ಶ್ರೀಘ್ರದಲ್ಲೇ ರೋಲ್ಸ್ ರಾಯ್ಸ್ ವ್ರೈತ್ ಇಂಡಿಯಾ ಲಾಂಚ್
ರೋಲ್ಸ್ ರಾಯ್ಸ್ ಆವೃತ್ತಿಗಳ ಪೈಕಿ ಅತ್ಯಂತ ಸ್ಪೋರ್ಟಿಯರ್ ಹಾಗೂ ದುಬಾರಿ ಮಾಡೆಲ್ ಎನಿಸಿಕೊಂಡಿರುವ ವ್ರೈತ್ ಸದ್ಯದಲ್ಲೇ ಅಂದರೆ ಮುಂದಿನ ವಾರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ.
ಈ ಹಿಂದೆ ಜಿನೆವಾ ಮೋಟಾರ್ ಶೋದಲ್ಲಿ ಭರ್ಜರಿ ಪ್ರದರ್ಶನ ಕಂಡಿದ್ದ ರೋಲ್ಸ್ ರಾಯ್ಸ್ ವ್ರೈತ್ ಬ್ರಿಟನ್‌ನಲ್ಲಿ ಮೊದಲು ಬಿಡುಗಡೆಯಾಗಿತ್ತು. ಇದೀಗ ಜಾಗತಿಕ ಬಿಡುಗಡೆಯ ಭಾಗವಾಗಿ ಭಾರತ ಪ್ರವೇಶ ಪಡೆಯುತ್ತಿದೆ.

ಇದರಲ್ಲಿ 6.6 ಲೀಟರ್ ಟ್ವಿನ್ ಟರ್ಬೊ ಚಾರ್ಜ್ಡ್ ವಿ12 ಪೆಟ್ರೋಲ್ ಎಂಜಿನ್ ಆಳವಡಿಸಲಾಗಿದೆ. ಇದು 624 ಅಶ್ವಶಕ್ತಿ (800 ಎನ್‌ಎಂ) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ ಎಂಟು ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಜತೆಗೆ ಆಲ್ ವೀಲ್ ಡ್ರೈವ್ ಹೊಂದಿರಲಿದೆ.
ಆಲ್ ನ್ಯೂ ರೋಲ್ಸ್ ರಾಯ್ಸ್ ವ್ರೈತ್ ಕೇವಲ 4.6 ಸೆಕೆಂಡುಗಳಲ್ಲಿ ಗಂಟೆಗೆ 0-100 ಕೀ.ಮೀ. ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ. ಇದರಲ್ಲಿ ಡೈನಾಮಿಕ್ ಟ್ರಾನ್ಸ್‌ಮಿಷನ್, ಜಿಪಿಎಸ್ ಮ್ಯಾಪಿಂಗ್, ಎಲ್‍ಇಡಿ ಲ್ಯಾಂಪ್‌ಗಳಂತಹ ಆಧುನಿಕ ತಂತ್ರಜ್ಞಾನಗಳನ್ನು ಆಳವಡಿಸಲಾಗಿದೆ.
ಇನ್ನು ಭಾರತದಲ್ಲಿ ಬಿಡುಗಡೆಯಾಗಲಿರುವ ಅತ್ಯಂತ ದುಬಾರಿ ರೋಲ್ಸ್ ರಾಯ್ಸ್ ವ್ರೈತ್ ಸರಿ ಸುಮಾರು ಐದು ಕೋಟಿ ಅಸುಪಾಸಿನಲ್ಲಿ ಲಭ್ಯವಾಗುವ ನಿರೀಕ್ಷೆಯಿದೆ.


Click it and Unblock the Notifications









