ನಿರೀಕ್ಷಿಸಿ, ನಿಸ್ಸಾನ್-ರೆನೊ ಕಾಂಪಾಕ್ಟ್ ಸೆಡಾನ್ ಕಾರು

By Nagaraja

ಜಪಾನ್ ಮೂಲದ ಪ್ರಖ್ಯಾತ ಕಂಪನಿಯಾಗಿರುವ ನಿಸ್ಸಾನ್, ಫ್ರಾನ್ಸ್‌ನ ರೆನೊ ಜತೆ ಸೇರಿಕೊಂಡು ನೂತನ ಕಾಂಪಾಕ್ಟ್ ಸೆಡಾನ್ ಕಾರು ನಿರ್ಮಾಣ ಮಾಡಲು ಯೋಜನೆ ಹಾಕಿಕೊಂಡಿದೆ. ಕಳೆದ ಕೇಂದ್ರ ಬಜೆಟ್‌ನಲ್ಲಿ ನಾಲ್ಕು ಮೀಟರ್‌ಗಿಂತಲೂ ಉದ್ದವಾದ ಕಾರುಗಳಿಗೆ ಹೆಚ್ಚಿನ ತೆರಿಗೆ ವಿಧಿಸಿರುವುದು ಕಾರು ತಯಾರಕ ಕಂಪನಿಗಳಿಗೆ ನೂತನ ಸೆಗ್ಮೆಂಟ್ ಹುಡುಕುವಂತೆ ಪ್ರೇರೇಪಿಸುತ್ತಿದೆ.

ಮೂಲಗಳ ಪ್ರಕಾರ ನಿಸ್ಸಾನ್ ಮೈಕ್ರಾ ಹಾಗೂ ಪಲ್ಸ್ ಫ್ಲಾಟ್‌ಫಾರ್ಮ್‌ನಲ್ಲಿ ನೂತನ ಸಬ್ ಫೋರ್ ಮೀಟರ್ ಕಾಂಪಾಕ್ಟ್ ಸೆಡಾನ್ ಕಾರು ರೂಪುಗೊಳ್ಳಲಿದೆ. ಇದೇ ದೇಶದ ನಂ.1 ಕಾರು ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ ಸ್ವಿಫ್ಟಿ ಡಿಜೈರ್ ಹಾಗೂ ಹೋಂಡಾ ಅಮೇಜ್ ಆವೃತ್ತಿಗಳಿಗೆ ನೇರ ಪೈಪೋಟಿ ನೀಡಲಿದೆ.


ಸದ್ಯ ನಿಸ್ಸಾನ್-ರೆನೊ ಜೊತೆಗಾರಿಕೆ ಬಗ್ಗೆ ಹೆಚ್ಚಿನ ಮಾಹಿತಿಗಳು ಲಭ್ಯವಿಲ್ಲ. ಆದರೆ ಭಾರತದಲ್ಲಿ ಮಾರುತಿ ಪ್ರಾಬಲ್ಯವನ್ನು ಹಿಮ್ಮೆಟ್ಟಿಸಲು ಖಂಡಿತವಾಗಿಯೂ ನೂತನ ಕಾರು ಮಾರುಕಟ್ಟೆಗೆ ಪರಿಚಯಿಸುವ ಸಾಧ್ಯತೆಗಳಿವೆ.

ಸದ್ಯ ನಿಸ್ಸಾನ್ ಸ್ಕಾಲಾ ಹಾಗೂ ಸನ್ನಿ ಸೆಡಾನ್ ಕಾರುಗಳು ಮಾರುಕಟ್ಟೆಯಲ್ಲಿವೆ. ಹಾಗಿರುವಾಗ ಹೊಸ ಕಾರು ಯಾವಾಗ ಭಾರತ ಎಂಟ್ರಿ ಪಡೆಯಲಿದೆ ಎಂದುದನ್ನು ನಿಖರವಾಗಿ ಹೇಳುವುದು ಅಸಾಧ್ಯ.

More from DriveSpark

Article Published On: Wednesday, August 28, 2013, 11:10 [IST]
English summary
The success of Swift DZire and Honda Amaze has reportedly tempted the Nissan-Renault alliance into developing a compact sedan. A sub-4 meter Micra and Pulse with an added boot.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+