ಭಾರತದಲ್ಲಿ 2014 ಬಿಎಂಡಬ್ಲ್ಯು ಎಕ್ಸ್3 ಭರ್ಜರಿ ಲಾಂಚ್

By Nagaraja

ಭಾರತದಲ್ಲಿ ಭದ್ರ ನೆಲೆ ಸ್ಥಾಪಿಸುತ್ತಿರುವ ಜರ್ಮನಿಯ ಐಷಾರಾಮಿ ಸಂಸ್ಥೆಯಾಗಿರುವ ಬಿಎಂಡಬ್ಲ್ಯು, ಅತ್ಯಾಕರ್ಷಕ 2014 ಎಕ್ಸ್3 ವೆರಿಯಂಟ್‌ಗಳನ್ನು ದೇಶದಲ್ಲಿ ಭರ್ಜರಿ ಬಿಡುಗಡೆ ಮಾಡಿದೆ. ಒಟ್ಟು ಎರಡು ವೆರಿಯಂಟ್‌ಗಳಲ್ಲಿ ಎಕ್ಸ್3 ಲಭ್ಯವಾಗಲಿದೆ. ಅವುಗಳೆಂದರೆ,

ಎಕ್ಸ್3 ಎಕ್ಸ್‌ಡ್ರೈವ್ 20ಡಿ ಎಕ್ಸ್‌ಪೆಡಿಷನ್ ಮತ್ತು ಎಕ್ಸ್3 ಎಕ್ಸ್ ಡ್ರೈವ್ 20ಡಿ ಎಕ್ಸ್‌ಲೈನ್. ಇವೆರಡು ಅನುಕ್ರಮವಾಗಿ 44.90 ಹಾಗೂ 49.90 ಲಕ್ಷ ರು.ಗಳಷ್ಟು (ಎಕ್ಸ್ ಶೋ ರೂಂ ದೆಹಲಿ) ದುಬಾರಿಯೆನಿಸಲಿದೆ. ಪ್ರಸ್ತುತ ಡೀಸೆಲ್ ಎಂಜಿನ್‌ನಲ್ಲಿ ಮಾತ್ರ ಲಭ್ಯವಾಗಲಿರುವ ಈ ವೆರಿಯಂಟ್‌ಗಳು ಬಿಎಂಡಬ್ಲ್ಯು ಚೆನ್ನೈ ಘಟಕದಲ್ಲಿ ಸ್ಥಳೀಯವಾಗಿ ಉತ್ಪಾದನೆಯಾಗಲಿದೆ. ಇದು ಸ್ಪರ್ಧಾತ್ಮಕ ದರಗಳಲ್ಲಿ ಮಾರಾಟ ಮಾಡಲು ಸಹಕಾರಿಯಾಗಲಿದೆ.

 ಭಾರತದಲ್ಲಿ 2014 ಬಿಎಂಡಬ್ಲ್ಯು ಎಕ್ಸ್3 ಭರ್ಜರಿ ಲಾಂಚ್

ಹೊಸ ಹೊಸತನದಿಂದ ಕೂಡಿರುವ ವಿನ್ಯಾಸ ತಂತ್ರಜ್ಞಾನದಲ್ಲಿರುವ ನಿರ್ಮಾಣವಾಗಿರುವ ಬಿಎಂಡಬ್ಲ್ಯು ಎಕ್ಸ್3 ಎಕ್ಸ್ ಡ್ರೈವ್ ಕಾರಲ್ಲಿ ಎಕ್ಸ್‌ ಲೈನ್ ಪ್ಯಾಕೇಜ್ ಇರಲಿದ್ದು, ಇದು ಈ ಸ್ಪೋರ್ಟ್ಸ್ ಆಕ್ಟಿವಿಟಿ ವಾಹನವನ್ನು (ಎಸ್‌ಎವಿ) ಇನ್ನಷ್ಟು ವಿಶೇಷವಾಗಿಸಲಿದೆ.

 ಭಾರತದಲ್ಲಿ 2014 ಬಿಎಂಡಬ್ಲ್ಯು ಎಕ್ಸ್3 ಭರ್ಜರಿ ಲಾಂಚ್

ಅಷ್ಟೇ ಅಲ್ಲದೆ ಇದೇ ಮೊದಲ ಬಾರಿಗೆ ಎಕ್ಸ್3 ಎಕ್ಸ್‌ಡ್ರೈವ್ 20ಡಿ ಆವೃತ್ತಿಯಲ್ಲಿ ಲೇಟೆಸ್ಟ್ ಜನರೇಷನ್ ಡೀಸೆಲ್ ಎಂಜಿನ್ ಬಳಕೆ ಮಾಡಲಾಗಿದೆ. ಇದರಿಂದ ಕಡಿಮೆ ಇಂಧನ ಬಳಕೆಯೊಂದಿಗೆ ಗರಿಷ್ಠ ನಿರ್ವಹಣೆ ನೀಡಲು ಸಾಧ್ಯವಾಗಲಿದೆ.

