ಕೊನೆಗೂ ಮಾನ್ಯತೆ ಪಡೆದ ಕ್ವಾಡ್ರಾಸೈಕಲ್

By Nagaraja

ಭಾರತದ ಸಂಚಾರ ವ್ಯವಸ್ಥೆಯಲ್ಲಿ ಹೊಸ ಕ್ರಾಂತಿಕಾರಿ ಬದಲಾವಣೆ ಎಂದೇ ಬಿಂಬಿಸಲಾಗುತ್ತಿರುವ ನೂತನ 'ಕ್ವಾಡ್ರಾಸೈಕಲ್' ವಿಭಾಗಕ್ಕೆ ಕೊನೆಗೂ ಕೇಂದ್ರ ಸರಕಾರ ಮನ್ನಣೆ ನೀಡಿದೆ. ಈ ಬಗ್ಗೆ ಆದೇಶ ಹೊರಡಿಸಿರುವ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ, ನೂತನ ಕ್ವಾಡ್ರಾಸೈಕಲ್ ವಿಭಾಗಕ್ಕೆ ಭಾರತ ರಸ್ತೆಗಳಲ್ಲಿ ಸಂಚರಿಸಲು ಮಾನ್ಯತೆ ಕಲ್ಪಿಸಲಾಗುತ್ತಿದೆ ಎಂದಿದೆ.

ಹೊಸ ನಿಯಮದಂತೆ ನಾಲ್ಕು ಚಕ್ರದ ಈ ವಿಭಾಗದ ವಾಹನಗಳನ್ನು ಟ್ಯಾಕ್ಸಿ ಅಥವಾ ಸರಕು ಸಾಗಣೆ ವಾಹನವಾಗಿ ಬಳಕೆ ಮಾಡಬಹುದಾಗಿದೆ. ಆದರೆ ಯಾವುದೇ ಕಾರಣಕ್ಕೂ ವೈಯಕ್ತಿಕ ಪ್ರಯಾಣಕ್ಕೆ ಬಳಸುವಾಗಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ.

ಇದರೊಂದಿಗೆ ಕ್ವಾಡ್ರಾಸೈಕಲ್ ಮಾನ್ಯತೆ ನಿರೀಕ್ಷೆ ಮಾಡುತ್ತಿದ್ದ ಬಜಾಜ್ ಆಟೋಗೆ ನಿರಾಳತೆ ಸಿಕ್ಕಂತಾಗಿದೆ. ಯಾಕೆಂದರೆ ಕ್ವಾಡ್ರಾಸೈಕಲ್ ವಿಭಾಗದಲ್ಲಿ ಕಾಣಿಸಿಕೊಂಡಿರುವ ಬಜಾಜ್ ಆಟೋದ ನೂತನ 'ಆರ್‌ಇ60' ಸದ್ಯದಲ್ಲೇ ಮಾರುಕಟ್ಟೆಗೆ ಅಪ್ಪಳಿಸಲಿದೆ. ಆಟೋ ರಿಕ್ಷಾಗಳಿಗೆ ಬದಲಿ ವ್ಯವಸ್ಥೆ ಎಂದೇ ಬಿಂಬಿಸಲಾಗುತ್ತಿರುವ ಆರ್‌ಇ60 ಬಾಡಿಗೆ ಮೋಟಾರ್ ವಾಹನವಾಗಿ ಬಳಕೆ ಮಾಡಬಹುದಾಗಿದೆ.

ಈ ಸಂಬಂಧ ಕೇಂದ್ರ ಮೋಟಾರ್ ವಾಹನ ನಿಯಮವನ್ನು ತಿದ್ದುಪಡಿಗೊಳಿಸಲಾಗುವುದು ಎಂದು ಕೇಂದ್ರ ಸಚಿವಾಲಯ ತಿಳಿಸಿದೆ. ನೂತನ ಕ್ವಾಡ್ರಾಸೈಕಲ್ ವಿಭಾಗ ಎಂಟ್ರಿ ಲೆವೆಲ್ ಕಾರುಗಳು ಹಾಗೂ ತ್ರಿಚಕ್ರ ವಾಹನಗಳ ನಡುವೆ ಕಾಣಿಸಿಕೊಳ್ಳಲಿದೆ.

More from DriveSpark

Article Published On: Thursday, May 23, 2013, 10:54 [IST]
English summary
The Ministry of Road Transport and Highways on Wednesday approved quadricycles, a new four-wheeler category between three-wheelers and entry-level cars that divided industry opinion.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+