ಫೋಕ್ಸ್‌ವ್ಯಾಗನ್ 'ಫುಲ್ಲಿ ಲೋಡೆಡ್' ಪೊಲೊ, ವೆಂಟೊ ಆಫರ್
ಜರ್ಮನಿಯ ಕಾರು ತಯಾರಕ ಸಂಸ್ಥೆಯಾದ ಫೋಕ್ಸ್‌ವ್ಯಾಗನ್, ತನ್ನ ಗ್ರಾಹಕರಿಗಾಗಿ ಹೊಸ ಆಫರ್‌ವೊಂದನ್ನು ಮುಂದಿರಿಸಿದೆ. ಈ ಲಿಮಿಟೆಡ್ ಅವಧಿಯ ಫುಲ್ಲಿ ಲೋಡೆಡ್ ಆಫರ್ ಪೊಲೊ ಹ್ಯಾಚ್‌ಬ್ಯಾಕ್ ಹಾಗೂ ವೆಂಟೊ ಕಾಂಪಾಕ್ಟ್ ಸೆಡಾನ್ ಕಾರುಗಳಿಗೆ ಲಭ್ಯವಿರಲಿದೆ.
ನೂತನ ಆಫರ್ ಪ್ರಕಾರ ನೂತನ ಕಾರು ಖರೀದಿ ಗ್ರಾಹಕರಿಗೆ ಸುಲಭ ಇಎಂಐ ಆಯ್ಕೆ, ಮೂರು ವರ್ಷಗಳ ವಿಸ್ತರಿತ ವಾರಂಟಿ, ವಿಮಾ ಸೌಲಭ್ಯ, ರೋಡ್ ಸೈಡ್ ಅಸಿಸ್ಟನ್ಸ್ ಸೇರಿದಂತೆ ಇತರ ಅನೇಕ ಸೌಲಭ್ಯಗಳು ಲಭ್ಯವಾಗಲಿದೆ.
ಪ್ರಸ್ತುತ ಆಫರ್ ಜುಲೈ 25ರ ವರೆಗೆ ಮಾತ್ರ ಲಭ್ಯವಾಗಿರಲಿದ್ದು, ಗ್ರಾಹಕರು ತ್ವರೆ ಮಾಡಿಕೊಳ್ಳುವಂತೆ ವಿನಂತಿಸಿಕೊಳ್ಳಲಾಗಿದೆ.
ಎಲ್ಲ ಫೋಕ್ಸ್‌ವ್ಯಾಗನ್ ಉತ್ಸಾಹಿ ಗ್ರಾಹಕರು ಇದೀಗ ಪೊಲೊ ಕಾರನ್ನು ಒಟ್ಟು ಮೊತ್ತದ ಶೇಕಡಾ 20ರಷ್ಟು ಪಾವತಿಸಿ ತಮ್ಮದಾಗಿಸಿಕೊಳ್ಳಬಹುದಾಗಿದೆ. ಉಳಿದ ಮೊತ್ತ ಪ್ರತಿ ತಿಂಗಳು 9,999 ಇಎಂಐನಂತೆ 36 ತಿಂಗಳಲ್ಲಿ ಪಾವತಿಸಿದರೆ ಸಾಕು. ವೆಂಟೊ ಕಾರಿಗೂ ಇದೇ ರೀತಿಯ ಆಫರ್ ಇದ್ದು, ಪ್ರತಿ ತಿಂಗಳು ಇಎಂಐ ಮುಖಾಂತರ 14,499 ಪಾವತಿಸಬೇಕಾಗಿದೆ.


Click it and Unblock the Notifications









