2014 ಹ್ಯುಂಡೈ ಸೊಲರಿಸ್ (ವೆರ್ನಾ) ಭರ್ಜರಿ ಲಾಂಚ್

By Nagaraja

ಭಾರತದಲ್ಲಿ ವೆರ್ನಾ ಹೆಸರಿನಿಂದಲೇ ಜನಪ್ರಿಯವಾಗಿರುವ 2014 ಹ್ಯುಂಡೈ ಸೊಲರಿಸ್ ರಷ್ಯಾದಲ್ಲಿ ಭರ್ಜರಿ ಲಾಂಚ್ ಕಂಡಿದೆ. ಇದರೊಂದಿಗೆ ಮುಂದಿನ ತಲೆಮಾರಿನ ವೆರ್ನಾ ಭಾರತದಲ್ಲೂ ಬಿಡುಗಡೆಯಾಗುವುದಕ್ಕೆ ಸ್ಪಷ್ಟ ಸೂಚನೆ ದೊರಕಿದೆ.

2014 ಹ್ಯುಂಡೈ ಸೊಲರಿಸ್ ಫೇಸ್‌ಲಿಫ್ಟ್ ವರ್ಷನ್ ಸಂಸ್ಥೆಯ ಫ್ಲ್ಯೂಯಿಡಿಕ್ 2.0 ವಿನ್ಯಾಸ ತತ್ವಶಾಸ್ತ್ರವನ್ನು ಅನುಸರಿಸಿದೆ. ಇದನ್ನು ನೀವಿಗಲೇ ಹೊಸ ಜೆನಿಸಿಸ್ ಹಾಗೂ ಸೊನಾಟಾದಲ್ಲಿ ನೋಡಿರಬಹುದು. ಅಷ್ಟಕ್ಕೂ 2014 ಹ್ಯುಂಡೈ ಸೊಲರಿಸ್ ಭಾರತ ಎಂಟ್ರಿ ಯಾವಾಗ? ಹೆಚ್ಚಿನ ಮಾಹಿತಿಗಳಿಗಾಗಿ ಚಿತ್ರ ಪುಟದತ್ತ ಮುಂದುವರಿಯರಿ.

2014 ಹ್ಯುಂಡೈ ಸೊಲರಿಸ್ (ವೆರ್ನಾ) ಭರ್ಜರಿ ಲಾಂಚ್

2014 ಹ್ಯುಂಡೈ ಸೊಲರಿಸ್ ಕಾರಿನ ಮುಂಭಾಗದಲ್ಲಿ ಹೆಚ್ಚಿನ ಬದಲಾವಣೆ ಕಂಡುಬಂದಿದೆ. ಇದು ವಿಶಿಷ್ಟ ನೋಟದಿಂದ ಕಂಗೊಳಿಸುತ್ತಿದ್ದು, ಆಧುನಿಕತೆಯನ್ನು ಕಾಯ್ದುಕೊಂಡಿದೆ.

2014 ಹ್ಯುಂಡೈ ಸೊಲರಿಸ್ (ವೆರ್ನಾ) ಭರ್ಜರಿ ಲಾಂಚ್

ನೂತನ ಸೊಲರಿಸ್, ಪರಿಷ್ಕೃತ ಹೆಡ್‌ಲೈಟ್, ಪುನರ್ ವಿನ್ಯಾಸಿತ ಫಾಗ್ ಲ್ಯಾಂಪ್ ಮತ್ತು ಡೇಟೈಮ್ ರನ್ನಿಂಗ್ ಲೈಟ್ಸ್ ಪಡೆದುಕೊಂಡಿದೆ. ಒಟ್ಟಾರೆಯಾಗಿ ಬಾಹ್ಯ ಭಾಗದಲ್ಲಿ ಸಂಪೂರ್ಣ ಹೊಸ ನೋಟವನ್ನು ಪಡೆದುಕೊಂಡಿರುತ್ತದೆ.

