ನ್ಯಾನೋ ಫೇಲ್; ಟಾಟಾದಿಂದ ಹೊಸ ಕಾಂಪಾಕ್ಟ್ ಕಾರು ಯೋಜನೆ
ಕಳೆದ ಕೆಲವು ತಿಂಗಳುಗಳಿಂದೀಚೆಗೆ ಅಗ್ಗದ ಕಾರು ನ್ಯಾನೋ ವೈಫಲ್ಯ ಅನುಭವಿಸುತ್ತಿರುವ ಹಿನ್ನಲೆಯಲ್ಲಿ ಹೊಸ ಕಾಂಪಾಕ್ಟ್ ಕಾರು ಬಿಡುಗಡೆ ಮಾಡಲು ಟಾಟಾ ಮೋಟಾರ್ಸ್ ಯೋಜನೆಯಿರಿಸಿಕೊಂಡಿದೆ.
ನ್ಯಾನೋ ಮಾರಾಟ ಕುಸಿತವನ್ನು ಗಂಭೀರವಾಗಿಯೇ ಪರಿಗಣಿಸಿರುವ ದೇಶದ ಮುಂಚೂಣಿಯ ಕಾರು ತಯಾರಕ ಸಂಸ್ಥೆಗಳಲ್ಲಿ ಒಂದಾಗಿರುವ ಟಾಟಾ ಮೋಟಾರ್ಸ್, ಭವಿಷ್ಯದತ್ತ ಸ್ಪಷ್ಟ ದೃಷ್ಟಿಕೋನವನ್ನು ಹೊಂದಿದೆ.
ಎಪ್ರಿಲ್ ತಿಂಗಳಲ್ಲಿ ಭಾರಿ ಕುಸಿತ ಅನುಭವಿಸಿದ್ದ ನ್ಯಾನೋ 948 ಯುನಿಟ್‌ಗಳನ್ನು ಮಾತ್ರ ಸೇಲ್ ಮಾಡುವಲ್ಲಿ ಯಶಸ್ವಿಯಾಗಿತ್ತು. ಇದು ನ್ಯಾನೋ ವೈಫಲ್ಯತೆಯನ್ನು ಎತ್ತಿ ಹಿಡಿಯುತ್ತಿದೆ.
ಟಾಟಾ ಮೋಟಾರ್ಸ್ ಸನಂದ್ ಪ್ಲಾಂಟ್‌ನಲ್ಲಿ ನೂತನ ಕಾಂಪಾಕ್ಟ್ ಕಾರು ಅಭಿವೃದ್ಧಿ ಹಂತದಲ್ಲಿದ್ದು, 2015 ವೇಳೆಗೆ ರಸ್ತೆಗೆ ಆಗಮಿಸುವ ನಿರೀಕ್ಷೆಯಿದೆ. ನೂತನ ಕಾರು 'X0' ಕೋಡ್ ಹೆಸರು ಪಡೆದುಕೊಂಡಿದ್ದು, ಇಂಡಿಕಾ ಪ್ಲಾಟ್ ಫಾರ್ಮ್‌ನಲ್ಲಿ ನಿರ್ಮಾಣವಾಗಲಿದೆ.


Click it and Unblock the Notifications









