ದೊಡ್ಡ ಎಸ್‌ಯುವಿ, ಹ್ಯಾಚ್‌ಬ್ಯಾಕ್ ಸ್ಕೋಡಾ ಗುರಿ
ಮುಂದಿನ ದಿನಗಳಲ್ಲಿ ದೊಡ್ಡ ಎಸ್‌ಯುವಿ ಹಾಗೂ ಹ್ಯಾಚ್‌ಬ್ಯಾಕ್ ಕಾರು ಲಾಂಚ್ ಮಾಡಲು ಸ್ಕೋಡಾ ಗುರಿಯಿರಿಸಿಕೊಂಡಿದೆ. ಇದು ಯೆಟಿ ಕ್ರಾಸೋವರ್‌ಗಿಂತಲೂ ದೊಡ್ಡದಾಗಿರಲಿದೆ. 2018ರ ವೇಳೆಗೆ ಫೋಕ್ಸ್‌ವ್ಯಾಗನ್ ಜಗತ್ತಿನ ಅತಿ ದೊಡ್ಡ ವಾಹನ ತಯಾರಕ ಸಂಸ್ಥೆ ಎನಿಸಿಕೊಳ್ಳುವ ಸಿದ್ಧತೆ ನಡೆಸುತ್ತಿರುವಂತೆಯೇ ಸ್ಕೋಡಾದಿಂದ ಇಂತಹದೊಂದು ನಡೆ ಕಂಡುಬಂದಿದೆ.
ಭಾರತದ ಹೊರತಾಗಿ ಸ್ಕೋಡಾ ಯೆಟಿ ವಿಶ್ವದೆಲ್ಲೆಡೆ ಉತ್ತಮ ಪ್ರಕಿಕ್ರಿಯೆ ಗಿಟ್ಟಿಸಿಕೊಂಡಿತ್ತು. ಇದೇ ರೀತಿಯಲ್ಲಿ ದೊಡ್ಡ ಎಸ್‌ಯುವಿ ಕಾರಿಗೂ ಉತ್ತಮ ಪ್ರತಿಕ್ರಿಯೆ ಗಿಟ್ಟಿಸಿಕೊಳ್ಳುವ ನಿರೀಕ್ಷೆಯಲ್ಲಿದೆ. ಇದು ಫೋಕ್ಸ್‌ವ್ಯಾಗನ್ ಎಂಕ್ಯೂಬಿ ಫ್ಲ್ಯಾಟ್ ಫಾರ್ಮ್‌ನಲ್ಲಿ ನಿರ್ಮಾಣವಾಗಲಿದೆ.
ಹಾಗೆಯೇ ರಾಪಿಡ್ ಸೆಡಾನ್ ತಲಹದಿಯಲ್ಲಿ ನೂತನ ಫೈವ್ ಡೋರ್ ಹ್ಯಾಚ್‌ಬ್ಯಾಕ್ ಕಾರಿನತ್ತವೂ ಗಮನ ಕೇಂದ್ರಿಕರಿಸಿದೆ. ಪ್ರಸಕ್ತ ಸಾಲಿನಲ್ಲಿ ಸಾಗಲಿರುವ ಫ್ರಾಂಕ್‌ಫರ್ಟ್ ಆಟೋ ಶೋದಲ್ಲಿ ಇದು ಪ್ರದರ್ಶನವಾಗಲಿದೆ.
ಹಾಗಿದ್ದರೂ ದೊಡ್ಡ ಎಸ್‌ಯುವಿ ಭಾರತ ಪ್ರವೇಶ ಪಡೆಯುವ ಸಾಧ್ಯತೆ ಕಡಿಮೆಯಾಗಿದೆ. ಸ್ಕೋಡಾ ಯೆಟಿ ಭಾರತದಲ್ಲಿ ನಿರೀಕ್ಷಿಸಿದಷ್ಟು ಯಶ ಕಂಡಿರಲಿಲ್ಲ. ಹಾಗಿದ್ದರೂ ಕಂಪನಿಯ ಮುಂದಿನ ನಡೆ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.


Click it and Unblock the Notifications