2014 ಹ್ಯುಂಡೈ ಸೊಲರಿಸ್ (ವೆರ್ನಾ) ಭರ್ಜರಿ ಲಾಂಚ್

ಇನ್ನು ಹಿಂದುಗಡೆ ಬ್ರೇಕ್ ಲ್ಯಾಂಪ್, ಎಲ್‌ಇಡಿ ಲೈಟ್ಸ್ ಮತ್ತು ಲೋವರ್ ಬಂಪರ್ ರೂಪದಲ್ಲಿ ಬದಲಾವಣೆ ಕಂಡುಬಂದಿದೆ.

2014 ಹ್ಯುಂಡೈ ಸೊಲರಿಸ್ (ವೆರ್ನಾ) ಭರ್ಜರಿ ಲಾಂಚ್

ಆದರೆ ಗಮನಾರ್ಹವೆಂದರೆ ಕಾರಿನ ಇಂಟಿರಿಯರ್ ಭಾಗಗಳಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ.

2014 ಹ್ಯುಂಡೈ ಸೊಲರಿಸ್ (ವೆರ್ನಾ) ಭರ್ಜರಿ ಲಾಂಚ್

ಇನ್ನು ತಾಂತ್ರಿಕವಾಗಿಯೂ ಎಂಜಿನ್ ಮಾನದಂಡಗಳಲ್ಲೂ ಬದಲಾವಣೆಗಳಿಲ್ಲ. ಇದು 1.4 ಲೀಟರ್ ಮತ್ತು 1.6 ಲೀಟರ್ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಇಲ್ಲಿ ಭಾರತ ವರ್ಷನ್ 1.6 ಲೀಟರ್ ಪೆಟ್ರೋಲ್ ಎಂಜಿನ್ 6 ಸ್ಪೀಡ್ ಮ್ಯಾನುವಲ್ ಹಾಗೂ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಸಹ ಪಡೆಯುವ ಸಾಧ್ಯತೆಯಿದೆ.

2014 ಹ್ಯುಂಡೈ ಸೊಲರಿಸ್ (ವೆರ್ನಾ) ಭರ್ಜರಿ ಲಾಂಚ್

ಅಂತಿಮವಾಗಿ 2014 ಹ್ಯುಂಡೈ ಸೊಲರಿಸ್ ರಷ್ಯಾದಲ್ಲಿ 8 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ. ಇನ್ನು ಭಾರತದಲ್ಲಿ ಕಳೆದ ವರ್ಷದ ವರೆಗೂ ಅತ್ಯುತ್ತಮ ಸೆಡಾನ್ ಕಾರೆನಿಸಿಕೊಂಡಿದ್ದ ಹ್ಯುಂಡೈ ವೆರ್ನಾ ಸವಾಲನ್ನು ಹೊಸ ಹೋಂಡಾ ಸಿಟಿ ಮೆಟ್ಟಿ ನಿಂತಿತ್ತು. ಇದೀಗ ಆಗಮನವಾಗಲಿರುವ ಫೇಸ್‌ಲಿಫ್ಟ್ ವರ್ಷನ್ ಇದಕ್ಕೆ ಉತ್ತರವಾಗಲಿದೆ.

2014 ಹ್ಯುಂಡೈ ಸೊಲರಿಸ್ (ವೆರ್ನಾ) ಭರ್ಜರಿ ಲಾಂಚ್

ಭಾರತದಲ್ಲಿ ಈ ಬಹುನಿರೀಕ್ಷಿತ ಕಾರು ವರ್ಷಾಂತ್ಯದಲ್ಲಿ ಅಥವಾ 2015 ವರ್ಷಾರಂಭದಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.

More from DriveSpark

Article Published On: Wednesday, June 18, 2014, 17:17 [IST]
English summary
The India bound next-gen Hyundai Verna has been launched in Russia where the sedan is sold under the Solaris nameplate.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+