ಜುಲೈನಲ್ಲಿ 2014 ಸ್ಕೋಡಾ ಯೆಟಿ ಫೇಸ್‌ಲಿಫ್ಟ್ ಬಿಡುಗಡೆ
ಬಹುನಿರೀಕ್ಷಿತ 2014 ಸ್ಕೋಡಾ ಯೆಟಿ ಫೇಸ್‌ಲಿಫ್ಟ್ ವರ್ಷನ್ ಮುಂಬರುವ ಜೂನ್ ತಿಂಗಳಲ್ಲಿ ಸ್ಕೋಡಾ ಲಾಂಚ್ ಮಾಡಲಿದೆ. ಈ ನೂತನ ಕ್ರಾಸೋವರ್, ಹೊರಮೈ ಜತೆಗೆ ಒಳಮೈ ಬದಲಾವಣೆಗಳನ್ನು ಪಡೆದುಕೊಳ್ಳಲಿದೆ.
2014 ಸ್ಕೋಡಾ ಯೆಟಿ ಫೇಸ್‌ಲಿಫ್ಟ್ ಆವೃತ್ತಿಯನ್ನು ಮೊದಲ ಬಾರಿಗೆ ಫ್ರೆಬವರಿಯಲ್ಲಿ ನಡೆದ ಆಟೋ ಎಕ್ಸ್ ಪೋದಲ್ಲಿ ಪ್ರದರ್ಶಿಸಲಾಗಿತ್ತು. ಅಲ್ಲದೆ ಹಿಂದಿನ ಯೆಟಿಗಿಂತಲೂ ವಿಭಿನ್ನವಾಗಲಿರುವ ನೂತನ ಮಾದರಿಯು ಎಸ್‌ಯುವಿ ಬದಲಾಗಿ ಕ್ರಾಸೋವರ್ ಸ್ಥಾನದಲ್ಲಿ ಗುರುತಿಸಿಕೊಳ್ಳಲಿದೆ.

ಮುಂಭಾಗದಲ್ಲಿ ಚಿಟ್ಟೆಯಿಂದ ಸ್ಫೂರ್ತಿ ಪಡೆದಂತಹ ಫ್ರಂಟ್ ಗ್ರಿಲ್ ಪಡೆದುಕೊಳ್ಳಲಿದೆ. ಅದೇ ರೀತಿ ಬಂಪರ್ ಹಾಗೂ ಹೆಡ್ ಲೈಟ್ ಸಹ ಹೊಸ ರೂಪ ಪಡೆದುಕೊಂಡಿದೆ. ಇನ್ನುಳಿದಂತೆ ಪ್ರೊಜೆಕ್ಟರ್ ಜೊತೆಗೆ ಎಲ್‌ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್ ಕಾರಿನ ಅಂದತೆಯನ್ನು ಹೆಚ್ಚಿಸಲಿದೆ. ಫಾಗ್ ಲ್ಯಾಂಪ್‌ನಲ್ಲೂ ಸ್ಥಾನಪಲ್ಲಟ ಕಂಡುಬಂದಿದೆ.
ಎಲ್ಲ ಹೊಸತನದ ಅಲಾಯ್ ವೀಲ್ ಸ್ಕೋಡಾ ಯೆಟಿಯಲ್ಲಿ ಬಳಕೆಯಾಗಲಿದೆ. ಹಿಂದುಗಡೆ ಟೈಲ್ ಲೈಟ್‌ನಲ್ಲೂ ಎಲ್‌ಇಡಿ ಚಮಕ್ ಕಂಡುಬರಲಿದೆ. ಹಿಂದುಗಡೆಯೂ ಆಧುನಿಕ ಶೈಲಿಯಿಂದ ಗುರುತಿಸಿಕೊಳ್ಳಲು ಸಂಸ್ಥೆಯು ಪ್ರಾಮುಖ್ಯತೆ ಕಲ್ಪಿಸಿದೆ. ಇದು ಹಿಂದುಗಡೆ ಡ್ಯುಯಲ್ ಎಕ್ಸಾಸ್ ಔಟ್ಲೆಟ್ ಪಡೆದುಕೊಳ್ಳಲಿದೆ. ಹಾಗೆಯೇ ಇದರ ಸಿಲ್ವರ್ ಫಿನಿಶ್ ಸ್ಕಿಡ್ ಪ್ಲೇಟ್ ಕಾರಿಗೆ ಇನ್ನಷ್ಟು ಕ್ರೀಡಾತ್ಮಕ ವಿನ್ಯಾಸ ಪ್ರದಾನ ಮಾಡಲಿದೆ.

