ಜಪಾನ್‌ನ ಮುಂಚೂಣಿಯ ವಾಹನ ತಯಾರಕ ಸಂಸ್ಥೆಯಾಗಿರುವ ಟೊಯೊಟಾ ಕಿರ್ಲೊಸ್ಕರ್ ಮೋಟಾರ್ ಸಂಸ್ಥೆಯು 2014 ಎಟಿಯೋಸ್ ಸೆಡಾನ್ ಮತ್ತು ಎಟಿಯೋಸ್ ಲಿವಾ ಹ್ಯಾಚ್‌ಬ್ಯಾಕ್ ಕಾರಿನ ದರ, ವೈಶಿಷ್ಟ್ಯ ಸೇರಿದಂತೆ ಇತರ ಮಹತ್ವಕಾರಿ ಮಾಹಿತಿಗಳನ್ನು ಹೊರಗಡೆವಿದೆ.
ನೂತನ ಡೀಸೆಲ್ ವೆರಿಯಂಟ್ ಸೇರಿದಂತೆ ಮಿಡ್ ರೇಂಜ್ ಮಾದರಿಗಳನ್ನು ಪರಿಷ್ಕೃತಗೊಳಿಸಲಾಗಿದೆ. ಅಂದರೆ ಟೊಯೊಟಾ ಎಟಿಯೋಸ್ ಲಿವಾ ಡೀಸೆಲ್ ಹ್ಯಾಚ್‌ಬ್ಯಾಕ್‌ಗಳು ಕಾರುಗಳು ವಿಡಿ ಮತ್ತು ವಿಡಿ ಎಸ್‌ಪಿ (ಸೇಫ್ಟಿ ಪ್ಯಾಕ್) ಟಾಪ್ ಎಂಡ್ ವೆರಿಯಂಟ್‌ಗಳಲ್ಲೂ ದೊರಕಲಿದೆ. ಇದುವರೆಗೆ ಈ ಎರಡು ವೆರಿಯಂಟ್‌ಗಳು ಪೆಟ್ರೋಲ್ ಆವೃತ್ತಿಯಲ್ಲಿ ಮಾತ್ರ ಲಭ್ಯವಿದ್ದವು.
ಸ್ಟಾಂಡರ್ಡ್ ವೈಶಿಷ್ಟ್ಯಗಳು
2 ಡಿನ್ ಆಡಿಯೋ ಸಿಸ್ಟಂ, ಬ್ಲೂಟೂತ್, ಯುಎಸ್‌ಬಿ, ಆಕ್ಸ್-ಇನ್ ಮತ್ತು ರಿಮೋಟ್ ಕಂಟ್ರೋಲ್, ಲೆಥರ್ ಹೋದಿಕೆಯ ಸ್ಟೀರಿಂಗ್ ವೀಲ್ ಜತೆ ಸ್ಟೀರಿಂಗ್ ಫಂಕ್ಷನ್, ಸ್ಟೀರಿಂಗ್ ವೀಲ್ ಮೌಂಟೆಡ್ ಆಡಿಯೋ ಕಂಟ್ರೋಲ್.
ಸ್ಟಾಂಡರ್ಡ್ ವೈಶಿಷ್ಟ್ಯಗಳು
ಔಟ್‌ಸೈಡ್ ವ್ಯೂ ರಿಯರ್ ವ್ಯೂ ಟರ್ನ್ ಇಂಡಿಕೇಟರ್, ರಿಯರ್ ಡಿಫಾಗರ್ ಮತ್ತು ರಿಯರ್ ವೈಪರ್, ಡ್ಯುಯಲ್ ಫ್ರಂಟ್ ಎಸ್‌ಆರ್‌ಎಸ್ ಏರ್ ಬ್ಯಾಗ್. ಇತರ ಜತೆಗೆ ವಿಡಿ ಎಸ್‌ಪಿ ಆವೃತ್ತಿಯು ಎಬಿಎಸ್ ಜತೆ ಇಬಿಡಿ ಸ್ಟಾಂಡರ್ಡ್ ವೈಶಿಷ್ಟ್ಯಗಳನ್ನು ಪಡೆದುಕೊಳ್ಳಲಿದೆ.
ದರ ಮಾಹಿತಿ
ಅಂದ ಹಾಗೆ ಟೊಯೊಟಾ ಎಟಿಯೋಸ್ ಲಿವಾ ವಿಡಿ ಮತ್ತು ವಿಡಿ ಎಸ್ ವೆರಿಯಂಟ್‌ಗಳ ಮುಂಬೈ ಎಕ್ಸ್ ಶೋ ರೂಂ ದರ ಅನುಕ್ರಮವಾಗಿ 6.7 ಹಾಗೂ 7.03 ಲಕ್ಷ ರು.ಗಳಾಗಿರಲಿದೆ.
ಫೀಚರ್ಸ್
ಅದೇ ಹೊತ್ತಿಗೆ ಮಿಡ್ ಲೆವೆಲ್ ಎಟಿಯೋಸ್ ಸೆಡಾನ್ ಮತ್ತು ವಿವಾ ಹ್ಯಾಚ್‌ಬ್ಯಾಜ್ ಪೆಟ್ರೋಲ್ ಮತ್ತು ಡೀಸಿಲೆ ವೆರಿಯಂಟ್‌ಗಳು ಡ್ಯುಯಲ್ ಟೋನ್ ಇಂಟಿರಿಯರ್ ಮತ್ತು ಸಾಫ್ಟ್ ಫ್ಯಾಬ್ರಿಕ್ ಸೀಟುಗಳನ್ನು ಪಡೆಯಲಿದೆ.
ಬೆಲೆ
ಇಲ್ಲಿ ಎಟಿಯೋಸ್ ಸೆಡಾನ್ ಮತ್ತು ಎಟಿಯೋಸ್ ಲಿವಾ ಆವೃತ್ತಿಗಳು ಅನುಕ್ರಮವಾಗಿ 5.53 ಹಾಗೂ 4.53 ಲಕ್ಷ ರು.ಗಳಷ್ಟು ದುಬಾರಿಯಾಗಲಿದೆ.


Click it and Unblock the Notifications