430 ಅಶ್ವಶಕ್ತಿ ಬಲದ 2015 ಪೋರ್ಷೆ 911 ಕರೆರಾ ಜಿಟಿಎಸ್
ಜಗತ್ತಿನ ಮುಂಚೂಣಿಯ ವಾಹನ ತಯಾರಿಕ ಸಂಸ್ಥೆಗಳಲ್ಲಿ ಒಂದಾಗಿರುವ ಪೋರ್ಷೆ ಈಗಷ್ಟೇ ಅತಿ ನೂತನ 2015 ಕರೆರಾ ಜಿಟಿಎಸ್ ಮಾದರಿಯನ್ನು ಅನಾವರಣಗೊಳಿಸಿದೆ. ಇದು ನಾಲ್ಕು ವೆರಿಯಂಟ್‌ಗಳಲ್ಲಿ ಲಭ್ಯವಾಗಲಿದೆ.
ಕೂಪೆ ಹಾಗೂ ಕ್ಯಾಬ್ರಿಯೊಲೆಟ್ ಶೈಲಿಯ ಪೋರ್ಷೆ 2015 ಕರೆರಾ ಜಿಟಿಎಸ್ ರಿಯರ್ ಅಥವಾ ಫೋರ್ ವೀಲ್ ಡ್ರೈವ್ ಪಡೆದುಕೊಂಡಿದೆ. ಇದು ಭಾರತ ಮಾರುಕಟ್ಟೆಯನ್ನು ತಲುಪಲಿದೆಯೇ ಎಂಬುದು ಇನ್ನು ಖಚಿತವಾಗಿಲ್ಲ. ಆದರೂ ಇದರ ಶಕ್ತಿ ವಾಹನ ಪ್ರೇಮಿಗಳಲ್ಲಿ ಕುತೂಹಲ ಕೆರಳಿಸಿರುವುದಂತೂ ನಿಜ.

ಹಾಗಿದ್ದರೂ ಇದು 911 ಮಾದರಿಯ ಮಗದೊಂದು ಶೈಲಿ ಮಾತ್ರ ಎಂಬ ಟೀಕೆಗಳು ಕೇಳಿಬರುತ್ತಿದೆ. ಇವೆಲ್ಲದರ ನಡುವೆ ಸಂಪೂರ್ಣ ಮ್ಯಾಟ್ ದೇಹ, ಸೆಂಟರ್ ಲಾಕಿಂಗ್ 20 ಇಂಚು ವೀಲ್ ಮತ್ತು ಸ್ಪೋಕ್ಡ್ ಬೈ ಕ್ಸೆನಾನ್ ಹೆಡ್‌ಲ್ಯಾಂಪ್‌ನಿಂದ ಕೂಡಿರುವ ಹೊಸ ಮಾದರಿಯು ಇತರ ಆವೃತ್ತಿಗಳಿಗಿಂತ ಪ್ರತ್ಯೇಕವಾಗಿ ಗುರುಸಿಕೊಳ್ಳಲಿದೆ.
ಅಷ್ಟೇ ಯಾಕೆ 3.8 ಲೀಟರ್ ಎಂಜಿನ್ ಹೊಂದಿರುವ ಪೋರ್ಷೆ ಕರೆರಾ ಜಿಟಿಎಸ್ ಬರೋಬ್ಬರಿ 430 ಅಶ್ವಶಕ್ತಿ ಉತ್ಪಾದಿಸಲಿದೆ. ಇದು ಗಂಟೆಗೆ 300 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ 7 ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಪಡೆದುಕೊಂಡಿದೆ.

ಇನ್ನು 4 ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ವೇಗವರ್ಧಿಸಿಕೊಳ್ಳಲಿದೆ. ಅಂದ ಹಾಗೆ ಭಾರತದ ರುಪಾಯಿ ಮೌಲ್ಯಕ್ಕೆ ಪರಿವರ್ತಿಸಿದಾಗ ಈ ಪೋರ್ಷೆ ಕಾರು 93.30 ಲಕ್ಷ ರು.ಗಳಷ್ಟು ದುಬಾರಿಯೆನಿಸುತ್ತದೆ.


Click it and Unblock the Notifications








