ಸ್ವಲ್ಪ ತಾಳಿ; ಇನ್ನೇನು ಶುರುವಾಗಲಿದೆ ದಟ್ಸನ್ ಮೇನಿಯಾ

Written By:

ಸ್ವಲ್ಪ ತಾಳಿ; ಇನ್ನೇನು ದಟ್ಸನ್ ಮೇನಿಯಾ ಸ್ವಲ್ಪ ದಿನಗಳಲ್ಲಿ ಶುರುವಾಗಲಿದೆ. ಹೌದು, ಜಪಾನ್‌ನ ಪ್ರತಿಷ್ಠಿತ ನಿಸ್ಸಾನ್‌ನ ಸಣ್ಣ ಕಾರು ಬ್ರಾಂಡ್ ಆಗಿರುವ ದಟ್ಸನ್ ಕಾರುಗಳು ಬಹುನಿರೀಕ್ಷಿತ 2014 ಇಂಡಿಯಾ ಆಟೋ ಎಕ್ಸ್ ಪೋ (ದೆಹಲಿ ಆಟೋ ಎಕ್ಸ್ ಪೋ) ದಲ್ಲಿ ಲಾಂಚ್ ಆಗಲಿದೆ. ಕಳೆದ ವರ್ಷವೇ ಭಾರತದಲ್ಲಿ ಜಾಗತಿಕ ಪ್ರದರ್ಶನ ಕಂಡಿದ್ದ ದಟ್ಸನ್ ಸಣ್ಣ ಕಾರು ಬ್ರಾಂಡ್ ಫೆಬ್ರವರಿಯಲ್ಲಿ ದೇಶದ ರಸ್ತೆ ಪ್ರವೇಶಿಸಲಿದೆ.

ದಟ್ಸನ್ ಮೇನಿಯಾ ಮಿಸ್ ಮಾಡಿದ್ರಾ? ಮುಂದೆ ಓದಿ

ನೀವು ಅಂದುಕೊಂಡ ಹಾಗೆ ಕೇವಲ ಗೊ ಹ್ಯಾಚ್‌ಬ್ಯಾಕ್ ಕಾರು ಮಾತ್ರ ಭಾರತ ಮಾರುಕಟ್ಟೆ ಪ್ರವೇಶಿಸುತ್ತಿಲ್ಲ. ಬದಲಾಗಿ ದಟ್ಸನ್ ಗೊ ಕಾರನ್ನು ಗೊ ಪ್ಲಸ್ ಮಲ್ಟಿ ಪರ್ಪಸ್ ವೆಹಿಕಲ್ ಹಿಂಬಾಲಿಸಲಿದೆ. ಈ ನಡುವೆ ನೂತನ ಐ2 ಕೂಡಾ ಪ್ರದರ್ಶನ ಕಾಣಲಿದೆ. ಈ ಎಲ್ಲದರ ಮೂಲದ ದೇಶದ ಎಂಟ್ರಿ ಲೆವೆಲ್ ಮಾರುಕಟ್ಟೆಯಲ್ಲಿ ಹೊಸತಾದ ದಟ್ಸನ್ ಮೇನಿಯಾ ಆರಂಭವಾಗಲಿದೆ.

ಗೊ ಹ್ಯಾಚ್‌ಬ್ಯಾಕ್
  

ಗೊ ಹ್ಯಾಚ್‌ಬ್ಯಾಕ್

ಇದು ಪ್ರಮುಖವಾಗಿಯೂ ದೇಶದ ನಂಬರ್ ವನ್ ಕಾರು ಸಂಸ್ಥೆಯಾಗಿರುವ ಮಾರುತಿ ಸುಜುಕಿಯ ಜನಪ್ರಿಯ ಕೆ10 ಮತ್ತು ಹ್ಯುಂಡೈ ಇಯಾನ್ ಆವೃತ್ತಿಗಳಿಗೆ ಪ್ರತಿಸ್ಪರ್ಧಿಯಾಗಿರಲಿದೆ. ಇದು ನಾಲ್ಕು ಲಕ್ಷ ರು.ಗಳ ಒಳಗಡೆ ಗ್ರಾಹಕರ ಕೈಸೇರಲಿದೆ.

