ಬಜಾಜ್ ರಿಕ್ಷಾಗಳಿಗೆ ಪ್ರತಿಸ್ಪರ್ಧಿ- ಐ ಆಮ್ 'ಝಡ್‌ಬೀ'

By Nagaraja

ಕಳೆದೆರಡು ದಶಕಗಳಲ್ಲಿ ದೇಶದ ವಾಹನ ಮಾರುಕಟ್ಟೆಯಲ್ಲಿ ಭಾರಿ ಸದ್ದು ಮಾಡಿರುವ ಬಜಾಜ್ ಆಟೋ ರಿಕ್ಷಾಗಳಿಗೆ ಪ್ರತಿಸ್ಪರ್ಧಿಯೊಂದು ಸಿದ್ಧಗೊಳ್ಳುತ್ತಿದೆ. ಹೌದು, ಸ್ವೀಡನ್ ವಿದ್ಯುತ್ ಚಾಲಿತ ವಾಹನ ತಯಾರಕ ಸಂಸ್ಥೆಯಾದ ಕ್ಲೀನ್ ಮೊಷನ್ ನೂತನ ತ್ರಿಚಕ್ರ ವಾಹನವಾದ ಝಡ್‌ಬೀ (Zbee) ತ್ರಿಚಕ್ರ ವಾಹನಗಳನ್ನು ಪರಿಚಯಿಸಲಿದೆ.

ಅಂದ ಹಾಗೆ ಈ ಬಹುನಿರೀಕ್ಷಿತ ವಾಹನ ಸದ್ಯ ಭಾರತೀಯ ಮಾರುಕಟ್ಟೆ ಪ್ರವೇಶಿಸುತ್ತಿಲ್ಲ. ಬದಲಾಗಿ ಭಾರತದಷ್ಟೇ ಹೆಚ್ಚು ಪ್ರಾಮುಖ್ಯತೆಯನ್ನು ಹೊಂದಿರುವ ಇಂಡೋನೇಷ್ಯಾ ಮಾರುಕಟ್ಟೆಗೆ ಲಗ್ಗೆಯಿಡುತ್ತಿದೆ. ಅಂದ ಹಾಗೆ ನಿಕಟ ಭವಿಷ್ಯದಲ್ಲಿ ಭಾರತಕ್ಕೂ ಎಂಟ್ರಿ ಕೊಡುವ ಸಾಧ್ಯತೆಯಿದೆ.

ಪ್ರದರ್ಶನ

ಪ್ರದರ್ಶನ

ಇಂಡೋನೇಷ್ಯಾದ ಜಕರ್ತಾದಲ್ಲಿ ಸಾಗಿದ ರೈಟೆಕ್ ಟೆಕ್ನಾಲಜಿ ಎಕ್ಸ್‌ಪೋದಲ್ಲಿ ಈಗಾಗಲೇ ಪ್ರದರ್ಶನ ಕಂಡಿರುವ ಝಡ್‌ಬೀ, ಪ್ರಮುಖವಾಗಿಯೂ ನಗರ ಪ್ರದೇಶದ ಪ್ರಯಾಣಿಕರನ್ನು ಗುರಿಯಾಗಿರಿಸಿಕೊಳ್ಳುತ್ತಿದೆ.

ಅನಾವರಣ

ಅನಾವರಣ

ಇಂಡೋನೇಷ್ಯಾ ಪ್ರಧಾನಿ Susilo Bambang Yudhoyono ಈ ನೂತನ ವಿದ್ಯುತ್ ಚಾಲಿತ ವಾಹನವನ್ನು ಅನಾವರಣಗೊಳಿಸಿದ್ದಾರೆ.

ಎಲೆಕ್ಟ್ರಿಕ್ ಮೋಟಾರ್

ಎಲೆಕ್ಟ್ರಿಕ್ ಮೋಟಾರ್

ಝಡ್‌ಬಿ ಎಲೆಕ್ಟ್ರಿಕ್ ತ್ರಿಚಕ್ರ ವಾಹನವು 4KW ಎಲೆಕ್ಟ್ರಿಕ್ ಮೋಟಾರ್‌ನಿಂದ ನಿಯಂತ್ರಿಸಲ್ಪಡುತ್ತಿದ್ದು, ಪ್ರತಿ ಕೀ.ಮೀ.ಗೆ 40wh ವಿದ್ಯುತ್ ವಿನಿಯೋಗಿಸುತ್ತಿದೆ.

ವೇಗ

ವೇಗ

ಬ್ಯಾಟರಿ ಸಂಪೂರ್ಣ ಚಾರ್ಜ್ ಮಾಡಿಸಿದ್ದಲ್ಲಿ 50 ಕೀ.ಮೀ. ತನಕ ಆರಾಮವಾಗಿ ಚಲಿಸಬಹುದಾಗಿದೆ.

