ಅಹಮದಾಬಾದ್‌ನಲ್ಲಿ ಐಕಾನಿಕ್ ರೋಲ್ಸ್ ರಾಯ್ಸ್ ಶೋ ರೂಂ
ಲಗ್ಷುರಿ ಕಾರು ತಯಾರಕ ಸಂಸ್ಥೆಯಾದ ರೋಲ್ಸ್ ರಾಯ್ಸ್, ದೇಶದ ಐದನೇ ಅತಿದೊಡ್ಡ ನಗರವೆನಿಸಿಕೊಂಡಿರುವ ಅಹಮದಾಬಾದ್‌ನಲ್ಲಿ ನೂತನ ಶೋ ರೂಂ ತೆರೆದುಕೊಂಡಿದೆ.
ಈ ಹಿಂದೆ 2005ನೇ ಇಸವಿಯಲ್ಲಿ ಭಾರತಕ್ಕೆ ರಿ ಎಂಟ್ರಿ ಕೊಟ್ಟಿದ್ದ ಈ ಬ್ರಿಟಿಷ್ ಬ್ರಾಂಡ್, ನೂತನ ಶೋ ರೂಂ ಮುಖಾಂತರ ದೇಶದ ಗ್ರಾಹಕರ ಗ್ರಾಹಕರ ಬೇಡಿಕೆಯನ್ನು ಪೂರೈಸಲಿದೆ.
ಇದು ರೋಲ್ಸ್ ರಾಯ್ಸ್‌ನಿಂದ ದೇಶದಲ್ಲಿ ಲಾಂಚ್ ಆಗಿರುವ ನಾಲ್ಕನೇ ಶೋ ರೂಂ ಆಗಿದೆ. ನವನೀತ್ ಮೋಟಾರ್ಸ್ ರೋಲ್ಸ್ ರಾಯ್ಸ್‌ನ ಅಧಿಕೃತ ಡೀಲರ್‌ಶಿಪ್ ಪಡೆದುಕೊಂಡಿದೆ. ರಾಷ್ಟ್ರ ರಾಜಧಾನಿ ನವದೆಹಲಿ, ವಾಣಿಜ್ಯ ನಗರಿ ಮುಂಬೈ ಹಾಗೂ ಹೈದರಾಬಾದ್ ನಗರಗಳಲ್ಲಿ ರೋಲ್ಸ್ ರಾಯ್ಸ್ ಇತರ ಶೋ ರೂಂಗಳಿವೆ.
ನಿಮ್ಮ ಮಾಹಿತಿಗಾಗಿ ರೋಲ್ಸ್ ರಾಯ್ಸ್‌ನ ಅತಿ ದುಬಾರಿ ಕಾರೆನಿಸಿಕೊಂಡಿರುವ ವ್ರಾತ್, ಫಾಟಂ ಹಾಗೂ ಘೋಸ್ಟ್ ಕಾರುಗಳು 4ರಿಂದ 8 ಎಂಟು ಕೋಟಿ ರು.ಗಳ ಅಸುಪಾಸಿನಲ್ಲಿ ಲಭ್ಯವಿದೆ.
ಭಾರತದಲ್ಲಿ ಲಭ್ಯವಿರುವ ರೋಲ್ಸ್ ರಾಯ್ಸ್ ಕಾರು ಉತ್ಪನ್ನಗಳು ಹಾಗೂ ಅವುಗಳ ಬೆಲೆ
- ಫಾಟಂ: ಲಾಂಚ್: 2003 ಜನವರಿ, ದರ: 6.5 ಕೋಟಿ ರು.
- ಫಾಟಂ ಎಕ್ಸ್‌ಟೆಂಡಡ್ ವೀಲ್ ಬೇಸ್: ಲಾಂಚ್: 2005 ಮಾರ್ಚ್, ದರ: 7.6 ಕೋಟಿ ರು.
- ಫಾಟಂ ಡ್ರಾಪ್‌ಹೆಡ್ ಕೂಪೆ: ಲಾಂಚ್: 2007 ಜನವರಿ, ದರ: 7.62 ಕೋಟಿ ರು.
- ಫಾಟಂ ಕೂಪೆ: ಲಾಂಚ್: 2008 ಮಾರ್ಚ್, ದರ: 7.05 ಕೋಟಿ ರು.
- ಘೋಸ್ಟ್: ಲಾಂಚ್: 2009 ಸೆಪ್ಟೆಂಬರ್, ದರ: 4.30 ಕೋಟಿ ರು.
- ಘೋಸ್ಟ್ ಎಕ್ಸ್‌ಟೆಂಡಡ್ ವೇಲ್ ಬೇಸ್: ಲಾಂಚ್: 2011 ಜುಲೈ, ದರ: 4.90 ಕೋಟಿ ರು.
- ವ್ರಾತ್: ಲಾಂಚ್: 2013 ಮಾರ್ಚ್, ದರ: 4.60 ಕೋಟಿ ರು.


Click it and Unblock the Notifications









