ಪ್ರಸಕ್ತ ತಿಂಗಳಲ್ಲೇ ಟಾಟಾದಿಂದ 3 ಫೇಸ್‌ಲಿಫ್ಟ್ ಮಾಡೆಲ್ ಎಂಟ್ರಿ

By Nagaraja

ಮಾರಾಟ ತೀರಾ ಹದೆಗೆಟ್ಟಿರುವ ಹಿನ್ನಲೆಯಲ್ಲಿ ಗಂಭೀರ ಚಿಂತನೆಯಲ್ಲಿ ತೊಡಗಿರುವ ದೇಶದ ಮುಂಚೂಣಿಯ ಕಾರು ತಯಾರಕ ಸಂಸ್ಥೆಗಳಲ್ಲಿ ಒಂದಾಗಿರುವ ಟಾಟಾ ಮೋಟಾರ್ಸ್, ಪ್ರಸಕ್ತ ಸಾಗುತ್ತಿರುವ ಜೂನ್ ತಿಂಗಳಲ್ಲೇ ಮೂರು ನೂತನ ಫೇಸ್‌ಲಿಫ್ಟ್ ವರ್ಷನ್‌ಗಳನ್ನು ಲಾಂಚ್ ಮಾಡಲು ಯೋಜನೆ ಹಾಕಿಕೊಂಡಿದೆ.

ವರದಿಗಳ ಪ್ರಕಾರ ಇಂಡಿಗೊ ಇಸಿಎಸ್, ಸುಮೋ ಗೋಲ್ಡ್ ಹಾಗೂ ವಿಶ್ವದ ಅಗ್ಗದ ಕಾರಾದ ನ್ಯಾನೋ ಫೇಸ್‌ಲಿಫ್ಟ್ ವರ್ಷನ್ ಸದ್ಯದಲ್ಲೇ ಮಾರುಕಟ್ಟೆಗೆ ಪರಿಚಯವಾಗಲಿದೆ. ಈ ಮೂಲಕ ಟಾಟಾ ಮೋಟಾರ್ಸ್ ಮಾರಾಟಕ್ಕೆ ಉತ್ತೇಜನೆ ನೀಡುವ ಪ್ರಯತ್ನ ಮಾಡಲಿದೆ.

ಭಾರತೀಯ ಪ್ರಯಾಣಿಕ ಮಾರುಕಟ್ಟೆಯಲ್ಲಿ ತನ್ನದೇ ಸ್ಥಾನ ಉಳಿಸಿಕೊಳ್ಳುವಲ್ಲಿ ಟಾಟಾ ಮೋಟಾರ್ಸ್ ಯಶಸ್ವಿಯಾಗಿದೆ. ಇದೀಗ ಮತ್ತೆ ಜನಪ್ರಿಯ ಮಾಡೆಲ್‌ಗಳ ಪರಿಷ್ಕೃತ ಆವೃತ್ತಿ ಪರಿಚಯಿಸಲು ಮುಂದಾಗುತ್ತಿದೆ. ಇದರ ಜತೆ ಟಾಟಾ ಸಫಾರಿ ಸ್ಟ್ರೋಮ್‌ಗೆ ವಿಶೇಷ ಆಫ್ ರೋಡ್ ಪ್ಯಾಕೇಜ್ ಒದಗಿಸುವ ಯೋಜನೆ ಕೂಡಾ ಕಂಪನಿ ಮುಂದಿದೆ.

ಟಾಟಾ ಸಫಾರಿ ಸ್ಟ್ರೋಮ್ 4x4 ವಿಶೇಷ ಪ್ಯಾಕೇಜ್ ಸಾಹಸಿ ಚಾಲಕರನ್ನು ಉತ್ತೇಜಿಸಲಿದ್ದು, ಆಫ್ ರೋಡಿಂಗ್ ರೈಡಿಂಗ್‌ಗೆ ಹೆಚ್ಚು ಸೂಕ್ತವೆನಿಸಲಿದೆ. ಪರಿಷ್ಕೃತ ಇಂಡಿಗೊ ಇಸಿಎಸ್ ಕೆಲವೊಂದು ಕಾಸ್ಮೆಟಿಕ್ ಬದಲಾವಣೆಯೊಂದಿಗೆ ಆಗಮಿಸಲಿದೆ. ಮಾರುತಿ ಸ್ವಿಫ್ಟ್ ಡಿಜೈರ್, ಹೋಂಡಾ ಅಮೇಜ್, ಷೆವರ್ಲೆ ಸೈಲ್ ಹಾಗೂ ಫೋರ್ಡ್ ಕ್ಲಾಸಿಕ್ ಪ್ರಮುಖ ಸ್ಪರ್ಧಾಳುಗಳಾಗಿರುವುದರಿಂದ ಇಂಟಿರಿಯರ್ ಬದಲಾವಣೆ ಹೇಗಿರಲಿದೆ ಎಂಬುದು ಬಹಳ ಮುಖ್ಯವೆನಿಸಲಿದೆ.

ಇನ್ನು ಟಾಟಾ ಸುಮೋ ಗೋಲ್ಡ್ ಎಸ್‌ಯುವಿಯಲ್ಲಿ ಇಂಟಿರಿಯರ್ ಸೇರಿದಂತೆ ಎಕ್ಸ್‌ಟೀರಿಯರ್ ವಿನ್ಯಾಸದಲ್ಲಿ ಬದಲಾವಣೆ ಕಂಡುಬರಲಿದೆ. ಹಾಗೆಯೇ ಆರಾಮದಾಯಕ ಪಯಣಕ್ಕಾಗಿ ಹೆಚ್ಚಿನ ಸೌಲಭ್ಯ ಆಳವಡಿಸಲಾಗುವುದು. ಮತ್ತೊಂದೆಡೆ ಟಾಟಾ ನ್ಯಾನೋ ಫೇಸ್‌ಲಿಫ್ಟ್ ವರ್ಷನ್ ಕೂಡಾ ಪರಿಚಯವಾಗಲಿದೆ. ಹಾಗೆಯೇ ಸಿಎನ್‌ಜಿ ಹಾಗೂ ಡೀಸೆಲ್ ವರ್ಷನ್ ನಿಕಟ ಭವಿಷ್ಯದಲ್ಲಿ ಮಾರುಕಟ್ಟೆ ಪ್ರವೇಶವಾಗಲಿದೆ.

Most Read Articles

Kannada
English summary
Tata Motors, the country's largest automobile manufacturer, is believed to have developed facelift versions of its Indigo eCS, Sumo Gold and cute small car Nano, for the Indian passenger car market. Industry experts have opined that the company is looking at new revamped models for pushing its sagging sales figures in the country.
Story first published: Friday, June 7, 2013, 12:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X