ಶಾಂಘೈನಲ್ಲಿ ಹುಂಡೈ ಮಿಸ್ಟ್ರಾ ಕಾನ್ಸೆಪ್ಟ್ ಅನಾವರಣ
ಚೀನಾದ ಶಾಂಘೈನಲ್ಲಿ ನಡೆದ ಪ್ರತಿಷ್ಠಿತ ಮೋಟಾರ್ ಶೋದಲ್ಲಿ, ಹ್ಯುಂಡೈ ನೂತನ ಮಿಸ್ಟ್ರಾ ಕಾನ್ಸೆಪ್ಟ್ (Mistra) ಕಾರನ್ನು ಅನಾವರಣಗೊಳಿಸಿದೆ. ಪ್ರಸ್ತುತ ಕಾರು ನಿಕಟ ಭವಿಷ್ಯದಲ್ಲಿ ಚೀನಾ ಮಾರುಕಟ್ಟೆಯನ್ನು ಅಪ್ಪಳಿಸಲಿದೆ. ಉತ್ಪಾದಕ ವರ್ಷನ್‌ನಲ್ಲೂ ಇದೇ ಹೆಸರು ಬಳಕೆ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ.
ಹ್ಯುಂಡೈ ಹೊಸ ಮಿಸ್ಟ್ರಾ ಕಾರು, ಸೊನಾಟಾ ಹಾಗೂ ಎಲಂಟ್ರಾ ಆವೃತ್ತಿಗಳ ಮಧ್ಯೆ ಕಾಣಿಸಿಕೊಳ್ಳಲಿದೆ. ಈ ಮೂಲಕ ಚೀನಾದ ಮಿಡ್ ಸೈಜ್ ಸೆಗ್ಮೆಂಟ್‌ನಲ್ಲಿ ಹ್ಯುಂಡೈಗೆ ತನ್ನ ಮಾರುಕಟ್ಟೆ ಉಳಿಸಿಕೊಳ್ಳುವಲ್ಲಿ ನೆರವಾಗಲಿದೆ.
ನೂತನ ಮಿಸ್ಟ್ರಾ, 4710ಎಂಎಂ ಉದ್ದ, 1820 ಎಂಎಂ ಅಗಲ ಹಾಗೂ 2770ಎಂಎಂ ವೀಲ್ ಬೇಸ್ ಹೊಂದಿದೆ. ಹಾಗೆಯೇ ನಾಲ್ಕು ಡೋರ್ ಮಿಸ್ಟ್ರಾ ಸ್ಪೋರ್ಟಿ ಲುಕನ್ನು ಪ್ರಸ್ತುತಪಡಿಸುತ್ತಿದೆ.
ಪ್ರಮುಖವಾಗಿಯೂ 20ರಿಂದ 30ರ ಹರೆಯದ ಯುವ ಪೋಷಕರನ್ನು ಮಿಸ್ಟ್ರಾ ಟಾರ್ಗೆಟ್ ಮಾಡುತ್ತಿದೆ. ಅಂದ ಹಾಗೆ ಹ್ಯುಂಡೈ ಮಿಸ್ಟ್ರಾ ಭಾರತ ಮಾರುಕಟ್ಟೆಯನ್ನು ಯಾವಾಗ ತಲುಪಲಿದೆ ಎಂಬುದು ಕಾರು ಉತ್ಸಾಹಿಗಳ ನಿರೀಕ್ಷೆಗೆ ಕಾರಣವಾಗಿದೆ.


Click it and Unblock the Notifications
