ಹೊಸ ಡೀಸೆಲ್ ಎಂಜಿನ್‌ನೊಂದಿಗೆ 2014 ಸ್ಕೋಡಾ ರಾಪಿಡ್ ಲಾಂಚ್

By Nagaraja

ಜೆಕ್ ಗಣರಾಜ್ಯದ ಪ್ರತಿಷ್ಠಿತ ಸಂಸ್ಥೆಯಾಗಿರುವ ಸ್ಕೋಡಾ, ತನ್ನ ಜನಪ್ರಿಯ 2014 ರಾಪಿಡ್ ಕಾರನ್ನು ದೇಶದ ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ. ಇದರ ಬೆಲೆ 7.22 ಲಕ್ಷ ರು.ಗಳಾಗಿರಲಿದೆ (ದೆಹಲಿ ಎಕ್ಸ್ ಶೋ ರೂಂ).

ಹೊಸತಾದ 1.5 ಲೀಟರ್ ಡೀಸೆಲ್ ನಿಯಂತ್ರಿತ ಎಂಜಿನ್ ಮತ್ತು 7 ಸ್ಪೀಡ್ ಡಿಎಸ್‌ಜಿ ಗೇರ್ ಬಾಕ್ಸ್ ತಂತ್ರಗಾರಿಕೆಯು ಹೊಸ ಸ್ಕೋಡಾ ರಾಪಿಡ್ ಕಾರಿನ ಪ್ರಮುಖ ವೈಶಿಷ್ಟ್ಯವಾಗಿರಲಿದೆ. ಇದರಂತೆ ಈ ಬಾರಿಯ ಹಬ್ಬದ ಆವೃತ್ತಿಯ ಸಂದರ್ಭದಲ್ಲಿ ಉತ್ತಮ ಮಾರಾಟ ಗಿಟ್ಟಿಸಿಕೊಳ್ಳುವ ನಿರೀಕ್ಷೆಯನ್ನಿಟ್ಟುಕೊಂಡಿದೆ.

2014 ಸ್ಕೋಡಾ ರಾಪಿಡ್ ಲಾಂಚ್

ವಿನ್ಯಾಸದ ದೃಷ್ಟಿಯಲ್ಲಿ ಹೊಸ ರಾಪಿಡ್ ಹೆಚ್ಚಿನ ಬದಲಾವಣೆಗಳನ್ನು ಪಡೆದುಕೊಂಡಿಲ್ಲ. ಆದರೆ ಹೊಸ ಎಂಜಿನ್ ಆಯ್ಕೆಯು ಈ ವಿಭಾಗದಲ್ಲಿ ವಿಭಿನ್ನವಾಗಿ ಗುರುತಿಸಿಕೊಳ್ಳಲು ನೆರವಾಗಲಿದೆ.

2014 ಸ್ಕೋಡಾ ರಾಪಿಡ್ ಲಾಂಚ್

ಆದರೆ ಮಿಡ್ ಸೈಜ್ ಸೆಡಾನ್ ವಿಭಾಗದಲ್ಲಿ ಪೈಪೋಟಿ ಒಡ್ಡುವುದು ಅಂದುಕೊಂಡಷ್ಟು ಸರಳವಲ್ಲ. ಯಾಕೆಂದರೆ ಈ ವಿಭಾಗದಲ್ಲಿ ಹೋಂಡಾ ಸಿಟಿ, ಹ್ಯುಂಡೈ ವರ್ನಾ ಮತ್ತು ಇನ್ನಷ್ಟೇ ಬಿಡುಗಡೆಯಾಗಲಿರುವ ಮಾರುತಿ ಸಿಯಾಝ್ ಸವಾಲು ಎದುರಾಗಲಿದೆ.

2014 ಸ್ಕೋಡಾ ರಾಪಿಡ್ ಲಾಂಚ್

1.5 ಲೀಟರ್ ಎಂಜಿನ್ 2014 ಸ್ಕೋಡಾ ರಾಪಿಡ್ ಕಾರಿನ ಪ್ರಮುಖ ವಿಶೇಷತೆಯಾಗಿದೆ. ಇದನ್ನೇ ಫೋಕ್ಸ್‌ವ್ಯಾಗನ್ ಪೊಲೊ ಜಿಟಿ ಟಿಡಿಐ ಮತ್ತು ವೆಂಟೊ ಮಾದರಿಯಲ್ಲೂ ಆಳವಡಿಸಲಾಗಿದೆ. ಇದು 105 ಅಶ್ವಶಕ್ತಿ (250 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