 ಭಾರತದಲ್ಲಿ 2014 ಬಿಎಂಡಬ್ಲ್ಯು ಎಕ್ಸ್3 ಭರ್ಜರಿ ಲಾಂಚ್

ನೂತನ ಬಿಎಂಡಬ್ಲ್ಯು ಎಕ್ಸ್3 ಎಕ್ಸ್ ಡ್ರೈವ್ ಮಾದರಿಯಲ್ಲಿ ಟ್ವಿನ್ ಪವರ್ 2 ಲೀಟರ್ ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸ್ಪಡಲಿದ್ದು, 187 ಅಶ್ವಶಕ್ತಿ (400 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ. ಅದೇ ರೀತಿ ಎಸ್ ಡ್ರೈವ್ ವೆರಿಯಂಟ್ 147 ಅಶ್ವಶಕ್ತಿ (360 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ.

 ಭಾರತದಲ್ಲಿ 2014 ಬಿಎಂಡಬ್ಲ್ಯು ಎಕ್ಸ್3 ಭರ್ಜರಿ ಲಾಂಚ್

ಪರಿಷ್ಕೃತ ಟ್ವಿನ್ ಸರ್ಕ್ಯೂಲರ್ ಹೆಡ್‌ಲೈಟ್, ಕಣ್ಮಣ ಸೆಳೆಯುವ ಕಿಡ್ನಿ ಗ್ರಿಲ್ ಫ್ರಂಟ್ ಮತ್ತು ರಿಯರ್ ಬಂಪರ್, ಎಕ್ಸ್‌ಟೀರಿಯರ್ ಕನ್ನಡಿ ಜೊತೆ ಇಂಟೆಗ್ರೇಟಡ್ ಸಿಗ್ನಲ್ ಇಂಡಿಕೇಟರ್‌ಗಳು ಹೊಸ ಮಾದರಿಯನ್ನು ಇನ್ನಷ್ಟು ಐಷಾರಾಮಿಯನ್ನಾಗಿ ಮಾಡಲಿದೆ.

 ಭಾರತದಲ್ಲಿ 2014 ಬಿಎಂಡಬ್ಲ್ಯು ಎಕ್ಸ್3 ಭರ್ಜರಿ ಲಾಂಚ್

ಕಾರಿನೊಳಗೂ ಪ್ರೀಮಿಯಂ ವೈಶಿಷ್ಟ್ಯಗಳಿಗೆ ಆದ್ಯತೆ ಕೊಡಲಾಗಿದ್ದು, ಕ್ರೋಮ್ ಆಸೆಂಟ್, ಮುಚ್ಚಬಹುದಾದ ಕವರ್ ಹೋಲ್ಡರ್ ಮತ್ತು ಹೊಸ ಪ್ಯಾನೆಲ್ ಇರಲಿದೆ. ಅಷ್ಟೇ ಅಲ್ಲದೆ ಎಚ್‌ವಿಎಸಿ ಇನ್ನಷ್ಟು ವಿಭಿನ್ನವಾಗಿಸಲಿದೆ.

 ಭಾರತದಲ್ಲಿ 2014 ಬಿಎಂಡಬ್ಲ್ಯು ಎಕ್ಸ್3 ಭರ್ಜರಿ ಲಾಂಚ್

ಅಂದ ಹಾಗೆ ಹೊಸ ಬಿಎಂಡಬ್ಲ್ಯು ಎಕ್ಸ್ ಎಕ್ಸ್ ಡ್ರೈವ್ ಆವೃತ್ತಿಗಳು ಆಡಿ ಕ್ಯೂ5 ಮತ್ತು ಲ್ಯಾಂಡ್ ರೋವರ್ ಫ್ರೀಲ್ಯಾಂಡರ್ 2 ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಿರಲಿದೆ.

More from DriveSpark

Article Published On: Thursday, August 28, 2014, 16:40 [IST]
English summary
2014 BMW X3 launched in India at a starting price of Rs 44.9 lakh
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+