ಫೋಕ್ಸ್‌ವ್ಯಾಗನ್ ಪೊಲೊ ಫೇಸ್‌ಲಿಫ್ಟ್ ನಿರೀಕ್ಷಿಸಿ!
ಜರ್ಮನಿಯ ವಾಹನ ತಯಾರಕ ಸಂಸ್ಥೆಯಾಗಿರುವ ಫೋಕ್ಸ್‌ವ್ಯಾಗನ್ ನಾಲ್ಕು ಬಾಗಿಲುಗಳ ಸಣ್ಣ ಪೊಲೊ ಕಾರನ್ನು 2014ನೇ ಸಾಲಿನಲ್ಲಿ ಅಪ್‌ಗ್ರೇಡ್ ಮಾಡಲಿದೆ. ಇದಕ್ಕಾಗಿ ಹೆಚ್ಚು ದಿನ ಕಾಯಬೇಕಾಗಿಲ್ಲ. ಮುಂಬರುವ ಆಟೋ ಎಕ್ಸ್ ಪೋದಲ್ಲಿ ಫೋಕ್ಸ್‌ವ್ಯಾಗನ್ ಪೊಲೊ ಫೇಸ್‌ಲಿಫ್ಟ್ ವರ್ಷನ್ ಅನಾವರಣಗೊಳ್ಳಲಿದೆ.
ನಿಮ್ಮ ಮಾಹಿತಿಗಾಗಿ 2014 ಪೊಲೊ ಯುರೋಪಿಯನ್ ವರ್ಷನ್ ಮಾರ್ಚ್ ತಿಂಗಳಲ್ಲಿ ನಡೆಯಲಿರುವ ಜಿನೆವಾ ಮೋಟಾರ್ ಶೋದಲ್ಲಿ ಲಾಂಚ್ ಕಾಣಲಿದ್ದು, ಬಳಿಕ ಮಾರುಕಟ್ಟೆ ಪ್ರವೇಶಿಸಲಿದೆ. ಇದನ್ನು ಭಾರತೀಯ ಆವೃತ್ತಿಯು ಹಿಂಬಾಲಿಸಲಿದೆ.

ಆಧುನಿಕತೆಗೆ ಅನುಗುಣವಾಗಿ ನೂತನ ಪೊಲೊದಲ್ಲಿ ಆಕರ್ಷಕ ವಿನ್ಯಾಸ ಕಲ್ಪಿಸಿಕೊಡಲಾಗಿದೆ. ಇದು ನೂತನ ಬಂಪರ್, ಹೊಸ ಹೆಡ್ ಲ್ಯಾಂಪ್, ಎಲ್‌ಇಡಿ ಲೈಟ್ಸ್ (ಐಚ್ಛಿಕ) ಮತ್ತು ಫಾಗ್ ಲ್ಯಾಂಪ್ ಪಡೆದುಕೊಳ್ಳಲಿದೆ.

ಫೋಕ್ಸ್‌ವ್ಯಾಗನ್ ಪೊಲೊ ಎದುರುಗಡೆ ಹಾಗೂ ಹಿಂಭಾಗದಲ್ಲಿ ಸಣ್ಣ ಬದಲಾವಣೆ ತರಲಾಗಿದೆ. ಹಾಗೆಯೇ ವಿಶೇಷ ಡಿಸೈನ್ ಪಡೆದ ಚಕ್ರಗಳನ್ನು ಆಳವಡಿಸಲಾಗಿದೆ. ಕಾರಿನ ಒಳಮೈಯಲ್ಲೂ ಮಹತ್ವದ ಬದಲಾವಣೆ ತರಲಾಗಿದೆ. ಆದರೆ ಇದು ಭಾರತದ ಮಾರುಕಟ್ಟೆಯಲ್ಲಿ ಎಷ್ಟರ ಮಟ್ಟಿಗೆ ಯಶ ಸಾಧಿಸಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಇಲ್ಲಿ ಇನ್ಸ್ಟ್ರುಮೆಂಟ್ ಕ್ಲಸರ್‌ನಿಂದ ಆರಂಭಿಸಿ, ಸೆಂಟ್ರಲ್ ಕನ್ಸೋಲ್‌ನಿಂದ ಸ್ಟೀರಿಂಗ್ ವೀಲ್ ವರೆಗೂ ಪರಿಷ್ಕೃತಗೊಳಿಸಲಾಗಿದೆ. ಇದು ಕಾರಿನ ಅಂದತೆಯನ್ನು ವರ್ಧಿಸುವಲ್ಲಿಯೂ ನೆರವಾಗಿದೆ.

ಇನ್ನು ಯುರೋಪ್ ಆವೃತ್ತಿಯು ಏಳರಷ್ಟು ಎಂಜಿನ್ ಆಯ್ಕೆಗಳನ್ನು ಹೊಂದಿದೆ. ಇವೆಲ್ಲವೂ ಎಮಿಷನ್ ಸ್ಟಾಂಡರ್ಡ್ ಹೊಂದಿದೆ. ಹಾಗಿದ್ದರೂ ಭಾರತದ ಆವೃತ್ತಿಯು ವಿಭಿನ್ನ ಆಯ್ಕೆ ಹೊಂದಿರಲಿದೆ.

ಭಾರತದಲ್ಲಿ ಎಂಟ್ರಿ ಲೆವೆಲ್ ಪೊಲೊ, 3 ಸಿಲಿಂಡರ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಪಡೆದುಕೊಳ್ಳಲಿದೆ. ಇದರ ಪೆಟ್ರೋಲ್ ವೆರಿಯಂಟ್ 1.2 ಲೀಟರ್ ಟಿಎಸ್‌ಆ (ಸೆವೆನ್ ಸ್ಪೀಡ್ ಡಿಎಸ್‌ಜಿ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್) ಮತ್ತು 1.6 ಟಿಡಿಐ ಡೀಸೆಲ್ ಎಂಜಿನ್ ಪಡೆದುಕೊಳ್ಳಲಿದೆ.


Click it and Unblock the Notifications








