ಫೋಟೋ ಕಳುಹಿಸಿ, ಯುರೋಪ್ ಪ್ರವಾಸ ಆನಂದಿಸಿರಿ
ಫೋಟೋಗ್ರಾಫಿ ಎಂಬುದು ಅತ್ಯುತ್ತಮ ಕಲೆಯಾಗಿದೆ. ಇದು ಎಲ್ಲರಿಗೂ ಸಿದ್ಧಿಸಬೇಕೆಂದಿಲ್ಲ. ತನ್ನ ಸೂಕ್ಷ್ಮ ದೃಷ್ಟಿಯಿಂದ ಜಗತ್ತನ್ನು ನೋಡುತ್ತಾ ಸಣ್ಣ ಸಣ್ಣ ವಿಚಾರಗಳನ್ನು ಕ್ಯಾಮೆರಾ ಕಣ್ಣುಗಳಲ್ಲಿ ಸೆರೆ ಹಿಡಿಯುವುದು ಅಷ್ಟು ಸುಲಭದ ವಿಚಾರವೇನಲ್ಲ. ಅದೇ ರೀತಿ ಇವೆರಡರ ನಡುವಣ ಅಂತರ ಕೇವಲವೊಬ್ಬ ಫೋಟೊಗ್ರಾಫರ್ ಮಾತ್ರ ಅರಿತುಕೊಳ್ಳಲು ಸಾಧ್ಯ.
ಅಂದ ಹಾಗೆ ನಿಮ್ಮಲ್ಲೂ ಫೋಟೊಗ್ರಾಫಿ ಮಾಡುವ ಕಲೆಯಿದ್ದರೆ ನೀವು ಕೂಡಾ ಯುರೋಪ್ ಪ್ರವಾಸ ಕೈಗೊಳ್ಳಲು ತಯಾರಾಗಿರಿ. ಯಾಕೆಂದರೆ ಜಗತ್ತಿನ ಮುಂಚೂಣಿಯ ವಾಹನ ತಯಾರಕ ಕಂಪನಿಯಾದ ಫೋಕ್ಸ್‌ವ್ಯಾಗನ್, ವಿನೂತನ ಸ್ಪರ್ಧೆಯೊಂದನ್ನು ಏರ್ಪಡಿಸುತ್ತಿದ್ದು, ಇದರಲ್ಲಿ ಗೆದ್ದರೆ ಯುರೋಪ್ ಪಯಣಿಸುವ ಅವಕಾಶ ಪಡೆಯಬಹುದು.
ಫೋಕ್ಸ್‌ವ್ಯಾಗನ್ 'ಏಸ್ ದಿ ರೇಸ್' ಎಂಬ ಸ್ಪರ್ಧೆಯೊಂದನ್ನು ಹಮ್ಮಿಕೊಂಡಿದೆ. ಇದರಲ್ಲಿ ನಿಮಗೆ ಯುರೋಪ್‌ನಲ್ಲಿ ನಡೆಯಲಿರುವ ಸಿರಕ್ಕೊ ಕಪ್ (Scirocco cup) ಚಿತ್ರಿಕರಿಸುವ ಅವಕಾಶ ಲಭಿಸಲಿದೆ.
ಇದಕ್ಕಾಗಿ ನೀವು ಕೆಳಗಡೆ ಚಿತ್ರದಲ್ಲಿ ಕೊಡಲಾಗಿರುವ ಥೀಮ್‌ಗೆ ಅನುಸಾರವಾಗಿ ಚಿತ್ರಗಳನ್ನು ಕ್ಲಿಕ್ಕಿಸಬೇಕು. ಅಂದರೆ ಫೋಕ್ಸ್‌ವ್ಯಾಗನ್‌ನ ಅತ್ಯಂತ ಆಕರ್ಷಕ ಫೋಟೊ, ಲೊಗೊ, ಶೋರೂಂ, ವಿಂಟೇಜ್ ಕಾರು ಹಾಗೂ ಕ್ರಿಯೇಟಿವ್ ಫೋಟೊಗಳನ್ನು ಸಂಗ್ರಹಿಸಿ ಕಳುಹಿಸಿಕೊಡಬೇಕಾಗಿದೆ.
ನೀವು ಕಳುಹಿಸಿದ ಫೋಟೊಗಳ ಆಧಾರದ ಮೇಲೆ ವಿಜೇತರನ್ನು ಪೋಕ್ಸ್‌ವ್ಯಾಗನ್ ಘೋಷಿಸಲಿದೆ. ಶ್ರೇಷ್ಟ 5 ಸ್ಪರ್ಧಿಗಳು ದೆಹಲಿಯಲ್ಲಿ ನಡೆಯಲಿರುವ ಪೊಲೊ ಆರ್ ಕಪ್ ಕ್ಲಿಕ್ಕಿಸುವ ಅವಕಾಶ ಲಭಿಸಲಿದೆ. ಇಲ್ಲಿನ ಗ್ರಾಂಡ್ ವಿನ್ನರ್‌ಗೆ ಯುರೋಪ್‌ನಲ್ಲಿ ನಡೆಯಲಿರುವ ಸಿರಕ್ಕೊ ಕಪ್ (Scirocco cup) ಚಿತ್ರಿಕರಿಸುವ ಅದೃಷ್ಟ ಲಭಿಸಲಿದೆ. ಈ ಮೂಲಕ ದೇಶದ ಅತ್ಯುತ್ತಮ ಫೋಟೊಗ್ರಾಫಿ ಪ್ರತಿಭೆಯನ್ನು ಹುಡುಕಾಡುವುದು ಕಂಪನಿಯ ಉದ್ದೇಶವಾಗಿದೆ.


Click it and Unblock the Notifications










