ದೀಪಾವಳಿಗೂ ಮೊದಲು ಟಾಟಾ ಆಗಲಿದೆ ದುಬಾರಿ!

By Nagaraja

ಮಾರುಕಟ್ಟೆಯಲ್ಲಿ ಕಳೆದ ಕೆಲವು ತಿಂಗಳುಗಳ ಮಾರಾಟದಲ್ಲಿ ಕಳೆಗುಂದಿರುವ ಹೊರತಾಗಿಯೂ ದೇಶದ ಅತಿದೊಡ್ಡ ವಾಹನ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್, ಮುಂಬರುವ ಹಬ್ಬದ ಆವೃತ್ತಿಗೂ ಮುನ್ನ ತನ್ನೆಲ್ಲ ಮಾಡೆಲ್‌ಗಳಿಗೆ ದರ ಏರಿಕೆಗೊಳಿಸುವ ಸಾಧ್ಯತೆಯಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಟಾಟಾ ಮೋಟಾರ್ಸ್ ಪ್ರಯಾಣಿಕ ವಾಹನಗಳ ವಾಣಿಜ್ಯ ಘಟಕದ ಹಿರಿಯ ಅಪಾಧ್ಯಕ್ಷ ಅಂಕುಶ್ ಅರೋರಾ ದೀಪಾವಳಿಗೂ ಮೊದಲು ದರ ಏರಿಕೆ ವಿಚಾರವನ್ನು ಅಲ್ಲಗಳೆಯುವಂತಿಲ್ಲ ಎಂದಿದ್ದಾರೆ.

ಜೂನ್ ತಿಂಗಳ ದೇಶದ ಕಾರು ಮಾರಾಟವು ಶೇಕಡಾ 9ರಷ್ಟು ಕುಸಿದಿತ್ತು. ಈ ಮೂಲಕ ಸತತ ಎಂಟನೇ ತಿಂಗಳಲ್ಲೂ ಹಿನ್ನಡೆ ಅನುಭವಿಸಿತ್ತು. ಕಳೆದ ವರ್ಷ ಇದೇ ಅವಧಿಯಲ್ಲಿ 1,53,450 ಯುನಿಟ್ ಮಾರಾಟವಾಗಿದ್ದರೆ ಈ ಬಾರಿಯದು 1,39,632 ಯುನಿಟ್‌ಗಳಿಗೆ ಸೀಮಿತಗೊಂಡಿತ್ತು.

ಈ ಪೈಕಿ ಟಾಟಾ ಮೋಟಾರ್ಸ್ ಶೇಕಡಾ 29.17ರಷ್ಟು ಭರ್ಜರಿ ಕುಸಿತ ದಾಖಲಿಸಿತ್ತು. ಕಳೆದ ವರ್ಷ ಇದೇ ಅವಧಿಯಲ್ಲಿ 13,595 ಯುನಿಟ್ ಸೇಲಾಗಿದ್ದರೆ ಈ ಬಾರಿಯದು 9,628 ಯುನಿಟ್‌ಗಳಿಗೆ ಇಳಿಕೆಯಾಗಿತ್ತು.

ಈ ನಡುವೆ ಟಾಟಾ ನ್ಯಾನೋ ಸೇರಿದಂತೆ ಇತರ ಆವೃತ್ತಿಗಳಿಗೆ ಎಕ್ಸ್‌ಚೇಂಜ್ ಹಾಗೂ ಇತರ ರಿಯಾಯಿತಿ ಆಫರುಗಳನ್ನು ಮುಂದಿರಿಸಿದ್ದರೂ ಮಾರಾಟದಲ್ಲಿ ಹೆಚ್ಚಿನ ಬದಲಾವಣೆಯುಂಟಾಗಿಲ್ಲ.

More from DriveSpark

Article Published On: Friday, July 26, 2013, 13:51 [IST]
English summary
Despite facing continued pressure on sales, which have been declining for months, the country's largest auto major Tata Motors Thursday said it is thinking of raising prices before the forthcoming festive season.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+