ಭಾರತದಲ್ಲಿ 2014 ವೋಲ್ವೋ ಎಸ್80 ಲಾಂಚ್; ಬೆಲೆ 41 ಲಕ್ಷ ರು.

2014 ವೋಲ್ವೋ ಎಸ್80 ಭಾರತದಲ್ಲಿ ಬಿಡುಗಡೆಯಾಗಿದ್ದು, 41.35 ಲಕ್ಷ ರು. ಎಕ್ಸ್ ಶೋ ರೂಂ ದರ ನಿಗದಿಯಾಗಿದೆ. ಪ್ರಸ್ತುತ ವೋಲ್ವೋ ಎಸ್80 ಹಿಂದಿನ ಆವೃತ್ತಿಗಿಂತಲೂ ಕೆಲವೊಂದು ಬದಲಾವಣೆ ಪಡೆದುಕೊಂಡಿದೆ.

ಸರಳ ವಿನ್ಯಾಸಿತ 2014 ವೋಲ್ವೋ ಎಸ್80, ಐಷಾರಾಮಿ ಸೆಡಾನ್ ಕಾರುಗಳಲ್ಲಿ ಉತ್ತಮ ಮಾರಾಟ ಗಿಟ್ಟಿಸಿಕೊಳ್ಳುವ ನಿರೀಕ್ಷೆಯಲ್ಲಿದೆ.


ವೆರಿಯಂಟ್, ಎಕ್ಸ್ ಶೋ ರೂಂ ದರ
  • ವೋಲ್ವೋ ಎಸ್80 ಡಿ4 - 41.35 ಲಕ್ಷ ರು.
  • ವೋಲ್ವೋ ಎಸ್80 ಡಿ5 - 44.80 ಲಕ್ಷ ರು.

ಇದು ಪ್ರಮುಖವಾಗಿಯೂ ಮರ್ಸಿಡಿಸ್ ಇ ಕ್ಲಾಸ್ ಹಾಗೂ ಬಿಎಂಡಬ್ಲ್ಯು 5 ಸಿರೀಸ್ ಕಾರುಗಳಿಗೆ ಪ್ರತಿಸ್ಪರ್ಧಿಯಾಗಿರಲಿದೆ. ನೂತನ ವೋಲ್ವೋ ಕಾರಲ್ಲಿ ಫ್ರಂಟ್ ಗ್ರಿಲ್, ಫಾಗ್ ಲ್ಯಾಂಪ್ ಹೌಸಿಂಗ್, ಬಂಪರ್ ಮತ್ತು ಹೆಡ್‌ಲೈಟ್‌ಗಳಲ್ಲಿ ಬದಲಾವಣೆ ಕಾಣಬಹುದಾಗಿದೆ. ಇದಲ್ಲದೆ ಡೇಲೈಟ್ ರನ್ನಿಂಗ್ ಹೆಡ್‌ಲೈಟ್ ಸೌಲಭ್ಯವೂ ಇದೆ.


ಇನ್ನು ಹಿಂದುಗಡೆ ರಿಯರ್ ಲೈಟ್ಸ್ ಮತ್ತು ರಿಯರ್ ಬಂಪರ್‌ನಲ್ಲೂ ಬದಲಾವಣೆ ಕಂಡುಬಂದಿದೆ. ಒಟ್ಟಾರೆಯಾಗಿ ಈ ಎಲ್ಲ ಬದಲಾವಣೆಗಳು ಹೆಚ್ಚು ಆಕರ್ಷಕವೆನಿಸಿದೆ. ಲಾಸ್ಟ್ ಬಟ್ ನಾಟ್ ಲೀಸ್ಟ್ ಎಂಬಂತೆ ಅಲಾಯ್ ವೀಲ್ ಕಾರಿಗೆ ಹೊಸ ಚೈತನ್ಯ ತುಂಬಲಿದೆ.

ಅಂದ ಹಾಗೆ 2014 ವೋಲ್ವೋ ಎಸ್80, ಎರಡು ಡೀಸೆಲ್ ಎಂಜಿನ್‌ಗಳಿಂದ ನಿಯಂತ್ರಿಸಲ್ಪಡಲಿದೆ. ಅವುಗಳೆಂದರೆ ಡಿ4 ವೆರಿಯಂಟ್ 2.0 ಲೀಟರ್ ಫೈವ್ ಸಿಲಿಂಡರ್ ಎಂಜಿನ್ (165 ಪಿಎಸ್ ಪವರ್, 400 ಎನ್‌ಎಂ ಟಾರ್ಕ್) ಮತ್ತು ಡಿ4 ವೆರಿಯಂಟ್ 2.4 ಲೀಟರ್ ಫೈವ್ ಸಿಲಿಂಡರ್ ಎಂಜಿನ್‌ನಿಂದ (215 ಪಿಎಸ್ ಪವರ್, 440 ಎನ್‌ಎಂ ಟಾರ್ಕ್) ನಿಯಂತ್ರಿಸಲ್ಪಡಲಿದೆ.

Volvo S80

ಈ ಎರಡು ಎಂಜಿನ್‌ಗಳು 6 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಹೊಂದಿರಲಿದೆ. ಅಂತೆಯೇ ಕೇವಲ 7.8 ಸೆಕೆಂಡುಗಳಲ್ಲಿ ಗಂಟೆಗೆ 0-100 ಕೀ.ಮೀ. ವೇಗವರ್ಧಿಸುವ ಹಾಗೂ ಗಂಟೆಗೆ 225 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ.

More from DriveSpark

Article Published On: Thursday, March 20, 2014, 11:36 [IST]
English summary
The 2014 Volvo S80 has been launched in India without much fanfare. The new S80 is a minor update over last year's model, but still remains the same simple looking, yet elegant sedan that the Volvo has always been.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+