ಸ್ಕೋಡಾ ವಿಶೇಷ ಆವೃತ್ತಿ ರಾಪಿಡ್ leisure ಲಾಂಚ್
ಎಂಟ್ರಿ ಲೆವೆಲ್ ಸಡಾನ್ ರಾಪಿಡ್ ಯಶಸ್ಸನ್ನು ಆಚರಿಸಿಕೊಳ್ಳುತ್ತಿರುವ ಸ್ಕೋಡಾ ಆಟೋ ಇಂಡಿಯಾ, ನೂತನ ಸ್ಪೆಷಲ್ ಎಡಿಷನ್ ರಾಪಿಡ್ leisure ಕಾರನ್ನು ಲಾಂಚ್ ಮಾಡಿದೆ. ಇದರ ದೆಹಲಿ ಎಕ್ಸ್ ಶೋ ರೂಂ ದರ 7.79 ಲಕ್ಷ ರು.ಗಳಾಗಿವೆ.
ನೂತನ ರಾಪಿಡ್ leisure ವಿಶೇಷ ಆವೃತ್ತಿಯು 1.6 ಪೆಟ್ರೋಲ್ (ಆಟೋಮ್ಯಾಟಿಕ್ ಹಾಗೂ ಮ್ಯಾನುವಲ್ ಟ್ರಾನ್ಸ್‌ಮಿಷನ್) ಮತ್ತು ಡೀಸೆಲ್ (ಮ್ಯಾನುವಲ್ ಟ್ರಾನ್ಸ್‌ಮಿಷನ್) ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಇದರ ಪೆಟ್ರೋಲ್ ಹಾಗೂ ಡೀಸೆಲ್ ವೆರಿಯಂಟ್‌ಗಳು ತಲಾ 77 ಕೆಡಬ್ಲ್ಯು ಪವರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.
ದರ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ):
- 1.6 ಎಂಪಿಐ ಮ್ಯಾನುವಲ್- 7.79 ಲಕ್ಷ ರು.
- 1.6 ಎಂಪಿಐ ಆಟೋಮ್ಯಾಟಿಕ್- 8.79 ಲಕ್ಷ ರು.
- 1.6 ಟಿಡಿಐ ಮ್ಯಾನುವಲ್- 9.06 ಲಕ್ಷ ರು.
ನೂತನ ಸ್ಕೋಡಾ ರಾಪಿಡ್ leisure ವಿಶೇಷ ಆವೃತ್ತಿಯು ಪೋರ್ಟಬಲ್ ನೇವಿಗೇಷನ್ ಸಿಸ್ಟಂ, ರಿಯರ್ ವ್ಯೂ ಕ್ಯಾಮೆರಾ, ರಿಯರ್ ಪಾರ್ಕಿಂಗ್ ಸೆನ್ಸಾರ್, 15 ಇಂಚು ಅಲಾಯ್ ವೀಲ್, ಡೋರ್ ಸಿಲ್ ಕವರ್ ಹಾಗೂ ಲೆಥರ್ ಸೀಟ್ ಕವರ್‌ಗಳಂತಹ ವಿಶೇಷ ವೈಶಿಷ್ಟ್ಗಗಳನ್ನು ಪಡೆದುಕೊಳ್ಳಲಿದೆ. ಈ ಆಫರ್ ನಿಗದಿತ ಅವಧಿಯ ವರಗೆ ಮಾತ್ರ ಲಭ್ಯವಾಗಲಿದೆ.
ಸ್ಕೋಡಾ ಆಟೋ ಇಂಡಿಯಾ ದೇಶದಲ್ಲಿ ಐದು ಮಾದರಿಗಳನ್ನು ಮಾರಾಟ ಮಾಡುತ್ತಿವೆ. ಅವುಗಳೆಂದರೆ ಸ್ಕೋಡಾ ಸೂಪರ್ಬ್, ಸ್ಕೋಡಾ ಲೌರಾ, ಸ್ಕೋಡಾ ಫ್ಯಾಬಿಯಾ, ಸ್ಕೋಡಾ ಯೆಟಿ ಹಾಗೂ ಸ್ಕೋಡಾ ರಾಪಿಡ್.


Click it and Unblock the Notifications









