ಅಕಾರ್ಡ್ ಬಳಿಕ ಪಸ್ಸಾಟ್‌ಗೂ ಬಿತ್ತು ಬ್ರೇಕ್
ಹೋಂಡಾ ಕಾರ್ಸ್ ಇಂಡಿಯಾ, ಅಕಾರ್ಡ್ ಉತ್ಪಾದನೆಯನ್ನು ಸ್ಥಗಿತಗೊಳಿಸುವ ನಿರ್ಧಾರದ ಬೆನ್ನಲ್ಲೇ ಇನ್ನೊಂದು ವಾಹನ ತಯಾರಕ ಸಂಸ್ಥೆಯಾದ ಫೋಕ್ಸ್‌ವ್ಯಾಗನ್, ತನ್ನ ಜನಪ್ರಿಯ ಪಸ್ಸಾಟ್ ಮಾರಾಟಕ್ಕೂ ಬ್ರೇಕ್ ಹಾಕಿದೆ. ಇಲ್ಲಿ ಗಮನಾರ್ಹ ಸಂಗತಿಯೆಂದರೆ ಹೋಂಡಾ ಅಕಾರ್ಡ್ ಹಾಗೂ ಫೋಕ್ಸ್‌ವ್ಯಾಗನ್ ಪಸ್ಸಾಟ್ ಒಂದೇ ಸೆಗ್ಮೆಂಟ್‌ನಲ್ಲಿ ಗುರುತಿಸಿಕೊಂಡಿರುವ ಕಾರಾಗಿದೆ.
ಇದೀಗ ಬೇಡಿಕೆ ಕುಸಿದಿರುವ ಹಿನ್ನಲೆಯಲ್ಲಿ ಪಸ್ಸಾಟ್ ಲಗ್ಷುರಿ ಸೆಡಾನ್ ಮಾರಾಟ ನಿಲುಗಡೆಗೊಳಿಸಲು ಫೋಕ್ಸ್‌ವ್ಯಾಗನ್ ನಿರ್ಧರಿಸಿದೆ. ಅದೇ ಹೊತ್ತಿಗೆ ಉತ್ಪಾದನಾ ವೆಚ್ಚ ಹೆಚ್ಚಿರುವುದು ಹಾಗೆಯೇ ಲಾಭಾಂಶ ಕುಸಿದಿರುವುದು ಸಹ ಪಸ್ಸಾಟ್ ಮಾರಾಟದ ಮೇಲೆ ವ್ಯತಿರಿಕ್ತ ಪರಿಣಾಮವನ್ನುಂಟು ಮಾಡಿದೆ. ಇದರ 2.0 ಲೀಟರ್ ಡೀಸೆಲ್ ಎಂಜಿನ್ ದರ 26 ಲಕ್ಷ ರು.ಗಳಿಂದ 32 ಲಕ್ಷ ರು.ಗಳ ವರೆಗೆ ದುಬಾರಿಯಾಗಿತ್ತು.
ಅಂದ ಹಾಗೆ ಸದ್ಯಕ್ಕಂತೂ ದೇಶಕ್ಕೆ ಪಸ್ಸಾಟ್ ಆವೃತ್ತಿಯನ್ನು ಮರು ಪರಿಚಯಿಸುವ ಇರಾದೆಯನ್ನು ಕಂಪನಿ ಹೊಂದಿಲ್ಲ. ಹಾಗಿದ್ದರೂ ಜಾಗತಿಕವಾಗಿ ಮುಂದಿನ ತಲೆಮಾರಿನ ಪಸ್ಸಾಟ್ 2015ರಲ್ಲಿ ಲಾಂಚ್ ಆಗಲಿದೆ.



Click it and Unblock the Notifications