ಗರಿಷ್ಠ ವೇಗ

ಗರಿಷ್ಠ ವೇಗ

ಈ ಮೂರು ಸೀಟಿನ ವಾಹನವು 230ಕೆ.ಜಿ ಭಾರವನ್ನು ಹೊಂದಿದ್ದು, ಪ್ರತಿ ಗಂಟೆಗೆ 45 ಕೀ.ಮೀ. ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ.

ಸಿಟಿ ರೈಡಿಂಗ್

ಸಿಟಿ ರೈಡಿಂಗ್

ಪ್ರಮುಖವಾಗಿ ನಗರ ಪ್ರದೇಶದ ಸಂಚಾರವನ್ನು ಗುರಿಯಾಗಿರಿಸಿಕೊಂಡು ಈ ಎಲೆಕ್ಟ್ರಿಕ್ ತ್ರಿಚಕ್ರ ವಾಹನ ತಯಾರಿಸಲಾಗುತ್ತಿದೆ. ಇದು ವಾಹನ ದಟ್ಟಣೆ ನಿಯಂತ್ರಿಸುವುದರ ಜತೆಗೆ ಹೆಚ್ಚು ಪರಿಸರ ಸ್ನೇಹಿ ಎನಿಸಿಕೊಳ್ಳಲಿದೆ.

ಸ್ಥಳೀಯ ಜೋಡಣೆ

ಸ್ಥಳೀಯ ಜೋಡಣೆ

ಪಿಟಿ ಲುಂಧಿನ್ ಇಂಡಸ್ಟ್ರಿ ಜತೆ ಪಾಲುದಾರಿಕೆ ಹೊಂದಿರುವ ಕ್ಲೀನ್ ಮೊಷನ್, ಝಡ್‌ಬೀ ತ್ರಿಚಕ್ರ ವಾಹನವನ್ನು ಸ್ಥಳೀಯವಾಗಿ ಉತ್ಪಾದಿಸಲಿದೆ. ಈ ಮೂಲಕ ಸ್ಮರ್ಧಾತ್ಮಕ ದರಗಳಲ್ಲಿ ಮಾರುಕಟ್ಟೆಗೆ ಪರಿಚಯಿಸಲಿದೆ.

ಆರಂಭದಲ್ಲಿ 100 ಯುನಿಟ್

ಆರಂಭದಲ್ಲಿ 100 ಯುನಿಟ್

ಸೆಪ್ಟೆಂಬರ್ ಮಧ್ಯಂತರ ವೇಳೆಯಲ್ಲಿ ಮೊದಲ 100 ಯುನಿಟ್‌ಗಳ ಉತ್ಪಾದನೆಯು ಪೂರ್ಣಗೊಳ್ಳಲಿದ್ದು, ಮಾರುಕಟ್ಟೆಗೆ ಪ್ರವೇಶಿಸಲಿದೆ.

ದರ ಮಾಹಿತಿ

ದರ ಮಾಹಿತಿ

ಝಡ್‌ಬೀ ತ್ರಿಚಕ್ರ ವಾಹನದ ಇದರ ಅಂದಾಜು ದರ 4.88 ಲಕ್ಷ ರು.ಗಳಾಗಿವೆ. ಹಾಗಾಗಿ ಭಾರತಕ್ಕೆ ಎಂಟ್ರಿ ಕೊಟ್ಟಲ್ಲಿ ಎಷ್ಟರ ಮಟ್ಟಿಗೆ ಯಶ ಕಾಣಲಿದೆ ಎಂಬುದರ ಬಗ್ಗೆ ಕುತೂಹಲ ಮನೆ ಮಾಡಿದೆ.

ಏಷ್ಯಾ ಮಾರುಕಟ್ಟೆ

ಏಷ್ಯಾ ಮಾರುಕಟ್ಟೆ

ನಿಕಟ ಭವಿಷ್ಯದಲ್ಲಿ ಇಂಡೋನೇಷ್ಯಾ ಮಾರುಕಟ್ಟೆ ಸೇರಿದಂತೆ ಏಷ್ಯಾದ ಇತರ ಮಾರುಕಟ್ಟೆಗಳಿಗೆ ಎಂಟ್ರಿ ನೀಡಲು ಕ್ಲೀನ್ ಮೊಷನ್ ಯೋಜನೆ ಹೊಂದಿದೆ.

More from DriveSpark

Article Published On: Wednesday, September 4, 2013, 7:05 [IST]
English summary
Swedish electric vehicle maker Clean Motion was looking to enter the Indonesian market with its Zbee electric three wheeler.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+