ಕೋಟಿ ಬೆಳೆಬಾಳುವ ರೋಲ್ಸ್ ರಾಯ್ಸ್ ಭಾರತದಲ್ಲಿ ಲಾಂಚ್
ಜಗತ್ತಿನ ಅತಿ ದುಬಾರಿ ಕಾರುಗಳಲ್ಲಿ ಒಂದಾಗಿರುವ 4.4 ಕೋಟಿ ಬೆಳೆಬಾಳುವ ರೋಲ್ಸ್ ರಾಯ್ಸ್ ವ್ರೈತ್ ಭಾರತಕ್ಕೆ ಭರ್ಜರಿ ಎಂಟ್ರಿ ಕೊಟ್ಟಿದೆ. ಲಗ್ಷುರಿ ಕಾರುಗಳ ಪಟ್ಟಿಗೆ ಸೇರಿರುವ ರೋಲ್ಸ್ ರಾಯ್ಸ್‌ನ ದುಬಾರಿ ವ್ರೈತ್, ಅತ್ಯಂತ ಶಕ್ತಿಶಾಲಿ ಕಾರಾಗಿದೆ.
ನೂತನ ರೋಲ್ಸ್ ರಾಯ್ಸ್ ವ್ರೈತ್‌ನಲ್ಲಿ 6.6 ಲೀಟರ್ ಟ್ವಿನ್ ಟರ್ಬೊ ವಿ12 ಎಂಜಿನ್ ಎಂಜಿನ್ ಆಳವಡಿಸಲಾಗಿದ್ದು, ಇದು 625 ಪಿಎಸ್ ಉತ್ಪಾದಿಸುವ (800ಎನ್‌ಎಂ ಟರ್ಕ್ಯೂ) ಸಾಮರ್ಥ್ಯ ಹೊಂದಿದೆ. ಹಾಗೆಯೇ 8 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಹೊಂದಿದೆ.

ಇದರ ಹೊಸ ಗೇರ್ ತಂತ್ರಜ್ಞಾನವು ಜಿಪಿಎಸ್ ಮುಖಾಂತರ ರಸ್ತೆ ಹಾಗೂ ಟ್ರಾಫಿಕ್ ಬದಲಾವಣೆಗೆ ಅನುಸಾರವಾಗಿ ಕೆಲಸ ನಿರ್ವಹಿಸಲಿದೆ. ಇನ್ನು ಕೇವಲ 4.6 ಸೆಕೆಂಡುಗಳಲ್ಲಿ 0-100 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿದೆ.
ನೂತನ ರೋಲ್ಸ್ ರಾಯ್ಸ್ ವ್ರೈತ್ 2.4 ಟನ್ ತೂಕವನ್ನು ಹೊಂದಿದೆ. ಇದು ಎಲ್ಲ ಹಂತದಲ್ಲಿಯೂ ಚಾಲಕ ಹಾಗೂ ಪ್ರಯಾಣಿಕರಿಗೆ ಅದ್ಭುತ ಅನುಭವ ನೀಡಲಿದೆ.


Click it and Unblock the Notifications