2014 ಸ್ಕೋಡಾ ರಾಪಿಡ್ ಲಾಂಚ್

ಅಂದರೆ ಪವರ್ 100ಸಿಸಿಯಷ್ಟು ಕಡಿಮೆ ಮಾಡಲಾಗಿದೆ. ಇದು 7 ಸ್ಪೀಡ್ ಡ್ಯುಯಲ್ ಕ್ಲಚ್ ಗೇರ್ ಬಾಕ್ಸ್ ಮತ್ತು ಸೆವೆನ್ ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಪಡೆದುಕೊಳ್ಳಲಿದೆ. ಇದನ್ನು ಪೊಲೊ ಟಿಎಸ್‌ಐನಿಂದ ಆಮದು ಮಾಡಲಾಗಿದೆ.

2014 ಸ್ಕೋಡಾ ರಾಪಿಡ್ ಲಾಂಚ್

ಐದು ಸ್ಪೋಕ್ ಅಲಾಯ್ ವೀಲ್ ಹೊರಮೈ ವ್ಯತ್ಯಾಸಕ್ಕೆ ಕಾರಣವಾಗಲಿದೆ. ಇನ್ನು ಕಾರಿನೊಳಗೆ ಹೊಸತಾದ ಸ್ಟೀರಿಂಗ್ ವೀಲ್ ಅನ್ನು ಯೆಟಿ ಮತ್ತು ಸೂಪರ್‌ನಿಂದ ಕ್ರೂಸ್ ಕಂಟ್ರೋಲ್ ಮತ್ತು ಕಾರ್ಡ್ ಹೋಲ್ಡರ್ ಆಮದು ಮಾಡಲಾಗಿದೆ.

2014 ಸ್ಕೋಡಾ ರಾಪಿಡ್ ಲಾಂಚ್

ಸ್ಕೋಡಾ ನೀಡುತ್ತಿರುವ ಹೊಸ ಅಪ್ಲಿಕೇಷನ್ ಅನ್ನು ಡೌನ್‌ಲೋಡ್ ಮಾಡುವ ಮೂಲಕ ನಿಮ್ಮ ಸ್ಮಾರ್ಟ್‌ಫೋನ್‌ನಿಂದಲೇ ಕಾರು ಮ್ಯೂಸಿಕ್ ಸಿಸ್ಟಂ ನಿಯಂತ್ರಿಸಬಹುದಾಗಿದೆ.

2014 ಸ್ಕೋಡಾ ರಾಪಿಡ್ ಲಾಂಚ್

ಇಷ್ಟೆಲ್ಲ ಆದರು ಟಚ್ ಸ್ಕ್ರೀನ್, ರಿಯರ್ ಪಾರ್ಕಿಂಗ್ ಕ್ಯಾಮೆರಾ, ಲೆಥರ್ ಸೀಟು, ಫುಶ್ ಸ್ಟಾರ್ಟ್/ಸ್ಟಾಪ್ ಸಿಸ್ಟಂ ಮತ್ತು ಸನ್ ರೂಫ್‌ಗಳಂತಹ (ಹೋಂಡಾ ಸಿಟಿಯಲ್ಲಿ ಮಾತ್ರ) ಸೌಲಭ್ಯಗಳ ಅಭಾವ ಕಾಡಲಿದೆ.

2014 ಸ್ಕೋಡಾ ರಾಪಿಡ್ ಲಾಂಚ್

ಅಂದ ಹಾಗೆ ನಾಲ್ಕು ವೆರಿಯಂಟ್‌ಗಳಲ್ಲಿ ಹೊಸ ಸ್ಕೋಡಾ ರಾಪಿಡ್ ಆಗಮನವಾಗುತ್ತಿದೆ. ಅವುಗಳೆಂದರೆ ಆಕ್ಟಿವ್, ಆಂಬಿಷನ್, ಆಂಬಿಷನ್ ಪ್ಲಸ್ ಮತ್ತು ಎಲೆಗನ್ಸ್.

