ರುಪಾಯಿ ಮೌಲ್ಯ ಕುಸಿತ; ಲಗ್ಫುರಿ ಕಾರು ದರ ಏರಿಕೆ

By Nagaraja

ಜಾಗತಿಕ ಮಾರುಕಟ್ಟೆಯಲ್ಲಿ ರುಪಾಯಿ ಮೌಲ್ಯ ಕುಸಿದಿರುವುದರ ಪರಿಣಾಮ ಐಷಾರಾಮಿ ಕಾರುಗಳ ದರಗಳಲ್ಲಿ ಭಾರಿ ಹೆಚ್ಚಳ ಕಂಡುಬರುತ್ತಿದೆ. ಇದರ ಮುಂದುವರಿದ ಭಾಗವೆಂಬಂತೆ ಆಡಿ ಇಂಡಿಯಾ ತನ್ನ ಕಾರುಗಳ ದರಗಳನ್ನು ಏರಿಕೆಗೊಳಿಸಿದೆ. ಆಡಿ ತನ್ನೆಲ್ಲ ಮಾದರಿಗಳ ಕಾರುಗಳಿಗೆ ಶೇಕಡಾ 4ರಷ್ಟು ದರ ಏರಿಕೆಗೊಳಿಸಿತ್ತು.

ಆಡಿ ಕ್ಯೂ5 ದರಗಳಲ್ಲಿ 1.52 ಲಕ್ಷ ರು.ಗಳಷ್ಟು ಹೆಚ್ಚಳ ಕಂಡುಬಂದಿದ್ದರೆ ಆಡಿ ಎ6 ಹಾಗೂ ಆರ್8 ಅನುಕ್ರಮವಾಗಿ 1.8 ಹಾಗೂ 4.42 ಲಕ್ಷ ರು.ಗಳಷ್ಟು ದುಬಾರಿಯಾಗಿತ್ತು. ಫಾರೆಕ್ಸ್ ಮಾರುಕಟ್ಟೆಯಲ್ಲಿ ರುಪಾಯಿ ಮೌಲ್ಯ ಸತತವಾಗಿ ಹಿನ್ನಡೆ ಅನುಭವಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಮೂಲಗಳ ದೇಶದ ಇತರ ಲಗ್ಷುರಿ ಕಾರು ತಯಾರಕ ಸಂಸ್ಥೆಗಳು ಸಹ ಆಡಿ ನೀತಿಯನ್ನು ಹಿಂಬಾಲಿಸಲಿದೆ. ಅಂದರೆ ಮರ್ಸಿಡಿಸ್ ಬೆಂಝ್, ಬಿಎಂಡಬ್ಲ್ಯುಗಳಂತಹ ಐಷಾರಾಮಿ ಕಾರುಗಳ ದರಗಳಲ್ಲೂ ಭಾರಿ ಏರಿಕೆ ಕಂಡುಬರುವ ಸಾಧ್ಯತೆಗಳಿವೆ.

ಐಷಾರಾಮಿ ಕಾರುಗಳನ್ನು ಹೊರತುಪಡಿಸಿದರೆ ದೇಶದ ಮಾರುಕಟ್ಟೆಯಲ್ಲಿ ನೂತನ ಕಾರುಗಳ ಎಂಟ್ರಿ ತುಂಬಾ ಜೋರಾಗಿಯೇ ನಡೆಯುತ್ತಿದೆ. ಇತ್ತೀಚೆಗಷ್ಟೇ ಬಹುನಿರೀಕ್ಷಿತಿ ಫೋರ್ಡ್ ಇಕೊಸ್ಪೋರ್ಟ್ ರಸ್ತೆಗಿಳಿದಿತ್ತು.

Article Published On: Friday, July 12, 2013, 12:31 [IST]
English summary
The deterioration of the Indian rupee’s value is now beginning to affect prices in the luxury segment of the Indian auto industry.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+