ನೂತನ ಸ್ಕೋಡಾ ಯೆಟಿ ಎಟಿವಿ ಸದ್ಯದಲ್ಲೇ ಬಿಡುಗಡೆ
ಮುಂಬರುವ ಫ್ರಾಂಕ್‌ಫರ್ಟ್ ಆಟೋ ಶೋದಲ್ಲಿ ಅನಾವರಣಗೊಳ್ಳಲಿರುವ ನೂತನ ಸ್ಕೋಡಾ ಯೆಟಿ ತದಾ ಬಳಿಕ ಯುರೋಪ್ ಖಂಡದಲ್ಲಿ ಬಿಡುಗಡೆಯಾಗಲಿದೆ. ಚೆಕ್ ಗಣರಾಜ್ಯದ ಈ ಕಾಂಪಾಕ್ಟ್ ಎಸ್‌ಯುವಿ ಕಾರು ಒಟ್ಟು ಎರಡು ವೆರಿಯಂಟ್‌ಗಳಲ್ಲಿ ಆಗಮನವಾಗಲಿದೆ. ಇದರಲ್ಲಿ ನಗರ ಪ್ರದೇಶ ಹಾಗೂ ಇನ್ನೊಂದು ಆಫರೋಡ್ ವರ್ಷನ್ ಇರಲಿದೆ.
ಎಲ್ಲ ನೂತನ ಮಾಡೆಲ್‌ಗಳಂತೆ ಸ್ಕೋಡಾ ಯೆಟಿ ಮುಂಭಾಗ ಹಿಂಭಾಗ ವಿನ್ಯಾಸದಲ್ಲಿ ಬದಲಾವಣೆ ಕಂಡುಬರಲಿದೆ. ಇದು ನೂತನ ಅಲಾಯ್ ವೀಲ್ಸ್, ಪರಿಷ್ಕೃತ ಇಂಟಿರಿಯರ್ ಫೀಚರ್ಸ್‌ಗಳನ್ನು ಒಳಗೊಂಡಿರಲಿದೆ. ನೂತನ ಡೇ ಡೈಮ್ ರನ್ನಿಂಗ್ ಹೆಡ್‌ಲೈಟ್‌ಗಳು ಹಿಂದಿನ ಆವೃತ್ತಿಯನ್ನು ಮೀರಿಸಲಿದೆ. ಹಾಗೆಯೇ ವಿನೂತನ ಟೈಲ್ ಲೈಟ್‌ಗಳು ಹೆಚ್ಚು ಆಕರ್ಷಕವಾಗಿದೆ. ಇದರ ಜತೆಗೆ ಪರಿಣಾಮಕಾರಿ ಅಲಾಯ್ ವೀಲ್ ಹೊಂದಿದೆ.
ಇದೇ ಮೊದಲ ಬಾರಿಗೆ ಅರ್ಬನ್ ಹಾಗೂ ಆಫ್ ರೋಡ್‌ಗಳೆಂಬ ಎರಡು ವರ್ಷನ್‌ಗಳಲ್ಲಿ ಸ್ಕೋಡಾ ಯೆಟಿ ಆಗಮನವಾಗುತ್ತಿದೆ. ಅಂದ ಹಾಗೆ ಏಳು ಎಂಜಿನ್ ಆಯ್ಕೆಗಳಲ್ಲಿ ಸ್ಕೋಡಾ ಯೆಟಿ ಆಗಮನವಾಗುತ್ತಿದೆ. ಇದರಲ್ಲಿ ನಾಲ್ಕು ಡೀಸೆಲ್ ಎಂಜಿನ್‌ಗಳು ಸೇರಿವೆ. ಇದು 6, 7 ಸ್ಪೀಡ್ ಜತೆ ಡಬಲ್ ಕ್ಲಚ್ ಗೇರ್ ಬಾಕ್ಸ್ ಹೊಂದಿರಲಿದೆ.
ಅತ್ಯಂತ ಹೆಚ್ಚು ಪರಿಸರ ಸ್ನೇಹಿ ಎನಿಸಿಕೊಂಡಿರುವ 1.6 ಲೀಟರ್ ಗ್ರೀನ್ ಲೈನ್ ಡೀಸೆಲ್ ಎಂಜಿನ್ 105 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ ಖರೀದಿಗಾರರಿಗೆ ಫೋರ್ ಅಥವಾ ಟು ವೀಲ್ ಡ್ರೈವ್ ಆಯ್ಕೆ ಮಾಡಬಹುದಾಗಿದೆ. ಅಂತೆಯೇ ರಿಯರ್ ವ್ಯೂ ಕ್ಯಾಮೆರಾ ಪಾರ್ಕಿಂಗ್ ಅಸ್ಟಿಸ್ಟ್ ಹೊಂದಿರುವ ಮೊದಲ ಸ್ಕೋಡಾ ಮಾದರಿ ಎನಿಸಿಕೊಳ್ಳಲಿದೆ. ಇನ್ನು ದರದ ಬಗ್ಗೆ ಯಾವುದೇ ಮಾಹಿತಿಗಳು ಹೊರಬಂದಿಲ್ಲ. ನೂತನ ಸ್ಕೋಡಾ ಯೆಟಿ 2014ರಲ್ಲಿ ಭಾರತ ಪ್ರವೇಶಿಸುವ ಸಾಧ್ಯತೆಯಿದೆ.


Click it and Unblock the Notifications









