ಮೇ 29ರಂದು ಬಿಎಂಡಬ್ಲ್ಯು ಎಕ್ಸ್5 ಲಾಂಚ್
ಜರ್ಮನಿಯ ಐಷಾರಾಮಿ ವಾಹನ ತಯಾರಕ ಸಂಸ್ಥೆಯಾಗಿರುವ ಬಿಎಂಡಬ್ಲ್ಯು, ಮುಂಬರುವ ಮೇ 29ರಂದು ಮೂರನೇ ತಲೆಮಾರಿನ ಎಕ್ಸ್5 ಎಸ್‌ಯುವಿ ಕಾರನ್ನು ಭಾರತ ಮಾರುಕಟ್ಟೆಗೆ ಪರಿಚಯಿಸಲಿದೆ.
ಎಫ್15 ಎಂಬ ಕೋಡ್ ಪಡೆದುಕೊಂಡಿರುವ ಹೊಸತಾದ ಎಕ್ಸ್5, ಪ್ರಾರಂಭದಲ್ಲಿ 258 ಅಶ್ವಶಕ್ತಿ ಉತ್ಪಾದಿಸುವ 3.0 ಲೀಟರ್ ಡೀಸೆಲ್ ಎಂಜಿನ್ ಪಡೆದುಕೊಳ್ಳಲಿದೆ. ಇದು ಬಿಎಂಡಬ್ಲ್ಯು 530ಡಿ ಹಾಗೂ 730 ಡಿ ಸೆಡಾನ್ ಆವೃತ್ತಿಯಲ್ಲಿರುವುದಕ್ಕೆ ಸಮಾನವಾಗಿದೆ.

ಐದು ಹಾಗೂ ಏಳು ಸೀಟುಗಳ ಆಯ್ಕೆಗಳಲ್ಲಿ ನೂತನ ಬಿಎಂಡಬ್ಲ್ಯು ಎಕ್ಸ್5 ಆಗಮನವಾಗಲಿದೆ. ಅಲ್ಲದೆ ಇದರ ಆಂತರಿಕ ಭಾಗಗಳನ್ನು ಲೇಟೆಸ್ಟ್ ಬಿಎಂಡಬ್ಲ್ಯು ತಂತ್ರಜ್ಞಾನಗಳೊಂದಿಗೆ ಪರಿಷ್ಕೃತಗೊಳಿಸಲಾಗಿದೆ. ತನ್ನ ಹಿಂದಿನ ಆವೃತ್ತಿಗಳಿಗೆ ಹೋಲಿಸಿದರೆ ಸಾಕಷ್ಟು ದೊಡ್ಡದಾಗಿರಲಿದೆ. ಆದರೆ ಹಗುರ ಭಾರವನ್ನು ಹೊಂದಿರಲಿದೆ.
ಅಂದ ಹಾಗೆ ಕಂಪ್ಲೀಟ್ ನೌಕ್ಡ್ ಡೌನ್ ಕಿಟ್ ಮುಖಾಂತರ ನೂತನ ಬಿಎಂಡಬ್ಲ್ಯು ಎಕ್ಸ್5 ಜೋಡಣೆಯಾಗಲಿದೆ. ಇನ್ನುಳಿದಂತೆ ಬುಕ್ಕಿಂಗ್ ಪ್ರಕ್ರಿಯೆ ಆರಂಭಿಸಲಾಗಿದ್ದು, ಜೂನ್ ವೇಳೆಯಲ್ಲಿ ವಿತರಣೆ ಕಾರ್ಯ ನಡೆಯಲಿದೆ. ಭಾರತದಲ್ಲಿ ಐದು ಸೀಟುಗಳ ಎಕ್ಸ್5 68 ಲಕ್ಷ ರು. ಹಾಗೆಯೇ ಏಳು ಸೀಟುಗಳ ವೆರಿಯಂಟ್ 72 ಲಕ್ಷ ರು.ಗಳಷ್ಟು (ಎಕ್ಸ್ ಶೋ ರೂಂ) ದುಬಾರಿಯಾಗುವ ಸಾಧ್ಯತೆಯಿದೆ.


Click it and Unblock the Notifications