2014 ಸ್ಕೋಡಾ ರಾಪಿಡ್ ಲಾಂಚ್

ಇವೆಲ್ಲದರ ಜೊತೆಗೆ ಬ್ಲ್ಯಾಕ್ ಪ್ಯಾಕೇಜ್ ಸೌಲಭ್ಯವನ್ನು ಸಂಸ್ಥೆ ಒದಗಿಸುತ್ತಿದೆ. ಇದರಲ್ಲಿ ಕಪ್ಪು ಹೆಡ್ ಲೈಟ್, ಫಾಗ್ ಲ್ಯಾಂಪ್, ಗ್ರಿಲ್, ಅಲಾಯ್ ವೀಲ್ ಮತ್ತು ರಿಯರ್ ಔಟ್‌ಸೈಡ್ ರಿಯರ್ ವ್ಯೂ ಸೇರಿರಲಿದೆ. ಇದು 20,000 ರು.ಗಳಷ್ಟು ದುಬಾರಿಯಾಗಲಿದೆ.

2014 ಸ್ಕೋಡಾ ರಾಪಿಡ್ ಲಾಂಚ್

ಇದರ ಪೆಟ್ರೋಲ್ ವೆರಿಯಂಟ್ 1.6 ಲೀಟರ್ ಎಂಪಿಐ ಎಂಜಿನ್ ಪಡೆದುಕೊಳ್ಳಲಿದ್ದು 105 ಅಶ್ವಶಕ್ತಿ (153 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ. ಅಂತೆಯೇ 5 ಸ್ಪೀಡ್ ಮ್ಯಾನುವಲ್ ಅಥವಾ 6 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಸಹ ಲಭ್ಯವಿರಲಿದೆ.

2014 ಸ್ಕೋಡಾ ರಾಪಿಡ್ ಲಾಂಚ್

ಇನ್ನು ಭಾರತೀಯ ವಾಹನ ಅಧ್ಯಯನ ಸಂಸ್ಥೆಯ ಮಾನ್ಯತೆಯ ಪ್ರಕಾರ ಹೊಸ ರಾಪಿಡ್ ಡಿಎಸ್‌ಜಿ ಪ್ರತಿ ಲೀಟರ್‌ಗೆ 21.66 ಕೀ.ಮೀ. ಡೀಸೆಲ್ ಮ್ಯಾನುವಲ್ 21.14 ಮತ್ತು ಮ್ಯಾನುವಲ್ ಹಾಗೂ ಪೆಟ್ರೋಲ್ ವೆರಿಯಂಟ್ 14.3 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ.

ರಾಪಿಡ್ ಪೆಟ್ರೋಲ್ (ಎಕ್ಸ್ ಶೋ ರೂಂ ದೆಹಲಿ)

ರಾಪಿಡ್ ಪೆಟ್ರೋಲ್ (ಎಕ್ಸ್ ಶೋ ರೂಂ ದೆಹಲಿ)

ಆಕ್ಟಿವ್ 7.22 ಲಕ್ಷ ರು.

ಆಂಬಿಷನ್ ಪ್ಲಸ್ - 8.17 ಲಕ್ಷ ರು.

ಆಂಬಿಷನ್ ಪ್ಲಸ್ ಎಟಿ - 9.14 ಲಕ್ಷ ರು.

ಎಲೆಗನ್ಸ್ - 8.72 ಲಕ್ಷ ರು.

ಎಲೆಗನ್ಸ್ ಎಟಿ - 9.68 ಲಕ್ಷ ರು.

 ಡೀಸೆಲ್ ರಾಪಿಡ್ (ಎಕ್ಸ್ ಶೋ ರೂಂ ದೆಹಲಿ)

ಡೀಸೆಲ್ ರಾಪಿಡ್ (ಎಕ್ಸ್ ಶೋ ರೂಂ ದೆಹಲಿ)

ಆಕ್ಟಿವ್ - 8.38 ಲಕ್ಷ ರು.

ಆಂಬಿಷನ್ ಪ್ಲಸ್ - 9.24 ಲಕ್ಷ ರು.

ಆಂಬಿಷನ್ ಪ್ಲಸ್ ಡಿಎಸ್‌ಜಿ - 10.34 ಲಕ್ಷ ರು.

ಎಲೆಗನ್ಸ್ - 9.74 ಲಕ್ಷ ರು.

ಎಲೆಗನ್ಸ್ ಡಿಎಸ್‌ಜಿ - 10.84 ಲಕ್ಷ ರು.

More from DriveSpark

Article Published On: Thursday, September 25, 2014, 17:18 [IST]
English summary
2014 Skoda Rapid launched in India with the new 1.5-litre diesel mated to a 7-speed DSG gearbox.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+