ಕಾರಿನ ವೈಶಿಷ್ಟ್ಯಗಳ ಬಗ್ಗೆ ಮಾತನಾಡುವುದಾದ್ದಲ್ಲಿ ಡ್ಯುಯಲ್ ಜೋನ್ ಎಸಿ, ಪ್ಯಾನರೋಮಿಕ್ ಸನ್ ರೂಫ್, ವೈಯಕ್ತಿಕವಾಗಿ ಮಡಚಬಹುದಾದ ಸೀಟು, ಪವರ್ ಡ್ರೈವರ್ ಸೀಟ್, ಐಚ್ಛಿಕ ಪಾರ್ಕಿಂಗ್ ಅಸಿಸ್ಟ್, 3 ಸ್ಪೋಕ್ ಸ್ಟೀರಿಂಗ್ ವೀಲ್, ಆಡಿಯೋ ಕಂಟ್ರೋಲ್ ಮೌಂಟೆಡ್ ಸ್ಟೀರಿಂಗ್ ಹಾಗೂ ಸ್ಪೀಡೋ ಹಾಗೂ ಟ್ಯಾಕೋಮೀಟರ್‌ಗಳಂತಹ ಸೌಲಭ್ಯವಿರಲಿದೆ.
ಅಂದ ಹಾಗೆ 2014 ಸ್ಕೋಡಾ ಯೆಟಿ 2.0 ಲೀಟರ್ ಟಿಡಿಐ ಡೀಸೆಲ್ ಎಂಜಿನ್ ಪಡೆದುಕೊಳ್ಳಲಿದೆ. ಈ ಅರ್ಬನ್ ಕ್ರಾಸೋವರ್ ಎರಡು ವಿಭಿನ್ನ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಇದರ ಮೊದಲ ಎಂಜಿನ್ 110 ಅಶ್ವಶಕ್ತಿ (250 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ. ಹಾಗೆಯೇ 5 ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ (ಪವರ್ ಫ್ರಂಟ್ ವೀಲ್‌ಗೆ ಮಾತ್ರ) ಪಡೆದುಕೊಳ್ಳಲಿದೆ.
ಎರಡನೇ ಎಂಜಿನ್ 140 ಅಶ್ವಶಕ್ತಿ (320 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ. ಇದು ಎಲ್ಲ ನಾಲ್ಕು ಚಕ್ರಗಳಿಗೆ ಶಕ್ತಿ ವಿತರಿಸುವ 6 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಪಡೆದುಕೊಳ್ಳಲಿದೆ. ಇವೆಲ್ಲದರ ಜತೆಗೆ ಆಟೋಮ್ಯಾಟಿಕ್ ಡಿಎಸ್‌ಜಿ ಲಭ್ಯವಾಗುವ ಸಾಧ್ಯತೆಯಿದೆ. ಹಾಗಿದ್ದರೂ ಹಿಂದಿನ ಆವತ್ತಿಗೆ ಹೋಲಿಸಿದಾಗ ಹೊಸ ಸ್ಕೋಡಾ ಯೆಟಿ ಕ್ರಾಸೋವರ್ ದರ (15.19 ಲಕ್ಷ ರು. ದೆಹಲಿ ಎಕ್ಸ್ ಶೋ ರೂಂ) ಸ್ವಲ್ಪ ಅಧಿಕವಾಗುವ ಸಾಧ್ಯತೆಯಿದೆ.


Click it and Unblock the Notifications








