ಸದ್ಯದಲ್ಲೇ ಫೋಕ್ಸ್‌ವ್ಯಾಗನ್ ಪೊಲೊ ಕ್ರಾಸೋವರ್ ಆಗಮನ
ರೆನೊ ಹಾಗೂ ಫೋರ್ಡ್‌ಗೆ ಸದ್ಯದಲ್ಲೇ ಎದುರಾಳಿಯೊಂದು ಸೃಷ್ಟಿಯಾಗಲಿದೆ. ಅದುವೇ ಫೋಕ್ಸ್‌ವ್ಯಾಗನ್ ಪೊಲೊ ಕ್ರಾಸೋವರ್. ಇನ್ನು ಚುಟುಕಾಗಿ ವಿವರಿಸಬೇಕೆಂದರೆ ನೂತನ ಕ್ರಾಸ್ ಪೊಲೊ ಆಗಸ್ಟ್ 21ರಂದು ಅನವಾವರಣಗೊಳ್ಳಲಿದೆ ಎಂದು ವರದಿಗಳು ತಿಳಿಸಿವೆ.
ಹಲವು ಬಾರಿ ಟೆಸ್ಟಿಂಗ್ ವೇಳೆ ಕ್ಯಾಮೆರಾ ರಹಸ್ಯ ಕಣ್ಣುಗಳಿಗೆ ಸೆರೆ ಸಿಕ್ಕಿರುವ ಫೋಕ್ಸ್‌ವ್ಯಾಗನ್ ಕ್ರಾಸ್ ಪೊಲೊ ವಾಹನ ಪ್ರಿಯರ ಕುತೂಹಲಕ್ಕೆ ಕಾರಣವಾಗಿದೆ. ಹೆಚ್ಚಿನ ಗ್ರೌಂಡ್ ಕ್ಲಿಯರನ್ಸ್ ಹಾಗೂ ದೊಡ್ಡದಾದ ಅಲಾಯ್ ವೀಲ್ ಪಡೆದುಕೊಂಡಿರುವ ಕ್ರಾಸ್ ಪೊಲೊ ಇತರ ಆವೃತ್ತಿಗಿಂತ ವಿಭಿನ್ನವಾಗಿಸುತ್ತಿದೆ.

ಸಿಲ್ವರ್ ಕಿಡ್ ಪ್ಲೇಟ್‌ಗಳಂತಹ ಹೆಚ್ಚಿನ ಫೀಚರ್‌ಗಳನ್ನು ಮುಂಭಾಗ ಹಾಗೂ ಹಿಂದುಗಡೆ ಆಳವಡಿಸಲಾಗಿದೆ. ಇದರಲ್ಲಿ ರೂಫ್ ರೈಲ್ ಕೂಡಾ ಲಗತ್ತಿಸಲಾಗಿದೆ. ಇನ್ನು ಎಂಜಿನ್ ಬಗ್ಗೆ ಮಾತನಾಡುವುದಾದರೆ ಪೊಲೊ ಟಿಡಿಐ 1.2 ಲೀಟರ್ ಡೀಸೆಲ್ ಎಂಜಿನ್ ಉಳಿಸುವ ಸಾಧ್ಯತೆಗಳಿವೆ. ಇದರ ಜತೆಗೆ ಹೆಚ್ಚಿನ ಸುರಕ್ಷತಾ ಫೀಚರ್‌ಗಳೊಂದಿಗೆ ಆಗಮಿಸಿದ್ದಲ್ಲಿ ಯಾವುದೇ ಅಚ್ಚರಿಯೇನಿಲ್ಲ.
ದರದ ಬಗ್ಗೆ ಹೇಳುವುದಾದರೆ ಪೊಲೊ ಟಿಡಿಐ ಹೈ ಲೈನ್ ಆವೃತ್ತಿಗಿಂತಲೂ ಸುಮಾರು ಒಂದು ಲಕ್ಷ ರು.ಗಳಷ್ಟು ಫೋಕ್ಸ್‌ವ್ಯಾಗನ್ ಕ್ರಾಸ್ ಪೊಲೊ ದುಬಾರಿಯಾಗುವ ಸಾಧ್ಯತೆಯಿದೆ.


Click it and Unblock the Notifications









