ಟಾಟಾದಿಂದ ನಿರೀಕ್ಷಿಸಿ ಸೆಡಾನ್, ಹ್ಯಾಚ್‌ಬ್ಯಾಕ್ ಕಾರು
ದೇಶದ ಅತಿದೊಡ್ಡ ವಾಹನ ತಯಾರಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್, ಹ್ಯಾಚ್‌ಬ್ಯಾಕ್ ಹಾಗೂ ನಾಲ್ಕು ಮೀಟರ್ ಉದ್ದ ಪರಿಮಿತಿಯೊಳಗಿರುವ ಸೆಡಾನ್ ಕಾರನ್ನು ಲಾಂಚ್ ಮಾಡುವ ಯೋಜನೆ ಹೊಂದಿದೆ.
ವಾಹನೋದ್ಯಮದ ಕ್ಷಣಕ್ಷಣದ ರೋಚಕ ಸುದ್ದಿಗಳಿಗಾಗಿ ಇಲ್ಲಿ ಭೇಟಿ ಕೊಡಿರಿ
ದೇಶದ ಕಾರು ಮಾರುಕಟ್ಟೆಯಲ್ಲಿ ನಾಲ್ಕನೇ ಅತಿದೊಡ್ಡ ಪ್ರಯಾಣಿಕ ಬ್ರಾಂಡ್ ಎನಿಸಿಕೊಂಡಿರುವ ಟಾಟಾ, ಪೆಟ್ರೋಲ್ ಕಾರುಗಳ ಜನಪ್ರಿಯತೆಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ವರ್ಷ ಹೊಸ ಕಾರುಗಳನ್ನು ಲಾಂಚ್ ಮಾಡುವ ಯೋಜನೆ ಹೊಂದಿದೆ.

ನೂತನ ಕಾರು 1.2 ಲೀಟರ್ ಟರ್ಬೊಚಾರ್ಜ್ಡ್ ಪೆಟ್ರೋಲ್ ಎಂಜಿನ್ ಪಡೆದುಕೊಳ್ಳಲಿದೆ. ಇದು ಆರಿಯಾ (2010-11) ಬಳಿಕ ಕಳೆದ ನಾಲ್ಕು ವರ್ಷಗಳಲ್ಲೇ ಟಾಟಾದಿಂದ ತಯಾರಾಗಲಿರುವ ಹೊಸ ಉತ್ಪನ್ನವೆನಿಸಿಕೊಳ್ಳಲಿದೆ.
ಸಮಕಾಲೀನ ಹಾಗೂ ಭವಿಷ್ಯದ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಹೊಸ ಕಾರಿನ ವಿನ್ಯಾಸವನ್ನು ರಚಿಸಲಾಗುವುದು ಎಂದು ಟಾಟಾ ಮೋಟಾರ್ಸ್ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ನಾವು ಜಾಗತಿಕ ಗ್ರಾಹಕರನ್ನು ಹೊಂದಿದ್ದು, ಹಾಗಾಗಿ ಶ್ರೇಷ್ಠ ನಿರ್ವಹಣೆಯ ಕಾರುಗಳನ್ನು ವಿತರಣೆ ಮಾಡುವುದರತ್ತ ಗಮನ ಹರಿಸಲಿದ್ದೇವೆ ಎಂದಿದ್ದಾರೆ.
ಚಾಲನಾ ಕ್ರಿಯೆ, ವಿನ್ಯಾಸ, ಮಾಹಿತಿ ಸಿಸ್ಟಂ ಎಲ್ಲವೂ ವಿಶ್ವದರ್ಜೆಯಲ್ಲಿರಲಿದೆ ಎಂದಿದ್ದಾರೆ. ಎಕ್ಸ್1 (ವಿಸ್ಟಾ) ಫ್ಲ್ಯಾಟ್‌ಫಾರ್ಮ್‌ನಲ್ಲಿ ನಿರ್ಮಾಣವಾಗಲಿರುವ ಈ ಕಾರುಗಳು ಫಾಲ್ಕನ್ 4 ಮತ್ತು ಫಾಲ್ಕನ್ 5 ಎಂದು ಹೆಸರಿಸಿಕೊಳ್ಳಲಿದೆ. ಇದು 4.75ರಿಂದ 7.5 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ. ಟಾಟಾ ವಿಸ್ಟಾ ಹ್ಯಾಚ್‌ಬ್ಯಾಕ್ ಜತೆ ಗುರುತಿಸಿಕೊಳ್ಳಲಿರುವ ನೂತನ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಮಾರುತಿ ಸುಜುಕಿ ಸ್ವಿಫ್ಟ್‌ಗೆ ಪ್ರತಿಸ್ಪರ್ಧಿಯೆನಿಸಲಿದೆ.
ಇನ್ನೊಂದೆಡೆ ಹೊಸ ಬ್ರಾಂಡ್ ಹೆಸರು ಗಿಟ್ಟಿಸಿಕೊಳ್ಳಲಿರುವ ಫೋರ್ ಸಬ್ ಮೀಟರ್ ಸೆಡಾನ್ ಕಾರು ಸ್ವಿಫ್ಟ್ ಡಿಜೈರ್, ಹೋಂಡಾ ಅಮೇಝ್ ಮತ್ತು ಮುಂಬರುವ ಹ್ಯುಂಡೈ ಕಾರುಗಳಿಗೆ ಪೈಪೋಟಿ ನೀಡಲಿದೆ.


Click it and Unblock the Notifications








