ಜಾಗ್ವಾರ್ ನೆರವಿನೊಂದಿಗೆ ಟಾಟಾದಿಂದ ಸಕತ್ ಎಸ್‌ಯುವಿ
ದೇಶದ ಅತಿದೊಡ್ಡ ವಾಹನ ಉತ್ಪಾದಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್, ಗುಣಮಟ್ಟದ ಬಗ್ಗೆ ಹಲವು ಬಾರಿ ಪ್ರಶ್ನೆಗಳು ಎದಿದ್ದವು. ಆದರೆ ಇನ್ನು ಮುಂದೆ ಗ್ರಾಹಕರಲ್ಲಿ ಅಂತಹ ಭಯಭೀತಿಗಳಿಗೆ ಅವಕಾಶವಿರುವುದಿಲ್ಲ. ಯಾಕೆಂದರೆ ತನ್ನ ಅಂಗಸಂಸ್ಥೆ ಜಾಗ್ವಾರ್ ಜತೆ ಸೇರಿಕೊಳ್ಳಲಿರುವ ಟಾಟಾ ಶ್ರೇಷ್ಠ ಗುಣಮಟ್ಟದ ಕಾರುಗಳನ್ನು ನಿಕಟ ಭವಿಷ್ಯದಲ್ಲೇ ರಸ್ತೆಗಿಳಿಸಲಿದೆ.
ಐದು ವರ್ಷಗಳ ಹಿಂದೆ ಬ್ರಿಟನ್ ಮೂಲದ ಜಾಗ್ವಾರ್ ಲ್ಯಾಂಡ್ ರೋವರ್ ಐಕಾನಿಕ್ ಕಾರು ತಯಾರಕ ಸಂಸ್ಥೆಯನ್ನು ಖರೀದಿಸಿದಾಗ ಭವಿಷ್ಯದ ಟಾಟಾ ಕಾರುಗಳಲ್ಲಿ ಈ ತಂತ್ರಜ್ಞಾನ ಆಳವಡಿಕೆಯಾಗಲಿದೆ ಎಂಬುದನ್ನು ಎಲ್ಲರೂ ನಿರೀಕ್ಷಿಸಿದ್ದರು. ಆದರೆ ಅಭಿಮಾನಿಗಳ ಈ ಕನಸು ಇಲ್ಲಿಯವರೆಗೆ ನನಸಾಗಿರಲಿಲ್ಲ.
ಆದರೆ ಇದೀಗ ಸಮಯ ಹತ್ತಿರ ಬಂದಿದೆ. 2016ರ ವೇಳೆಗೆ ಟಾಟಾ ಬಿಡುಗಡೆಗೊಳಿಸಲಿರುವ ಎರಡು ಎಸ್‌ಯುವಿಗಳಲ್ಲಿ ಜಾಗ್ವಾರ್‌ನ ತಂತ್ರಜ್ಞಾನ ಆಳವಡಿಕೆಯಾಗಲಿದೆ. ಆದರೆ ಜಾಗ್ವಾರ್ ಹಾಗೆಯೇ ಟಾಟಾ ಕಾರುಗಳು ಅಷ್ಟೊಂದು ದುಬಾರಿಯೆನಿಸಿಕೊಳ್ಳಲ್ಲ. ಬದಲಾಗಿ ಭಾರತೀಯ ಗ್ರಾಹಕರನ್ನು ದೃಷ್ಟಿಯಲ್ಲಿಟ್ಟುಕೊಂಡು 10ರಿಂದ 15 ಲಕ್ಷ ರು.ಗಳ ಅಸುಪಾಸಿನಲ್ಲಿ ಎಸ್‌ಯುವಿ ಸಿದ್ಧಗೊಳ್ಳಲಿದೆ.
ಅಂದರೆ ಟಾಟಾ ಕಾರುಗಳಲ್ಲಿ ಜಾಗ್ವಾರ್ ವಿನ್ಯಾಸ, ನಿರ್ವಹಣೆ ಸೇರಿದಂತೆ ಎಲ್ಲ ಮಹತ್ವದ ಅಂಶಗಳನ್ನು ಒಳಗೊಂಡಿರಲಿದೆ. ಒಟ್ಟಿನಲ್ಲಿ ಈ ಎಲ್ಲ ಬೆಳವಣಿಗೆಗಳು ದೇಶದ ಕಾರು ಪ್ರೇಮಿಗಳ ಉತ್ಸಾಹವನ್ನು ಇಮ್ಮಡಿಗೊಳಿಸಿದೆ. ನಿಸ್ಸಂಶಯವಾಗಿಯೂ ಇದು ಮಹೀಂದ್ರ ಎಸ್‌ಯುವಿ ಕಾರುಗಳಿಗೆ ನಿಕಟ ಪ್ರತಿಸ್ಪರ್ಧಿಯೆನಿಸಲಿದೆ.


Click it and Unblock the Notifications









