ತಾಜಾತನ ಪಡೆದ ನಿಮ್ಮ ನೆಚ್ಚಿನ ಸುಮೋ ಗೋಲ್ಡ್
ದೇಶದ ಅತಿದೊಡ್ಡ ವಾಹನ ತಯಾರಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್, ತನ್ನ ಜನಪ್ರಿಯ ಕ್ರೀಡಾ ಉತ್ಪಾದಕ ವಾಹನವಾಗಿರುವ (ಎಸ್‌ಯುವಿ) ಟಾಟಾ ಸುಮೋ ಗೋಲ್ಡ್ ಹೊಸ ರೂಪ ನೀಡುವ ತಯಾರಿಯಲ್ಲಿದ್ದು, ಹೊಸ ಪರಿಷ್ಕೃತ ಆವೃತ್ತಿಯ ಬೆಲೆ ಎಂಬಿತ್ಯಾದಿ ಮಾಹಿತಿಗಳನ್ನು ಹೊರಗೆಡವಿದೆ.
ಇದರಂತೆ ನೂತನ ಟಾಟಾ ಸುಮೋ ಗೋಲ್ಡ್ ಅಪ್‌ಗ್ರೇಡ್ ವರ್ಷನ್ ಅನಾವರಣಗೊಳಿಸಲಾಗಿದ್ದು, ದೆಹಲಿ ಎಕ್ಸ್ ಶೋ ರೂಂ ಬೆಲೆ 5.93 ಲಕ್ಷ ರು.ಗಳಾಗಿರಲಿದೆ.
ಒಟ್ಟು ಐದು ವೆರಿಯಂಟ್‌ಗಳಲ್ಲಿ ಲಭ್ಯವಿರುವ ಟಾಟಾ ಸುಮೋ ಗೋಲ್ಡ್, ಉತ್ತಮ ನಿರ್ವಹಣೆಯೊಂದಿಗೆ ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣ ನೀಡುವುದರಲ್ಲಿ ಹೆಚ್ಚು ಒತ್ತು ನೀಡುತ್ತಿದೆ. ಎಂಟ್ರಿ ಲೆವೆಲ್ ಎಸ್‌ಯುವಿ ಪೈಕಿ ಅತ್ಯಂತ ಶಕ್ತಿಶಾಲಿ ಕಾರು ಎಂದೆನಿಸಿಕೊಂಡಿರುವ ಟಾಟಾ ಸುಮೋ ಗೋಲ್ಡ್, ದೇಶದ ಯುವ ಹಾಗೂ ಉತ್ಸಾಹಿ ಗ್ರಾಹಕರನ್ನು ಗುರಿಯಿಸಿಕೊಂಡಿದೆ.
ಹೊಸ ತಲೆಮಾರಿನ ಯುವಕರ ಆಸಕ್ತಿಗೆ ಅನುಗುಣವಾಗಿ ಸುಮೋ ಗೋಲ್ಡ್ ಅಭಿವೃದ್ಧಿಪಡಿಸಲಾಗಿದೆ. ಇದರಲ್ಲಿ ಮ್ಯೂಸಿಕ್ ಸಿಸ್ಟಂ, ಯುಎಸ್‌ಬಿ, ಬ್ಲ್ಯೂಟೂತ್ ಕನೆಕ್ಟಿವಿಟಿ, ಪವರ್ ವಿಂಡೋ ಮತ್ತು ಡ್ಯುಯಲ್ ಎಸಿ ಸೇರಿದಂತೆ ಅನೇಕ ವೈಶಿಷ್ಟ್ಯಗಳನ್ನು ಆಳವಡಿಸಲಾಗಿದೆ.


Click it and Unblock the Notifications
