2014 ಮರ್ಸಿಡಿಸ್ ಬೆಂಝ್ ಸಿಎಲ್‌ಎಸ್ 350 ಬಿಡುಗಡೆ
ಜರ್ಮನಿಯ ಐಷಾರಾಮಿ ಕಾರು ತಯಾರಿಕ ಸಂಸ್ಥೆಯಾಗಿರುವ ಮರ್ಸಿಡಿಸ್ ಬೆಂಝ್, ಇತ್ತೀಚೆಗಷ್ಟೇ 'ಎಡಿಷನ್ 1' ಎ ಕ್ಲಾಸ್ ಹಾಗೂ ಬಿ ಕ್ಲಾಸ್ ಆವೃತ್ತಿಗಳನ್ನು ಪರಿಚಯಿಸಿತ್ತು. ಇದೇ ಸಂದರ್ಭದಲ್ಲಿ ಪಸಕ್ತ ಸಾಲಿನಲ್ಲೇ 10 ಹೊಸ ಮಾದರಿಗಳನ್ನು ಪರಿಚಯಿಸುವುದಾಗಿ ಮಾತು ಕೊಟ್ಟಿತ್ತು.
ಮರ್ಸಿಡಿಸ್ ಬೆಂಝ್ ಎಡಿಷನ್ 1 ಎ ಕ್ಲಾಸ್ ಬಿ ಕ್ಲಾಸ್ ಲಾಂಚ್
ಇದರಂತೆ ಕೊಟ್ಟ ಮಾತನ್ನು ಪಾಲಿಸುತ್ತಿರುವ ಬೆಂಝ್, ಅತ್ಯಂಶ ಶಕ್ತಿಶಾಲಿ 2014 ಸಿಎಲ್‌ಎಸ್ 350 ಮಾದರಿಯನ್ನು ದೇಶದ ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ. ಇದರ ದರ ಬೆಲೆ ಎಷ್ಟು ಗೊತ್ತೇ? ಇತ್ಯಾದಿ ಮಹತ್ವಪೂರ್ಣ ಮಾಹಿತಿಗಳಿಗಾಗಿ ಚಿತ್ರ ಸಂಪುಟದತ್ತ ಮುಂದುವರಿಯಿರಿ...

ನೂತನ 2014 ಬೆಂಝ್ ಸಿಎಲ್‌ಎಸ್ 350 ಕಾರಿನ ದೆಹಲಿ ಎಕ್ಸ್ ಶೋ ಬೆಲೆ ಬರೋಬ್ಬರಿ 89.90 ಲಕ್ಷ ರು.ಗಳಾಗಿವೆ.

ಇದರಲ್ಲಿ ಅತ್ಯಂತ ಶಕ್ತಿಶಾಲಿ 3498ಸಿಸಿ ಪೆಟ್ರೋಲ್ ವಿ6 ಎಂಜಿನ್ ಆಳವಡಿಸಲಾಗಿದೆ. ಇದು 7 ಜಿ ಟ್ರಾನಿಕ್ ಪ್ಲಸ್ ಟ್ರಾನ್ಸ್‌ಮಿಷನ್ ಹೊಂದಿದ್ದು, 370 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

ಬೆಂಝ್‌ನ ಲಗ್ಷುರಿ ಸೆಡಾನ್ ಕಾರು ಕೇವಲ 6.1 ಸೆಕೆಂಡುಗಳಲ್ಲಿ ಗಂಟೆಗೆ 0-100 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ. ಅಲ್ಲದೆ 250ಕೀ.ಮೀ.ಗಿಂತಲೂ ಹೆಚ್ಚಿನ ವೇಗದಲ್ಲಿ ಸಂಚರಿಸಿದ್ದಲ್ಲಿ ವಿದ್ಯುನ್ಮಾನವಾಗಿ ನಿಯಂತ್ರಣ ಹೇರಲಿದೆ.

ಹೊಸ ಬೆಂಝ್ ಕಾರು, ಆಕರ್ಷಕ ವಿನ್ಯಾಸ ಹಾಗೂ ಕ್ರೀಡಾತ್ಮಕತೆಯಲ್ಲಿ ಪರಿಷ್ಕರಣೆ ತರಲಾಗಿದ್ದು, ಇದು ಗರಿಷ್ಠ ಸುರಕ್ಷತಾ ಮಾನದಂಡಗಳ ಜೊತೆಗೆ ಹೆಚ್ಚು ಆರಾಮದಾಯಕತೆ ಪ್ರದಾನ ಮಾಡಲಿದೆ.

ಮರ್ಸಿಡಿಸ್ ಬೆಂಝ್ ಇಂಡಿಯಾ ಮಹಾನಿರ್ದೇಶಕ ಹಾಗೂ ಸಿಇಒ ಎಬೆರ್‌ಹಾರ್ಡ್ ಕೆರ್ನ್ ಪ್ರಕಾರ, ಬೆಂಝ್ ಕಾರು ಇತರ ಕಾರಿನಲ್ಲಿರದ ಅನಿಯಮಿತ ಸೊಗಸು ಹಾಗೂ ಪ್ರಭಾವತ್ಮಕ ವಿನ್ಯಾಸದ ಸಂಯೋಜನೆಯಾಗಿದೆ ಎಂದಿದ್ದಾರೆ.

ನೂತನ ಬೆಂಝ್ ಸಿಎಲ್‌ಎಸ್350, ಆಕ್ಟಿವ್ ಪಾರ್ಕ್ ಅಸಿಸ್ಟ್, ರಿವರ್ಸ್ ಕ್ಯಾಮೆರಾ, ಹರ್ಮಾನ್ ಕರ್ಡಾನ್ ಲೋಜಿಕ್ 7 ಸೌರಂಡ್ ಸಿಸ್ಟಂ ಹಾಗೂ ಸಬ್‌ವೂಫರ್ ಸೇರಿದಂತೆ 14 ಸ್ಪೀಕರ್ ಸೌಲಭ್ಯಗಳನ್ನು ಹೊಂದಿರುತ್ತದೆ.

ಹೊಸ ಬೆಂಝ್ ಕಾರು ಸನ್‌ರೂಫ್ ಜೊತೆಗೆ ಕ್ರೀಡಾತ್ಮಕ ಚಾಲನಾ ಅನುಭವ ನೀಡಲಿದೆ. ಇದರ ಸ್ಟೀರಿಂಗ್ ವೀಲ್ ಪ್ಯಾಡಲ್ ಶಿಫ್ಟ್ ಸಹ ಪಡೆದುಕೊಂಡಿದೆ.


Click it and Unblock the Notifications








