ಗ್ರಾಹಕನಿಗೆ ಹಸ್ತಾಂತರಿಸದ ಕಾರು; ಪೋರ್ಷೆಗೆ 30 ಲಕ್ಷ ದಂಡ
ಅತಿ ವಿರಳ ಎನ್ನಬಹುದಾದ ಪ್ರಕರಣವೊಂದರಲ್ಲಿ ಜರ್ಮನಿಯ ಐಷಾರಾಮಿ ಹಾಗೂ ಕ್ರೀಡಾ ಉತ್ಪಾದಕ ಕಂಪನಿಯಾದ ಪೋರ್ಷೆ ಮೇಲೆ ಭಾರತೀಯ ಗ್ರಾಹಕ ನ್ಯಾಯಾಲಯವು 30 ಲಕ್ಷ ರು.ಗಳ ದಂಡ ವಿಧಿಸಿದೆ.
ಮುಂಗಡ ಬುಕ್ಕಿಂಗ್ ಬಳಿಕ ಗ್ರಾಹಕನಿಗೆ ಲಗ್ಷುರಿ ಕಾರು ಹಸ್ತಾಂತರಿಸುವುದರಲ್ಲಿ ಎಡವಟ್ಟು ತೋರಿರುವುದೇ ಪೋರ್ಷೆ ಮೇಲೆ ದಂಡ ಹೇರಲು ಕಾರಣವಾಗಿದೆ.
2011ನೇ ಜುಲೈ ತಿಂಗಳಲ್ಲೇ ಸಂಪೂರ್ಣ 87 ಲಕ್ಷ ರು. ಪಾವತಿಸಿದ್ದ ನಾಗದೇವ್ ಎಂಬ ಗ್ರಾಹಕನು, ಪೋರ್ಷೆ ಕಯೆನ್ನೆ ಲಗ್ಷುರಿ ಎಸ್‌ಯುವಿ ಕಾರನ್ನು ಬುಕ್ಕಿಂಗ್ ಮಾಡಿದ್ದರು. ಆದರೆ ಅಕ್ಟೋಬರ್ 2011ರ ವೇಳೆಗೆ ವಿನಾ ಕಾರಣ ಬುಕ್ಕಿಂಗ್ ರದ್ದುಗೊಳಿಸಲಾಗಿತ್ತು. ಇದರಿಂದ ಬೆಸೆತ್ತ ಗ್ರಾಹಕ ವಂಚನೆ ಪ್ರಕರಣಕ್ಕಾಗಿ ಕೋರ್ಟ್ ಮೊರೆ ಹೋಗಿದ್ದರು.
ಈ ನಡುವೆ ಪ್ರಕರಣ ದಾಖಲಾದ ಕೂಡಲೇ ಬುಕ್ಕಿಂಗ್ ರದ್ದುಗೊಳಿಸಿ ಸಂಪೂರ್ಣ ಹಣ ವಾಪಾಸ್ ನೀಡುವುದಾಗಿ ಪೋರ್ಷೆ ಭರವಸೆ ನೀಡಿತ್ತು.
ಕಯೆನ್ನೆ ಎಸ್‌ಯುವಿ ಪೋರ್ಷೆಯಿಂದ ದೇಶದಲ್ಲಿ ಅತ್ಯಂತ ಹೆಚ್ಚು ಮಾರಾಟವಾಗುತ್ತಿರುವ ಕಾರಾಗಿದೆ. ಇನ್ನು 2012 ಅಕ್ಟೋಬರ್ ತಿಂಗಳಲ್ಲಿ 117 ಯುನಿಟ್‌ಗಳನ್ನು ಹಸ್ತಾಂತರಿಸಿತ್ತು.
ತಾಜಾ ಸುದ್ದಿಗಾಗಿ ಟ್ವಿಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿರಿ


Click it and Unblock the Notifications









