ಹೊಸ ಎಂಜಿನ್‌ಗಳಲ್ಲಿ 2014 ಫೋಕ್ಸ್‌ವ್ಯಾಗನ್ ಪೊಲೊ ಎಂಟ್ರಿ

By Nagaraja

ಈಗಾಗಲೇ ಜಾಗತಿಕ ಪ್ರದರ್ಶನ ಕಂಡಿರುವ 2014 ಫೋಕ್ಸ್‌ವ್ಯಾಗನ್ ಪೊಲೊ ಫೇಸ್‌ಲಿಫ್ಟ್ ವರ್ಷನ್ ಸದ್ಯದಲ್ಲೇ ಭಾರತ ಮಾರುಕಟ್ಟೆ ಪ್ರವೇಶಿಸಲಿದೆ. ವರದಿಗಳ ಪ್ರಕಾರ 2014 ಫೋಕ್ಸ್‌ವ್ಯಾಗನ್ ಪೊಲೊ ಜುಲೈ ತಿಂಗಳಲ್ಲಿ ಲಾಂಚ್ ಆಗಲಿದೆ.

ಇದಕ್ಕೂ ಮೊದಲು ಮಾರ್ಚ್ ತಿಂಗಳಲ್ಲಿ ಸಾಗಿದ ಜಿನೆವಾ ಮೋಟಾರು ಶೋದಲ್ಲಿ 2014 ಫೋಕ್ಸ್‌ವ್ಯಾಗನ್ ಪೊಲೊ ಜಾಗತಿಕ ಪಾದಾರ್ಪಣೆಗೈದಿತ್ತು. ಇದೀಗ ಈ ಆಕರ್ಷಕ ಕಾರನ್ನು ಬರಮಾಡಿಕೊಳ್ಳಲು ಭಾರತೀಯ ಗ್ರಾಹಕರು ಕಾತರದಿಂದಿದ್ದಾರೆ.

2014 Volkswagen Polo

ಭಾರತೀಯ ವರ್ಷನ್ ಪೊಲೊದಲ್ಲಿರುವ ಪ್ರಮುಖ ವ್ಯತ್ಯಾಸ ಏನೆಂದರೆ ಇದು ಹೊಸತಾದ ಎಂಜಿನ್ ಪಡೆದುಕೊಳ್ಳಲಿದೆ. ಅಂದರೆ ಈಗಿರುವ 1.6 ಲೀಟರ್ ಡೀಸೆಲ್ ಎಂಜಿನ್ ಬದಲು ಪೊಲೊ ಜಿಟಿ ಟಿಡಿಐ ವೆರಿಯಂಟ್‌ನಲ್ಲಿ 4 ಸಿಲಿಂಡರ್ 1.5 ಲೀಟರ್ ಡೀಸೆಲ್ ಪಡೆದುಕೊಳ್ಳಲಿದೆ. ಸಣ್ಣ ಎಂಜಿನ್ ಆಗಿರುವ ಹೊರತಾಗಿಯೂ 105 ಅಶ್ವಶಕ್ತಿ (250 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ.

ಎರಡನೇಯದಾಗಿ ಹೊಸತಾದ 1.2 ಲೀಟರ್ ಟಿಎಸ್‌ಐ ಪೆಟ್ರೋಲ್ ಎಂಜಿನ್ ತರಲಾಗಿದೆ. ಈ ಎರಡು ಎಂಜಿನ್‌ಗಳು ಡ್ಯುಯಲ್ ಕ್ಲಚ್ 7ಸ್ಪೀಡ್ ಡಿಎಸ್‌ಜಿ ಟ್ರಾನ್ಸ್‌ಮಿಷನ್ ಪಡೆದುಕೊಳ್ಳಲಿದೆ. ಇವೆಲ್ಲದಕ್ಕಿಂತ ಮಿಗಿಲಾಗಿ 1.5 ಲೀಟರ್ ಎಂಜಿನ್ ಬಳಕೆಯೊಂದಿಗೆ ತೆರಿಗೆ ವಿನಾಯಿತಿ ಪಡೆದುಕೊಳ್ಳಲು ಸಂಸ್ಥೆಗೆ ನೆರವಾಗಲಿದೆ. ಇದರ ಪರಿಣಾಮವಾಗಿ ದರಗಳಲ್ಲೂ ಕಡಿತವಾಗಲಿದೆ.

More from DriveSpark

Article Published On: Saturday, June 7, 2014, 16:26 [IST]
English summary
The facelifted 2014 Volkswagen Polo made its global debut in March this year at the Geneva Motor Show. Its entry into India was expected to happen sometime during the middle of the year and that time is fast approaching.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+