ಸಿಂಗೂರಿನ ಟಾಟಾ ಆಗಲಿದೆಯೇ ಗುಜರಾತ್‌ನಲ್ಲಿ ಮಾರುತಿ?
ಈ ಬಾರಿ ಟಾಟಾ ಮೋಟಾರ್ಸ್ ಸ್ಥಾನದಲ್ಲಿ ದೇಶದ ನಂ.1 ಕಾರು ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ ಕಾಣಿಸಿಕೊಂಡಿದೆ. ಬಹುನಿರೀಕ್ಷಿತ ಮಂಡಲ್,ಬೇಚರಾಜಿ ವಿಶೇಷ ಹೂಡಿಕಾ ಪ್ರದೇಶ (ಎಸ್‌ಐಆರ್) ವಿರುದ್ಧ 44 ಗ್ರಾಮದ ರೈತಾಪಿ ವರ್ಗದ ಜನರು ಹೋರಾಟ ಆರಂಭಿಸಿದ್ದಾರೆ.
ನರ್ಮದಾ ಪ್ರದೇಶದ ಫಲವತ್ತಾದ ಭೂಮಿ ಮಾರುತಿಯ ನೂತನ ಯೋಜನೆಯಡಿಯಲ್ಲಿ ಕಾಣಿಸಿಕೊಂಡಿರುವುದು ವಿವಾದಕ್ಕೆ ಕಾರಣವಾಗಿದೆ. ಈ ಪ್ರದೇಶದಲ್ಲಿ ವರ್ಷದಲ್ಲಿ ಎರಡರಿಂದ ಮೂರು ಬಾರಿ ಬೆಳೆ ಬೆಳೆಯಲಾಗುತ್ತಿದ್ದು, ಜೀರಿಗೆ, ಹತ್ತಿ, ಗೋಧಿ, ಅಕ್ಕಿ, ಬಾಜ್ರ ಮತ್ತು ಕ್ಯಾಸ್ಟರ್ ಪ್ರಮುಖ ಬೆಳೆಯಾಗಿದೆ.
ಗುಜರಾತ್‌ನಲ್ಲಿ ಮೋದಿ ನೇತೃತ್ವದ ಬಿಜೆಪಿ ಸರಕಾರ ಅಧಿಕಾರದಲ್ಲಿದ್ದು, ಮಾರುತಿ ಸುಜುಕಿ ಜತೆ ಬೃಹತ್ ಕಾರು ಘಟಕಕ್ಕೆ ಯೋಜನೆ ಹಾಕಿಕೊಂಡಿದೆ. ಅಹಮದಾಬಾದ್, ಮೆಹ್ಸಾನಾ, ಸುರೇಂದ್ರನಗರ ಜಿಲ್ಲೆ ಸೇರಿದಂತೆ ಒಟ್ಟು 500 ಚದರ ಕಿಲೋಮೀಟರ್ ವ್ಯಾಪ್ತಿ ಪ್ರದೇಶಕ್ಕೆ ಯೋಜನೆ ಹರಡಿದೆ. ಇದರಂತೆ ಭೂಮಿ ವಶಪಡಿಸಿಕೊಳ್ಳುವ ಕುರಿತಂತೆ ಸರಕಾರವು ಪತ್ರಿಕಾ ಪ್ರಕಟಣೆಯನ್ನು ಸ್ಥಳೀಯ ಮಾಧ್ಯಮಗಳಲ್ಲಿ ಪ್ರಕಟಿಸಿತ್ತು. ಇದರ ವಿರುದ್ಧ ರೈತರಿಂದ ತೀವ್ರ ಪ್ರತಿಭಟನೆ ವ್ಯಕ್ತವಾಗುತ್ತಿದೆ.


Click it and Unblock the Notifications









