ಕಾಂಗರೂ ನಾಡಲ್ಲಿ ಟಾಟಾ ಕ್ಸೆನಾನ್ ಟ್ರಕ್ ಅನಾವರಣ
ಕೆಲವು ದಿನಗಳ ಹಿಂದೆಯಷ್ಟೇ ಟಾಟಾ ಕ್ಸೆನಾನ್ ಪಿಕಪ್ ಟ್ರಕ್ ಆಸ್ಟ್ರೇಲಿಯಾದಲ್ಲಿ ಮುಂಬರುವ ಅಕ್ಟೋಬರ್ ತಿಂಗಳಲ್ಲಿ ಮಾರುಕಟ್ಟೆ ಪ್ರವೇಶಿಸುವುದರ ಬಗ್ಗೆ ಮಾಹಿತಿ ಕೊಟ್ಟಿದ್ದೆವು. ಇದಕ್ಕೂ ಮೊದಲು ದೇಶದ ಅತಿ ದೊಡ್ಡ ವಾಹನ ತಯಾರಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್, ಕಾಂಗರೂ ನಾಡಿನಲ್ಲಿ ನೂತನ ಕ್ಸೆನಾನ್ ಟಫ್ ಟ್ರಕ್ ಕಾನ್ಸೆಪ್ಟ್ ಅನಾವರಣಗೊಳಿಸಿದೆ.
ಮೆಲ್ಬರ್ನ್‌ನಲ್ಲಿ ಸಾಗಿದ ನ್ಯಾಷನಲ್ 4x4 ಔಟ್‌ಡೌರ್ ಶೋ ಮತ್ತು ಫಿಶಿಂಗ್ ಆಂಡ್ ಬೋಟಿಂಗ್ ಎಕ್ಸ್‌ಪೋದಲ್ಲಿ ಟಾಟಾ ತನ್ನ ನೂತನ ವಾಣಿಜ್ಯ ವಾಹನದ ಕಾನ್ಸೆಪ್ಟ್ ಪ್ರದರ್ಶಿಸಿದೆ.

ಸ್ಟೈಲಿಷ್ ಡಿಸೈನ್
ಟಾಟಾ ಮೋಟಾರ್ಸ್ ದೇಶಿಯ ವಿತರಕರಾದ ಫ್ಯೂಶನ್ ಆಟೋಮೋಟಿವ್ ಜತೆ ಸೇರಿಕೊಂಡು ಈ ನೂತನ ಕಾನ್ಸೆಪ್ಟ್ ತಯಾರಿಸಲಾಗಿದೆ. ಡಿಸೈನ್ ತಂಡವನ್ನು ಆಟೋಮೋಟಿವ್ ಪ್ರಧಾನ ವಿನ್ಯಾಸಕಾರ ಜೂಲಿನ್ ಕ್ಯೂನ್ಸೆ ನೇತೃತ್ವ ವಹಿಸಿದ್ದಾರೆ.

ಡೇ ಟೈಮ್ ರನ್ನಿಂಗ್ ಹೆಡ್‌ಲೈಟ್
ಏಕ್ಸ್‌ಕ್ಲೂಸಿವ್ ಆಕ್ಸೆಸರಿ ಹಾಗೂ ಬಾಡಿ ಕಿಟ್‌ಗಳಿಂದ ಟಾಟಾ ಕ್ಸೆನಾನ್ ಟ್ರಕ್ ವಿನ್ಯಾಸಗೊಳಿಸಲಾಗಿದೆ. ಇದರಲ್ಲಿ ಡೇ ಟೈಮ್ ರನ್ನಿಂಗ್ ಲೈಟ್ಸ್ ಕೂಡಾ ಆಳವಡಿಸಲಾಗಿದೆ.

ವಿನ್ಯಾಸ
ಚಿತ್ರದಲ್ಲಿ ತೋರಿಸಿರುವಂತೆಯೇ ಇದರ ವಿನ್ಯಾಸ ಇತರ ಟಾಟಾ ಟ್ರಕ್‌ಗಿಂತಲೂ ವಿಭಿನ್ನವಾಗಿದೆ. ಇಲ್ಲಿ ಹೊರಂಗಣ ವಿನ್ಯಾಸಕ್ಕೆ ಹೆಚ್ಚಿನ ಮಹತ್ವ ಕೊಡಲಾಗಿದೆ.

ಎಂಜಿನ್
ಹಾಗಿದ್ದರೂ ಎಂಜಿನ್‌ನಲ್ಲಿ ಮಾತ್ರ ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ. ಇದರಲ್ಲಿ 2.2 ಲೀಟರ್ DICOR ಡೀಸೆಲ್ ಯುರೋ 5 ಎಂಜಿನ್ ಆಳವಡಿಸಲಾಗಿದ್ದು, 148 ಅಶ್ವಶಕ್ತಿ ಉತ್ಪಾದಿಸುತ್ತದೆ. ಹಾಗೆಯೇ 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಹೊಂದಿದೆ.

ಟಾಟಾ ಪವರ್
ಭಾರತ ವಾಣಿಜ್ಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಪ್ರಭಾವ ಬೀರಿರುವ ಟಾಟಾ ಮೋಟಾರ್ಸ್ ಇದೀಗ ವಿದೇಶದಲ್ಲೂ ಹೆಚ್ಚು ಸದ್ದು ಮಾಡುವ ನಿರೀಕ್ಷೆಯನ್ನಿಟ್ಟುಕೊಂಡಿದೆ.


Click it and Unblock the Notifications