ಪ್ಲಸ್ ಪಾಯಿಂಟ್
  

ಪ್ಲಸ್ ಪಾಯಿಂಟ್

ಇತರ ನಿಕಟ ಪ್ರತಿಸ್ಪರ್ಧಿಗಳನ್ನು ಹೋಲಿಸಿದರೆ ದಟ್ಸನ್ ಗೊ ಸಕರಾತ್ಮಕ ಅಂಶವೆಂದರೆ ಉತ್ತಮ ಸ್ಥಳಾವಕಾಶ. ಹಾಗೆಯೇ ವಿನ್ಯಾಸ ಕೂಡಾ ಆಕರ್ಷಕವೆನಿಸಿದೆ.

ಡೀಲರುಗಳ ಕೊರತೆ
  

ಡೀಲರುಗಳ ಕೊರತೆ

ಆದರೆ ಮಾರಾಟಕ್ಕಾಗಿ ಡೀಲರುಗಳ ಕೊರತೆ ಕಾಡಲಿದೆ. ಅದೇ ರೀತಿ ಸರ್ವೀಸ್ ಸೆಂಟರ್‌ಗಳ ಕೊರತೆಯನ್ನು ಅನುಭವಿಸುತ್ತಿದೆ. ಹಾಗಿದ್ದರೂ ಆರಂಭದಲ್ಲಿ ನಿಸ್ಸಾನ್‌ನ 150 ಡೀಲರ್‌ಶಿಪ್‌ಗಳ ಮೂಲಕ ಮಾರಾಟವಾಗಲಿದೆ.

ಮಾರಾಟ ಸಮಸ್ಯೆ
  

ಮಾರಾಟ ಸಮಸ್ಯೆ

ದೇಶದಲ್ಲಿ ಹ್ಯುಂಡೈ ಹಾಗೂ ಮಾರುತಿ ಸಂಸ್ಥೆಗಳು 1000ಕ್ಕೂ ಹೆಚ್ಚು ಪ್ರದರ್ಶನ ಮಳಿಗೆಗಳನ್ನು ಹೊಂದಿದೆ. ಇದು ದಟ್ಸನ್ ಪಾಲಿಗೆ ಹಿನ್ನಡೆಯಾಗಲಿದೆ. ಏನೇ ಆದರೂ ದೆಹಲಿ ಆಟೋ ಎಕ್ಸ್ ಪೋ ಬೆನ್ನಲ್ಲೇ ದಟ್ಸನ್ ಕಾರುಗಳ ಮಾರಾಟ ಆರಂಭವಾಗಲಿದೆ.

ಗೊ ಪ್ಲಸ್ ಎಂಪಿವಿ
  

ಗೊ ಪ್ಲಸ್ ಎಂಪಿವಿ

ಗೊ ಹ್ಯಾಚ್‌ಬ್ಯಾಕ್ ಕಾರಿನ ತಲಹದಿಯಲ್ಲಿ ನಿಸ್ಸಾನ್ ಮೈಕ್ರಾ ಫ್ಲ್ಯಾಟ್‌ಫಾರ್ಮ್‌ನಲ್ಲಿ ಗೊ ಪ್ಲಸ್ ಎಂಪಿವಿ ವಾಹನವನ್ನು ಸಿದ್ಧಗೊಳಿಸಲಾಗುತ್ತದೆ.

ಸಿಟ್ಟಿಂಗ್ ವ್ಯವಸ್ಥೆ
  

ಸಿಟ್ಟಿಂಗ್ ವ್ಯವಸ್ಥೆ

ನೂತನ ಗೊ ಪ್ಲಸ್ ಎಂಪಿವಿ ಮೂರು ಸಾಲುಗಳ ಸಿಟ್ಟಿಂಗ್ ವ್ಯವಸ್ಥೆಯನ್ನು ಹೊಂದಿದೆ. ಹಾಗಿದ್ದರೂ ಹಿಂದುಗಡೆ ದೊಡ್ಡವರಿಗೆ ಆರಾಮದಾಯಕವಾಗಿ ಕುಳಿತುಕೊಳ್ಳುವುದು ಕಷ್ಟಕರ. ಇದನ್ನು ಮಕ್ಕಳಿಗಾಗಿ ಬಳಕೆ ಮಾಡಬಹುದು.

