ಫೋಕ್ಸ್‌ವ್ಯಾಗನ್ ಪುಣೆ ಘಟಕದಲ್ಲಿ 3 ಲಕ್ಷ ಕಾರುಗಳು ತಯಾರಿ

By Nagaraja

ಫೋಕ್ಸ್‌ವ್ಯಾಗನ್ ಇಂಡಿಯಾದ ಪುಣೆಯ ಚಕನ್ ಘಟಕದಲ್ಲಿ 3,00,000 ಕಾರುಗಳು ತಯಾರಿಯಾಗಿದ್ದು, ಈ ಸುಸಂದರ್ಭವನ್ನು ಜರ್ಮನಿ ಮೂಲದ ಕಂಪನಿಯು ಆದ್ಧೂರಿಯಾಗಿ ಆಚರಿಸಿಕೊಂಡಿದೆ. ಎಡಬದಿಯ ಡ್ರೈವಿಂಗ್ (ಲೆಫ್ಟ್ ಡ್ರೈವ್ ಸಿಸ್ಟಂ) ವ್ಯವಸ್ಥೆ ಹೊಂದಿರುವ ಈ ಫೋಕ್ಸ್‌ವ್ಯಾಗನ್ ವೆಂಟೊ ಕಾರು ಇದೀಗ ಎಜಿಸಿಸಿ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ.

ಫೋಕ್ಸ್‌ವ್ಯಾಗನ್ ಪುಣೆ ಘಟಕವು 2007ನೇ ಇಸವಿಯಲ್ಲಿ ಕಾರ್ಯಾಚರಣೆ ಆರಂಭಿಸಿತ್ತು. ಅಲ್ಲದೆ ಮೊದಲ ಕಾರನ್ನು 2009 ಮೇ ತಿಂಗಳಲ್ಲಿ ಬಿಡುಗಡೆಗೊಳಿಸಲಾಗಿತ್ತು. ವರ್ಷಂಪ್ರತಿ 1.30 ಲಕ್ಷ ಕಾರುಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುವ ಇಲ್ಲಿನ ಪುಣೆ ಘಟಕದಲ್ಲಿ ಫೋಕ್ಸ್‌ವ್ಯಾಗನ್ ಪೊಲೊ, ವೆಂಟೊ, ಸ್ಕೋಡಾ ಫ್ಯಾಬಿಯಾ ಹಾಗೂ ರಾಪಿಡ್ ಆವೃತ್ತಿಗಳನ್ನು ಉತ್ಪಾದಿಸಲಾಗುತ್ತಿದೆ. ಇಲ್ಲಿಂದಲೇ ಏಷ್ಯಾ, ಯುರೋಪ್ ಖಂಡ ಸೇರಿದಂತೆ ಹಲವು ರಾಷ್ಟ್ರಗಳಿಗೆ ಕಾರು ರಫ್ತಾಗುತ್ತಿದೆ.


ಈ ಸಂದರ್ಭದಲ್ಲಿ ಮಾತನಾಡಿರುವ ಫೋಕ್ಸ್‌ವ್ಯಾಗನ್ ಇಂಡಿಯಾ ತಾಂತ್ರಿಕ ಕಾರ್ಯನಿರ್ವಾಹಕ ನಿರ್ದೇಶಕ ಆಂಡ್ರಿಯಾಸ್ ಲಾನ್ರಾತ್, ನಮ್ಮ ಪುಣೆ ಘಟಕದಲ್ಲಿ 3 ಲಕ್ಷ ಕಾರುಗಳನ್ನು ತಯಾರಿಸುವ ಮೂಲಕ ಹೊಸ ಮೈಲಿಗಲ್ಲು ಸಾಧಿಸಿದ್ದೆವೆ. ಹಾಗೆಯೇ ಫೋಕ್ಸ್‌ವ್ಯಾಗನ್ ಎಡ ಬದಿಯ ಡ್ರೈವಿಂಗ್ ವ್ಯವಸ್ಥೆ ಹೊಂದಿರುವ ಕಾರು ಭಾರತ ಉತ್ಪನ್ನಗಳಿಗೆ ವಿಶ್ವದ್ಯಾಂತ ಸಿಗುತ್ತಿರುವ ಮನ್ನಣೆಗೆ ಕಾರಣವಾಗಿದೆ; ಇದಕ್ಕೆ ಸಹಕರಿಸಿದ ಫೋಕ್ಸ್‌ವ್ಯಾಗನ್ ಸಂಪೂರ್ಣ ತಂಡಕ್ಕೆ ಅಭಿನಂದನೆ ಸಲ್ಲಿಸಲು ಬಯಸುತ್ತಿರುವುದಾಗಿ ತಿಳಿಸಿದರು.

ಇದೇ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಫೋಕ್ಸ್‌ವ್ಯಾಗನ್ ಇಂಡಿಯಾ ಅಧ್ಯಕ್ಷ ಹಾಗೂ ಮಹಾ ನಿರ್ದೇಶಕ ಮಹೇಶ್ ಕೊಡುಮುಡಿ, ಭಾರತದಲ್ಲಿ ಫೋಕ್ಸ್‌ವ್ಯಾಗನ್ ಒಂದು ಮೈಲುಗಲ್ಲಾಗಿದ್ದು, ಇದನ್ನು ಪ್ರತ್ಯೇಕವಾಗಿ ಭಾರತೀಯರಿಗಾಗಿ ವಿನ್ಯಾಸಗೊಳಿಸಲಾಗಿದೆ. ಇದೀಗ ಎಡ ಬದಿಯ ಡ್ರೈವಿಂಗ್ ಜಾಗತಿಕ ಮಾರುಕಟ್ಟೆಯಲ್ಲೂ ನಿಧಾನವಾಗಿ ಮೇಲೆರುತ್ತಿದೆ. ಸದ್ಯ 3,00,000 ಕಾರು ಉತ್ಪನ್ನವಾಗುವ ಮೂಲಕ ಮತ್ತೊಂದು ಮೈಲುಗಲ್ಲು ತಲುಪಿದೆ ಎಂದಿದ್ದಾರೆ.

More from DriveSpark

Article Published On: Monday, August 12, 2013, 14:48 [IST]
English summary
Volkswagen India has touched a historic milestone in the country. It has produced the 3,00,000th car from its Pune Plant on August 5, 2013. The car is a left hand drive version of Volkswagen Vento that will be exported to the AGCC market.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+