ನ್ಯಾನೋ ದೇಶದ ನಂಬಿಕೆಗ್ರಸ್ತ ಕಾರಂತೆ; ನಿಮ್ಮ ನಿಲುವೇನು?
ಅಂದ ಹಾಗೆ ನಿಜ ಸ್ಥಿತಿ ಏನೆಂದರೆ ಮಾರುಕಟ್ಟೆಯಲ್ಲಿ ಟಾಟಾ ನ್ಯಾನೋಗೆ ಮಿಶ್ರಫಲ ದೊರಕಿದೆ. ಕೆಲವು ಗ್ರಾಹಕರು ನ್ಯಾನೋ ತಾಂತ್ರಿಕತೆ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದು, ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ಆದರೆ ಅತಿ ಚಿಕ್ಕ ಬಜೆಟ್‌ನಲ್ಲಿ ದೇಶಕ್ಕೆ ಕಾರು ಪರಿಚಯ ಮಾಡಿಕೊಟ್ಟಿರುವ ರತನ್ ಟಾಟಾ ಸಾಧನೆಯನ್ನು ಮೆಚ್ಚುಗೆ ವ್ಯಕ್ತಪಡಿಸುತ್ತಿರುವ ಇನ್ನಿತರರು ನಿಜ ಪರಿಸ್ಥಿತಿಯಲ್ಲಿ ಮಧ್ಯಮ ವರ್ಗದ ಜನರಿಗೆ ನ್ಯಾನೋ ಸೂಕ್ತ ಆಯ್ಕೆ ಎಂದು ವಾದ ಮಂಡಿಸುತ್ತಾರೆ.
ಅಂದ ಹಾಗೆ ನ್ಯಾನೋ ಬಗ್ಗೆ ನಿಮ್ಮ ನಿಲುವೇನು? ಕೆಳಗಿನ ಕಾಮೆಂಟ್ ಬಾಕ್ಸ್ ಮೂಲಕ ಪ್ರತಿಕ್ರಿಯಿಸಿರಿ...
ಬ್ರಾಂಡ್ ಟ್ರಸ್ಟ್ ರಿಪೋರ್ಟ್, ಇಂಡಿಯಾ ಸ್ಟಡಿ 2013 ಪ್ರಕಾರ ಟಾಟಾ ನ್ಯಾನೋ ದೇಶದ ಅತ್ಯಂತ ನಂಬಿಕೆಗ್ರಸ್ತ ಕಾರು ಬ್ರಾಂಡ್ ಆಗಿದೆ. ಇಲ್ಲಿ ದೇಶದ ನಂ.1 ಕಾರು ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿಯನ್ನು ಹಿಂದಿಕ್ಕಿರುವುದು ಗಮನಾರ್ಹ ಅಂಶವಾಗಿದೆ.
ದೇಶದ ಒಟ್ಟು 16 ನಗರಗಳಲ್ಲಾಗಿ ಸಮೀಕ್ಷೆಯನ್ನು ಕೈಗೊಳ್ಳಲಾಗಿತ್ತು. ಈ ಮೂಲಕ 19,000 ವೈಯಕ್ತಿಕ ಬ್ರಾಂಡ್‌ಗಳ ಬಗ್ಗೆ ಅಭಿಪ್ರಾಯ ಸಂಗ್ರಹಿಸಲಾಗಿತ್ತು.
ಒಟ್ಟಿನಲ್ಲಿ ಟಾಟಾ ನ್ಯಾನೋ ಸಿಎನ್‌ಜಿ ಹಾಗೂ ಡೀಸೆಲ್ ವರ್ಷನ್ ಇನ್ನಷ್ಟೇ ಆಗಮನವಾಗಲಿರುವುದರಿಂದ ಈ ಸಮೀಕ್ಷಾ ವರದಿ ಇನ್ನಷ್ಟು ಉತ್ಸಾಹ ತುಂಬುವಂತಾಗಿದೆ. ಈಗಾಗಲೇ ನ್ಯಾನೋಗೆ 800ಸಿಸಿ ಪವರ್‌ಫುಲ್ ಎಂಜಿನ್ ಆಳವಡಿಸುವುದಾಗಿ ಟಾಟಾ ಮೋಟಾರ್ಸ್ ಘೋಷಿಸಿದ್ದು, ಮುಂದಿನ ಕೆಲವು ತಿಂಗಳಲ್ಲಿ ಮಾರುಕಟ್ಟೆ ಪ್ರವೇಶವಾಗಲಿದೆ.
ಇನ್ನು ದೇಶದಲ್ಲಿ ಅತ್ಯಂತ ನಂಬಿಕೆಗ್ರಸ್ತ ಆಟೋಮೊಬೈಲ್ ಬ್ರಾಂಡ್ ಗೌರವಕ್ಕೆ ಜರ್ಮನಿಯ ಪ್ರೀಮಿಯಂ ಕಾರು ತಯಾರಕ ಸಂಸ್ಥೆಯಾದ ಬಿಎಂಡಬ್ಲ್ಯು ಪಾತ್ರವಾಗಿದೆ. ಈ ನಡುವೆ ಒಂದು ಸ್ಥಾನ ಕುಸಿತ ಅನುಭವಿಸಿರುವ ಬಜಾಜ್ ಆಟೋ ಎಂಟನೇ ಸ್ಥಾನಕ್ಕೆ ಹಿಂಬಡ್ತಿ ಪಡೆದಿದೆ.


Click it and Unblock the Notifications









