ಆಟೋಮ್ಯಾಟಿಕ್ ವೆರಿಯಂಟ್‌ನಲ್ಲೂ ಎರ್ಟಿಗಾ ಆಗಮನ

By Nagaraja

ಮಾರುತಿ ಸುಜುಕಿ ಪೋಷಕ ಸಂಸ್ಥೆಯಾಗಿರುವ ಸುಜುಕಿ ಮೋಟಾರ್ ಕಾರ್ಪೋರೇಷನ್, ಇಂಡೋನೇಷ್ಯಾ ಮಾರುಕಟ್ಟೆಗೆ ತನ್ನ ಜನಪ್ರಿಯ ಎರ್ಟಿಗಾ ಕಾರಿನ ಆಟೋಮ್ಯಾಟಿಕ್ ವೆರಿಯಂಟ್ ಪರಿಚಯಿಸಿದೆ.

ವರ್ಷದ ಆರಂಭದಲ್ಲಷ್ಟೇ ಎರ್ಟಿಗಾ ಫೇಸ್‌ಲಿಪ್ಟ್ ವರ್ಷನ್ ಲಾಂಚ್ ಮಾಡಲಾಗಿತ್ತು. ಪ್ರಸ್ತುತ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಮ್ಯಾನುವಲ್ ಗೇರ್ ಬಾಕ್ಸ್‌ನಲ್ಲಿ ಮಾತ್ರ ಲಭ್ಯವಿದೆ. ಹಾಗಾಗಿ ನಿಕಟ ಭವಿಷ್ಯದಲ್ಲಿ ಆಟೋಮ್ಯಾಟಿಕ್ ವರ್ಷನ್ ದೇಶದ ಮಾರುಕಟ್ಟೆಗೂ ಲಗ್ಗೆಯಿಡುವ ನಿರೀಕ್ಷೆಯಿದೆ.

ಕಂಪ್ಲೀಟ್ ನಾಕ್ಡ್ ಡೌನ್ (ಸಿಕೆಡಿ) ಮುಖಾಂತರ ಭಾರತದಿಂದ ಆಮದು ಮಾಡಲಾದ ಎರ್ಟಿಗಾ ಮಾಡೆಲ್‌ಗಳನ್ನು ಇಂಡೋನೇಷ್ಯಾದಲ್ಲಿ ಮಾರಾಟ ಮಾಡಲಾಗುತ್ತಿದೆ. ಇದೀಗ ಹೊಸ ಎರ್ಟಿಗಾ ಫೈವ್ ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಗೇರ್ ಬಾಕ್ಸ್‌ನಲ್ಲಿ ಲಭ್ಯವಿರಲಿದೆ. ಹಾಗೆಯೇ 1.4 ಲೀಟರ್ ಕೆ ಸಿರೀಸ್ ಎಂಜಿನ್‌ನಿಂದ ನಿಯಂತ್ರಿಸ್ಪಡಲಿದೆ.

ಅಂದ ಹಾಗೆ ಇಂಡೋನೇಷ್ಯಾ ಮಾರುಕಟ್ಟೆಗೆ ಎರ್ಟಿಗಾ ಎಂಪಿವಿ ಕಾರಿನ ಎರಡು ವರ್ಷನ್‌ಗಳನ್ನು ಪರಿಚಯಿಸಲಾಗಿದೆ. ಬೇಸ್ ವೆರಿಯಂಟ್ ಮೊದಲ ಮಾಡೆಲ್ ದರ 6.6 ಲಕ್ಷ ರು.ಗಳಾಗಿವೆ. ಹಾಗೆಯೇ ಇನ್ನೊಂದು ಮಾಡೆಲ್ ದರ 10.26 ಲಕ್ಷ ರು.ಗಳಾಗಿವೆ. ಹಾಗಿದ್ದರೂ ಭಾರತ ಮಾರುಕಟ್ಟೆಗೆ ಯಾವಾಗ ಪ್ರವೇಶ ಪಡೆಯಲಿದೆ ಎಂಬುದರ ಬಗ್ಗೆ ಕಂಪನಿಯಿಂದ ನಿಖರ ಮಾಹಿತಿ ಲಭಿಸಿಲ್ಲ.

More from DriveSpark

Article Published On: Monday, May 6, 2013, 12:56 [IST]
English summary
Suzuki Motor Corporation, the parent firm of the country’s largest passenger car maker Maruti Suzuki, has introduced a new automatic variant of its Ertiga in the Indonesian auto market.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+