2015 ಸ್ಕೋಡಾ ಯೆಟಿ ಆಸ್ಟ್ರೇಲಿಯಾದಲ್ಲಿ ಲಾಂಚ್
ಸದ್ಯ ಜಾಗತಿಕ ಬಿಡುಗಡೆಗಳು ಭಾರತದಲ್ಲೂ ಅತ್ಯಂತ ಹೆಚ್ಚು ಪ್ರಾಮುಖ್ಯತೆ ಗಿಟ್ಟಿಸಿಕೊಳ್ಳುತ್ತದೆ. ಇದರ ಹಿಂದಿರುವ ಪ್ರಮುಖ ಕಾರಣವೆಂದರೆ ಮುಂದಿನ ದಿನಗಳಲ್ಲಿ ಇಂತಹ ಈ ಬಹುನಿರೀಕ್ಷಿತ ಕಾರುಗಳು ಭಾರತಕ್ಕೂ ಭೇಟಿ ಕೊಟ್ಟರು ಅಚ್ಚರಿಯೇನಿಲ್ಲ.
ಸದ್ಯ ಜೆಕ್ ಗಣರಾಜ್ಯದ ಕಾರು ಬ್ರಾಂಡ್ ಆಗಿರುವ ಸ್ಕೋಡಾ, ನೂತನ 2015 ಯೆಟಿ ಆವೃತ್ತಿಯನ್ನು ಆಸ್ಟ್ರೇಲಿಯಾದಲ್ಲಿ ಬಿಡುಗಡೆಗೊಳಿಸಿದೆ. ಈ ಎಸ್‌ಯುವಿ ಕಾರಿನ ಪ್ರಾರಂಭಿಕ ದರ 23,490 ಆಸ್ಟ್ರೇಲಿಯನ್ ಡಾಲರ್ ಆಗಿರಲಿದೆ.

ಈ ಹಿಂದೆ 2014 ಆಟೋ ಎಕ್ಸ್ ಪೋದಲ್ಲಿ ಲಾಂಚ್ ಆಗಿದ್ದ ಸ್ಕೋಡಾ ಯೆಟಿ, ಸದ್ಯದಲ್ಲೇ ಭಾರತ ಮಾರುಕಟ್ಟೆ ಪ್ರವೇಶಿಸುವ ನಿರೀಕ್ಷೆಯಿದೆ. ಇದರಲ್ಲಿ 1.2 ಲೀಟರ್, 4 ಸಿಲಿಂಡರ್ ಟರ್ಬೊಚಾರ್ಜ್ಡ್ ಎಂಜಿನ್ ಆಳವಡಿಸಲಾಗಿದ್ದು, 175 ಪೀಕ್ ಟಾರ್ಕ್ ಉತ್ಪಾದಿಸಲಿದೆ.
ಸ್ಕೋಡಾ ಯೆಟಿ ಮಿಡ್ ವೆರಿಯಂಟ್ 1.4 ಲೀಟರ್ 4 ಸಿಲಿಂಡರ್ ಟರ್ಬೊ ಪೆಟ್ರೋಲ್ ಜತೆಗೆ ಟಾಪ್ ಎಂಡ್ ವೆರಿಯಂಟ್ 2.0 ಲೀಟರ್ ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ.


Click it and Unblock the Notifications








