ಹೊಸ ಲಾಂಚ್ ಟಾಟಾ ಕುಸಿತದಿಂದ ಪಾರು ಮಾಡಲಿದೆಯೇ?

By Nagaraja

ದೇಶದ ಮುಂಚೂಣಿಯ ವಾಹನ ತಯಾರಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್ 2013 ಮೇ ತಿಂಗಳ ಮಾರಾಟದಲ್ಲೂ ಕುಸಿತವನ್ನು ಅನುಭವಿಸಿದೆ. ಇದೀಗ ನೂನತ ಲಾಂಚ್ ಟಾಟಾ ಕುಸಿತದಿಂದ ಪಾರು ಮಾಡಲಿದೆಯೇ ಎಂಬುದು ಪ್ರಶ್ನೆಯ ವಿಷಯವಾಗಿದೆ.

ಟಾಟಾ ಮೋಟಾರ್ಸ್ ಮೇ ತಿಂಗಳಲ್ಲಿ ಒಟ್ಟು 49,304 ಯುನಿಟ್ ಮಾತ್ರ ಮಾರಾಟ ಕಂಡಿದೆ. ಇದು ಕಳೆದ ವರ್ಷ ಇದೇ ಅವಧಿಗೆ ಹೋಲಿಸಿ ನೋಡಿದಾಗ ಶೇಕಡಾ 23.37ರಷ್ಟು ಕುಸಿತ ಕಂಡಿದೆ. ಕಳೆದ ಬಾರಿ 64,347 ಯುನಿಟ್ ಮಾರಾಟ ದಾಖಲಿಸಿತ್ತು.

ಪ್ರಯಾಣಿಕ ವಿಭಾಗವನ್ನು ಪರಿಗಣಿಸಿದರೆ 2013 ಮೇ ತಿಂಗಳಲ್ಲಿ ಟಾಟಾ ಮೋಟಾರ್ಸ್ ಶೇಕಡಾ 45.69ರಷ್ಟು ಭಾರಿ ಕುಸಿತ ಅನುಭವಿಸಿದ್ದು, 11,134 ಯುನಿಟ್ ಮಾತ್ರ ಮಾರಾಟವಾಗಿದೆ. ಇದು ಕಳೆದ ವರ್ಷ 20,503 ಯುನಿಟ್‌ಗಳಾಗಿದ್ದವು. ಈ ಪೈಕಿ ನ್ಯಾನೋ, ಇಂಡಿಕಾ ಹಾಗೂ ಇಂಡಿಗೊ ಜತೆಯಾಗಿ 8,927 ಯುನಿಟ್ ಸೇಲಾಗಿದ್ದರೆ ಸುಮೋ, ಸಫಾರಿ, ಆರಿಯಾ ಹಾಗೂ ವೆನ್ಚುರ್ 2,207 ಯುನಿಟ್ ಮಾರಾಟವಾಗಿದ್ದವು.

ವಾಣಿಜ್ಯ ವಿಭಾಗದ ವಾಹನದಲ್ಲೂ ಟಾಟಾ ಮೋಟಾರ್ಸ್ 2013 ಮೇ ತಿಂಗಳಲ್ಲಿ ಶೇಕಡಾ 13.44ರಷ್ಟು ಕುಸಿತ ಅನುಭವಿಸಿದೆ. ಕಳೆದ ಬಾರಿ 39,625 ಯುನಿಟ್‌ಗಳಿದ್ದ ಮಾರಾಟವು ಈ ಬಾರಿ 34,296 ಯುನಿಟ್‌ಗಳಿಗೆ ಇಳಿಕೆ ಕಂಡಿದೆ. ಈ ಪೈಕಿ ಹಗುರ ವಾಣಿಜ್ಯ ವಾಹನವು (ಎಲ್‌ಸಿವಿ) 24,173 ಯುನಿಟ್ ಹಾಗೂ ಎಂ ಮತ್ತು ಎಚ್‌ಸಿವಿ (ಹೆವಿ ಕಮರ್ಷಿಯಲ್ ವೆಹಿಕಲ್) 10,123 ಯನಿಟ್ ಮಾರಾಟ ಗಿಟ್ಟಿಸಿಕೊಂಡಿದೆ.

ರಫ್ತು ವಿಭಾಗದಲ್ಲೂ ಟಾಟಾ ಮೋಟಾರ್ಸ್ ಶೇಕಡಾ 8.17ರಷ್ಟು ಕುಸಿತ ಅನುಭವಿಸಿರುವುದು ಮತ್ತೊಂದು ಆಘಾತ ನೀಡಿದಂತಾಗಿದೆ. ಈ ಅವಧಿಯಲ್ಲಿ 3,874 ಯನಿಟ್ ಮಾರಾಟ ಕಂಡುಕೊಂಡಿದ್ದರೆ ಕಳೆದ ಬಾರಿಯಿದು 4,219 ಯುನಿಟ್‌ಗಳಾಗಿದ್ದವು.

ಈ ಎಲ್ಲ ಪರಿಸ್ಥಿತಿಯನ್ನು ನಿಭಾಯಿಸಲು ನೂತನ ಕಾರುಗಳ ಲಾಂಚ್ ಕಂಪನಿಗೆ ನೆರವಾಗಲುವ ನಿರೀಕ್ಷೆಯಿದೆ. ಟಾಟಾ ನ್ಯಾನೋ ಹೊಸ ವರ್ಷನ್ ಸದ್ಯದಲ್ಲೇ ಬಿಡುಗಡೆಯಾಗುವ ಸಾಧ್ಯತೆಯಿದೆ. ಒಟ್ಟಿನಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಟಾಟಾ ನಡೆ ಹೇಗಿರಲಿದೆ ಎಂಬುದು ಕಾರು ಪ್ರಿಯರಲ್ಲಿ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

More from DriveSpark

Article Published On: Tuesday, June 4, 2013, 12:07 [IST]
English summary
Tata Motors have reported a 23.37% crash in sales for the month of May 2013. Sales decline was experienced across total vehicle sales which stood at 49,304 units during the month.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+