ಎರ್ಟಿಗಾ ಪ್ರತಿಸ್ಪರ್ಧಿ
  

ಎರ್ಟಿಗಾ ಪ್ರತಿಸ್ಪರ್ಧಿ

ದಟ್ಸನ್ ಗೊ ಪ್ಲಸ್ ಪ್ರಮುಖವಾಗಿಯೂ ಮಾರುತಿಯ ಜನಪ್ರಿಯ ಎರ್ಟಿಗಾ ಆವೃತ್ತಿಯನ್ನು ಟಾರ್ಗೆಟ್ ಮಾಡಲಿದೆ.

ಸ್ಮರ್ಧಾತ್ಮಕ ದರ
  

ಸ್ಮರ್ಧಾತ್ಮಕ ದರ

ಹಾಗೆಯೇ ಇದರ ಪ್ಲಸ್ ಪಾಯಿಂಟ್ ಏನೆಂದರೆ ಸ್ಮರ್ಧಾತ್ಮಕ ದರದಲ್ಲಿ ಆಗಮಿಸುತ್ತಿರುವುದು. ಮಾರುತಿ ಎರ್ಟಿಗಾ ಬೇಸ್ ವೆರಿಯಂಟ್ ಆರು ಲಕ್ಷ ರು.ಗಿಂತಲೂ ದುಬಾರಿಯಾಗಿದ್ದರೆ ದಟ್ಸನ್ ಗೊ ಪ್ಲಸ್ ಇದಕ್ಕೂ ಕಡಿಮೆ ದರದಲ್ಲಿ ಲಾಂಚ್ ಆಗಲಿದೆ.

ಬಿಡುಗಡೆ
  

ಬಿಡುಗಡೆ

ಸದ್ಯ ಲಭ್ಯವಿರುವ ಮಾಹಿತಿಗಳ ಪ್ರಕಾರ ಗೊ ಹ್ಯಾಚ್‌ಬ್ಯಾಕ್ ಬಿಡುಗಡೆಯ ಒಂದೆರಡು ತಿಂಗಳುಗಳ ಬಳಿಕ ದಟ್ಸನ್ ಗೊ ಪ್ಲಸ್ ಮಾರುಕಟ್ಟೆ ಪ್ರವೇಶಿಸಲಿದೆ.

ಐ2
  

ಐ2

ಈ ನಡುವೆ ಮೂರನೇ ಕಾನ್ಸೆಪ್ಟ್ ಐ2 ಕಾರನ್ನು ದಟ್ಸನ್ ಈಗಾಗಲೇ ಪ್ರದರ್ಶಿಸಿದೆ. ಎಲ್ಲ ಹೊಸತನದಿಂದ ಕೂಡಿದ ನೂತನ ಫ್ಲ್ಯಾಟ್‌ಫಾರ್ಮ್‌ನಲ್ಲಿ ಅಭಿವೃದ್ಧಿ ಕಾಣಲಿರುವ ನೂತನ ಕಾರು 2ರಿಂದ 3 ಲಕ್ಷ ರು.ಗಳ ಅಸುಪಾಸಿನಲ್ಲಿದೆ.

 ಆಲ್ಟೊ ಗಡಗಡ
  

ಆಲ್ಟೊ ಗಡಗಡ

ಇಲ್ಲಿ ದಟ್ಸನ್ ಇರಾದೆ ಸ್ಪಷ್ಟವಾಗಿದೆ. ಎಂಟ್ರಿ ಲೆವೆಲ್ ಮಾರುಕಟ್ಟೆಯಲ್ಲಿ ಮಾರುತಿ ಆಲ್ಟೊಗೆ ನೇರ ಪ್ರತಿಸ್ಫರ್ಧಿಯಾಗಿರಲಿದೆ. ಹಾಗಿದ್ದರೂ ಇದು 2014 ವರ್ಷಾಂತ್ಯದಲ್ಲಿ ಅಥವಾ 2015 ವರ್ಷಾರಂಭದಲ್ಲಷ್ಟೇ ಆಗಮನವಾಗಲಿದೆ.


English summary
Datsun, the brand revived by Nissan to enter the ever green entry level car market in India has an aggressive strategy going ahead. This year we'll get to witness Datsun take the bull (Maruti Suzuki) by its horns as it launches its first model, the GO hatchback, followed by the GO+ MPV and a third concept.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more