾರು ತಯಾರಕ ಸಂಸ್ಥೆಯಾಗಿರುವ ಮಹೀಂದ್ರ ಆಂಡ್ ಮಹೀಂದ್ರ ನಿರ್ಧರಿಸಿದೆ.

ಇದರರ್ಥ ಕಾರು ಮಾರುಕಟ್ಟೆಯಿಂದ ಮಹೀಂದ್ರ ಸಂಪೂರ್ಣವಾಗಿ ದೂರ ಸರಿಯಲಿದೆ ಎಂಬುದಲ್ಲ. ಬದಲಾಗಿ 2016ರ ವರೆಗೆ ನೂತರ ಕಾರುಗಳ ಬದಲು ಈಗಿರುವ ಮಾಡೆಲ್‌ಗಳ ಪರಿಷ್ಕೃತ ಆವೃತ್ತಿಗಳನ್ನು ಲಾಂಚ್ ಮಾಡಲಿದೆ.


2011ರಿಂದ ಮಹೀಂದ್ರ ಎಕ್ಸ್‌ಯುವಿ500, ಕ್ವಾಂಟೊ, ವೆರಿಟೊ ವೈಬ್ ಹಾಗೂ ಇ2ಒ ಸೇರಿದಂತೆ ಸಾಲು ಸಾಲು ಕಾರುಗಳನ್ನು ಲಾಂಚ್ ಮಾಡಿದ್ದ ಮಹೀಂದ್ರ, ಸದ್ಯದ ಮಾರುಕಟ್ಟೆ ಅವಲೋಕನದಲ್ಲಿ ತೊಡಗಿದ್ದು ಪರಿಷ್ಕೃತ ಮಾಡೆಲ್ ಲಾಂಚ್ ಮಾಡಲು ಹೆಚ್ಚು ಗಮನಕೇಂದ್ರಿತವಾಗಿದೆ.

ಇದರಿಂದಾಗಿ ಎಸ್101 ಕಾಂಪಾಕ್ಟ್ ಎಸ್‌ಯುವಿ, ನೂತನ ಸ್ಕಾರ್ಪಿಯೊ ಹಾಗೂ ಬೊಲೆರೊ ಆವೃತ್ತಿಗಳನ್ನು ನಿರೀಕ್ಷಿಸುತ್ತಿದ್ದ ಗ್ರಾಹಕರಿಗೆ ನಿರಾಸೆಯುಂಟಾಗಿದೆ. ಯಾಕೆಂದರೆ ಮಹೀಂದ್ರದಿಂದ ಆಗಮನವಾಗಲಿರುವ ಈ ಎಲ್ಲ ಆವೃತ್ತಿಗಳು ಸ್ವಲ್ಪ ತಡವಾಗಿ ಅಂದರೆ 2016ರ ಬಳಿಕವಷ್ಟೇ ಮಾರುಕಟ್ಟೆ ಪ್ರವೇಶಿಸಲಿದೆ.

More from DriveSpark

Article Published On: Tuesday, September 3, 2013, 11:28 [IST]
English summary
India’s largest utility vehicle manufacturer Mahindra and Mahindra does not have any plans of launching any new product over the next year or so. According to a report on BusinessStandard, the automaker would only be launching refreshed and facelifted versions of its existing product lineup until the year 2015.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+