ಬೆಂಝ್ ಲೇಟೆಸ್ಟ್ ವರ್ಷನ್ ಎಸ್ ಕ್ಲಾಸ್ ಎಂಟ್ರಿ
ಜರ್ಮನಿಯ ಐಷಾರಾಮಿ ಕಾರು ತಯಾರಕ ಸಂಸ್ಥೆಯಾಗಿರುವ ಮರ್ಸಿಡಿಸ್ ಬೆಂಝ್ ತನ್ನ ಲೇಟೆಸ್ಟ್ ವರ್ಷನ್ ಆಗಿರುವ ಎಸ್ ಕ್ಲಾಸ್ ದೇಶದ ಮಾರುಕಟ್ಟೆಗೆ ಪರಿಚಯಿಸಿದೆ. ಇದರ ದೆಹಲಿ ಎಕ್ಸ್ ಶೋ ರೂಂ ದರ 1.57 ಕೋಟಿ ರು.ಗಳಾಗಿವೆ.
ಅಕ್ಟೋಬರ್ ತಿಂಗಳಲ್ಲಿ ಜಾಗತಿಕ ಅನಾವರಣಗೊಂಡಿರುವ ಬಳಿಕ ಕೇವಲ ಮೂರು ತಿಂಗಳಲ್ಲೇ ಎಸ್ ಕ್ಲಾಸ್ ಭಾರತ ಪ್ರವೇಶ ಪಡೆದಿದೆ. ಇದು ದೇಶದಲ್ಲಿ ಐಷಾರಾಮಿ ಕಾರುಗಳ ಬೇಡಿಕೆ ಹೆಚ್ಚುತ್ತಿರುವುದಕ್ಕೆ ನಿದರ್ಶನವಾಗಿದೆ. ಅಲ್ಲದೆ ಭಾರತದಂತಹ ಬೆಳೆದು ಬರುತ್ತಿರುವ ಲಗ್ಷುರಿ ಮಾರುಕಟ್ಟೆಗೆ ಬೆಂಝ್ ನೀಡುವ ಪ್ರಾಮುಖ್ಯತೆಯನ್ನು ತೋರಿಸಿದೆ.

ಆರಂಭದಲ್ಲಿ ಕಂಪ್ಲೀಟ್ ಬಿಲ್ಟ್ ಯುನಿಟ್ ಮುಖಾಂತರ ಮಾರಾಟವಾಗಲಿರುವ ಬೆಂಝ್ ಎಸ್ ಕ್ಲಾಸ್ ಬಳಿಕ ಮುಂದಿನ ಕೆಲವೇ ತಿಂಗಳುಗಳಲ್ಲಿ ಸ್ಥಳೀಯವಾಗಿ ಉತ್ಪಾದನೆಯಾಗಲಿದೆ.

ನೂತನ ಎಸ್ ಕ್ಲಾಸ್‌ನಲ್ಲಿ 4.6 ಲೀಟರ್ ವಿ8 ಎಂಜಿನ್ ಆಳವಡಿಸಲಾಗಿದ್ದು, ಗಂಟೆಗೆ ಗರಿಷ್ಠ 250 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ ಕೇವಲ 5 ಸೆಕೆಂಡುಗಳಲ್ಲಿ ಗಂಟೆಗೆ 0-100 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿದೆ.

ಹಾಗಿದ್ದರೆ ಕೇವಲ ಒಂದು ವೆರಿಯಂಟ್‌ನಲ್ಲಿ ಮಾತ್ರ ಬೆಂಝ್ ಎಸ್ ಕ್ಲಾಸ್ ಭಾರತದಲ್ಲಿ ಲಭ್ಯವಾಗಲಿದೆ. ಅದುವೇ ಎಸ್500.

ನಿಮ್ಮ ಮಾಹಿತಿಗಾಗಿ 125 ಯುನಿಟ್‌ಗಳು ಈಗಾಗಲೇ ಬುಕ್ಕಿಂಗ್ ಆಗಿವೆ. ಇದು ಬೆಂಝ್ ಎಸ್ ಕ್ಲಾಸ್ ಭರ್ಜರಿ ಎಂಟ್ರಿಯನ್ನು ನಿರೂಪಿಸಿದೆ.

ಅಂದ ಹಾಗೆ ನೂತನ ಎಸ್ ಕ್ಲಾಸ್ ವೆರಿಯಂಟ್ ವಿತರಣೆ ಕಾರ್ಯವು ಎಪ್ರಿಲ್ ತಿಂಗಳಿನಲ್ಲಷ್ಟೇ ಆರಂಭವಾಗಲಿದೆ. ಇದರ ಎಂಜಿನ್ 453 ಬಿಎಚ್‌ಪಿ (700 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಮರ್ಸಿಡಿಸ್ ಎಸ್ ಕ್ಲಾಸ್ 4 ಮ್ಯಾಟಿಕ್ ಆಲ್ ವೀಲ್ ಡ್ರೈವ್ ಸಿಸ್ಟಂ ಕೂಡಾ ಪಡೆದಿದೆ. ಹಾಗೆಯೇ ಹಿಂದುಗಡೆ ಚಕ್ರಗಳಿಗೆ ಸೆವೆಲ್ ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಹೊಂದಿರಲಿದೆ.


Click it and Unblock the Notifications








