ಮಾರುತಿ ಸೆಲೆರಿಯೊ ಎಂಟ್ರಿ ಇನ್ನು ಹತ್ತಿರ ಹತ್ತಿರ!

By Nagaraja

ಎ-ಸ್ಟಾರ್ ಬದಲಿ ಕಾರೆಂದೇ ಬಿಂಬಿತಗೊಂಡಿರುವ ಮಾರುತಿ ಸುಜುಕಿಯ ನೂತನ ಸೆಲೆರಿಯೊ ಕಾರು ಬುದ್ಧ ಅಂತರಾಷ್ಟ್ರೀಯ ಸರ್ಕ್ಯೂಟ್‌ನಲ್ಲಿ ಕಂಡುಬಂದಿದೆ.

ವೈಎಲ್7 ಕೋಡ್ ಪಡೆದುಕೊಂಡಿರುವ ಮಾರುತಿ ಸುಜುಕಿ ಸೆಲೆರಿಯೊ ವಾಲ್ ಪೇಪರ್ ಚಿತ್ರಗಳು ಇದುವರೆಗೆ ಬಿಡುಗಡೆಗೊಂಡಿದ್ದವು. ಆದರೆ ಇದೀಗ ರಾಷ್ಟ್ರ ರಾಜಧಾನಿಯಲ್ಲಿ ಯಾವುದೇ ಮುಚ್ಚುಮರೆಯಿಲ್ಲದೆ ಸೆರೆ ಹಿಡಿಯುವಲ್ಲಿ ಮೋಟಾರ್ ಬೀಮ್ ಡಾಟ್ ಕಾಮ್ ಯಶಸ್ವಿಯಾಗಿದೆ. ಸುಜುಕಿ ಎ ವಿಂಡ್ ಕಾನ್ಸೆಪ್ಟ್‌ನಲ್ಲಿ ನಿರ್ಮಾಣವಾಗಿರುವ ಸೆಲೆರಿಯೊ ತಾಜಾ ವಿನ್ಯಾಸವನ್ನು ಪಡೆದುಕೊಂಡಿದೆ.

ಮಾರುತಿ ಸೆಲೆರಿಯೊ ಎಂಟ್ರಿ ಇನ್ನು ಹತ್ತಿರ ಹತ್ತಿರ!

ಹಿಂದುಗಡೆಯಿಂದ ನೋಡಿದರೆ ಮಾರುತಿ ಸೆಲೆರಿಯೊ ಒಂದು ಹಂತದ ವರೆಗೂ ಆಲ್ಟೊ ಲುಕ್ ಪಡೆದುಕೊಂಡಿದೆ. ಒಟ್ಟಾರೆಯಾಗಿ ಪ್ರಭಾವಿ ಎಕ್ಸ್‌ಟೀರಿಯರ್ ವಿನ್ಯಾಸ ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ.(ಫೋಟೊ ಕೃಪೆ: ಮೋಟಾರ್ ಬೀಮ್ ಡಾಟ್ ಕಾಮ್)

ಮಾರುತಿ ಸೆಲೆರಿಯೊ ಎಂಟ್ರಿ ಇನ್ನು ಹತ್ತಿರ ಹತ್ತಿರ!

ಆರಂಭದಲ್ಲಿ ಮಾರುತಿ ಸೆಲೆರಿಯೊ 1.0 ಲೀಟರ್ ಕೆ10 ಪೆಟ್ರೋಲ್ ಎಂಜಿನ್‌ನಲ್ಲಿ ಲಭ್ಯವಾಗಲಿದೆ. ಇದು 67 ಬಿಎಚ್‌ಪಿ ಪವರ್ ಉತ್ಪಾದಿಸುವ (90ಎನ್‌ಎಂ ಪೀಕ್ ಟಾರ್ಕ್) ಸಾಮರ್ಥ್ಯ ಹೊಂದಿದೆ. ಹಾಗೆಯೇ 5 ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಇರಲಿದೆ.(ಮೋಟಾರ್ ಬೀಮ್ ಡಾಟ್ ಕಾಮ್)

ಮಾರುತಿ ಸೆಲೆರಿಯೊ ಎಂಟ್ರಿ ಇನ್ನು ಹತ್ತಿರ ಹತ್ತಿರ!

ಮಾರುತಿ ಸೆಲೆರಿಯೊ ಪ್ರಮುಖವಾಗಿಯೂ ಹ್ಯುಂಡೈ ಐ10 ಕಾರಿಗೆ ಪ್ರತಿಸ್ಪರ್ಧಿಯಾಗಿರಲಿದೆ. ಮುಂದಿನ ದಿನಗಳಲ್ಲಿ ಸೆಲೆರಿಯೊ ಆಟೋಮ್ಯಾಟಿಕ್ ವೆರಿಯಂಟ್ ಕೂಡಾ ಆಗಮನವಾಗಲಿದೆ.

ಮಾರುತಿ ಸೆಲೆರಿಯೊ ಎಂಟ್ರಿ ಇನ್ನು ಹತ್ತಿರ ಹತ್ತಿರ!

ಅಂದ ಹಾಗೆ ಡೀಸೆಲ್ ವೆರಿಯಂಟ್ ವರ್ಷಾಂತ್ಯದಲ್ಲಿ ಆಗಮನವಾಗುವ ಸಾಧ್ಯತೆಯಿದೆ. ಇದು 800ಸಿಸಿ 2 ಸಿಲಿಂಡ್ ಯುನಿಟ್ ಪಡೆಯಲಿದೆ.

ಮಾರುತಿ ಸೆಲೆರಿಯೊ ಎಂಟ್ರಿ ಇನ್ನು ಹತ್ತಿರ ಹತ್ತಿರ!

ಇನ್ನು 2014 ಆಟೋ ಎಕ್ಸ್ ಪೋದಲ್ಲಿ ಲಾಂಚ್ ಆಗಲಿರುವ ಮಾರುತಿ ಸೆಲೆರಿಯೊ ದರ 4.60 ಲಕ್ಷ ರು.ಗಳಿಂದ 5.95 ಲಕ್ಷ ರು.ಗಳ ವರೆಗಿರಲಿದೆ.

More from DriveSpark

Article Published On: Wednesday, January 15, 2014, 6:00 [IST]
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+