ಪ್ರಸಕ್ತ ಸಾಲಿನಲ್ಲೇ ಹೊಸ ಟಾಟಾ ಸಫಾರಿ ಸ್ಟ್ರೋಮ್ ಬಿಡುಗಡೆ

By Nagaraja

ನೀವು ಟಾಟಾ ಕಾರುಗಳು ಇಷ್ಟುಪಡುವೀರಾ? ಹಾಗಿದ್ದರೆ ನಿಮಗಾಗಿ ಕಾದಿದೆ ಸಿಹಿ ಸುದ್ದಿ. ಹೌದು, ದೇಶದ ಅತಿ ದೊಡ್ಡ ವಾಹನ ತಯಾರಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್, ಪ್ರಸಕ್ತ ಸಾಲಿನಲ್ಲೇ ಎಲ್ಲ ಹೊಸತನದಿಂದ ಕೂಡಿರುವ ಸಫಾರಿ ಸ್ಟ್ರೋಮ್ ಕ್ರೀಡಾ ಬಳಕೆಯ ವಾಹನವನ್ನು (ಎಸ್‌ಯುವಿ) ದೇಶದ ಮಾರುಕಟ್ಟೆಗೆ ಪರಿಚಯಿಸಲಿದೆ.

ಟಾಟಾದ ಜನಪ್ರಿಯ ಮಾದರಿಗಳಲ್ಲಿ ಒಂದಾಗಿರುವ ಸಫಾರಿ ಸ್ಟ್ರೋಮ್, ತನ್ನ ದಿಟ್ಟ ನೋಟದಿಂದಲೇ ವಾಹನ ಪ್ರೇಮಿಗಳ ಪ್ರೀತಿ ಪಾತ್ರವಾಗಿದೆ. ಸದ್ಯ ಲಭ್ಯವಿರುವ ಮಾಹಿತಿ ಪ್ರಕಾರ ಹೊಸ ಸಫಾರಿ ಸ್ಟ್ರೋಮ್ ಕಾರಿನ ಹೊರಗೂ ಒಳಗೂ ಅನೇಕ ಬದಲಾವಣೆಗಳು ಕಂಡುಬರಲಿದೆ.

Tata Safari Storme

ಇವೆಲ್ಲದಕ್ಕೂ ಮಿಗಿಲಾಗಿ ಎಂಜಿನ್ ಪರಿಷ್ಕರಣೆ ಸಹ ಕಂಡುಬರಲಿದ್ದು, ಇದು ಹಿಂದಿನ ಆವೃತ್ತಿಗಿಂತಲೂ ಹೆಚ್ಚು ಕ್ರೀಡಾತ್ಮಕವೆನಿಸಿಕೊಳ್ಳಲು ಸಹಕಾರಿಯಾಗಲಿದೆ. ಹೊಸ ಸ್ಟ್ರೋಮ್ ಎಂಜಿನ್ ತಾಂತ್ರಿಕತೆಯು ನೂತನ ಆರಿಯಾಗೆ ಸಮಾನವಾಗಿರುವ ಸಾಧ್ಯತೆಯಿದೆ. ಇದರಲ್ಲಿ ಆಳವಡಿಸಲಾಗುವ 2.2 ಲೀಟರ್ ವ್ಯಾರಿಕೋರ್ ಎಂಜಿನ್ 150 ಅಶ್ವಶಕ್ತಿ ಉತ್ಪಾದಿಸಲಿದೆ.

ಹಾಗೆಯೇ ನೂತನ ಸಫಾರಿ ಸ್ಟ್ರೋಮ್, ಹರ್ಮಾನ್ ಕರ್ಡಾನ್‌ನ (Harman Kardon) ಇನ್-ಬಿಲ್ಟ್ ಟಚ್ ಸ್ಕ್ರೀನ್ ನೇವಿಗೇಷನ್ ಕಮ್ ಮಾಹಿತಿ ಮನರಂಜನಾ ಸಿಸ್ಟಂ ಪಡೆದುಕೊಳ್ಳಲಿದೆ. ಮಗದೊಂದು ಗಮನಾರ್ಹ ಅಂಶವೆಂದರೆ ನೂತನ ಸ್ಟ್ರೋಮ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಸಹ ಪಡೆಯಲಿದೆ.

ಈ ಎಲ್ಲ ವೈಶಿಷ್ಟ್ಯಗಳ ಬೆಂಬಲದೊಂದಿಗೆ ಟಾಟಾ ಸಫಾರಿ ಸ್ಟ್ರೋಮ್ ದೇಶದ ವಾಹನೋದ್ಯಮದಲ್ಲಿ ಹೊಸ ಗಾಳಿ ಬೀಸುವ ನಿರೀಕ್ಷೆಯಲ್ಲಿದೆ. ಇನ್ನು ಸುರಕ್ಷತೆಗಾಗಿ ಹೆಚ್ಚು ಪ್ರಾಧಾನ್ಯತೆ ಕೊಡಲಾಗಿದ್ದು, ಎಬಿಎಸ್, ಇಬಿಡಿ, ವಿದ್ಯುನ್ಮಾನವಾಗಿ ಹೊಂದಾಣಿಸಬಹುದಾದ ಔಟ್‌ಸೈಡ್ ವ್ಯೂ ರಿಯರ್ ಮಿರರ್, ಸೆಂಟರ್ ಆರ್ಮ್‌ರೆಸ್ಟ್ ಮತ್ತು ರೂಫ್ ಮೌಂಟೆಡ್ ಎಸಿ ಸೌಲಭ್ಯಗಳು ಲಭ್ಯವಾಗಲಿದೆ.

ಒಟ್ಟಿನಲ್ಲಿ ವಾಹನ ಪ್ರೇಮಿಗಳ ಪ್ರೀತಿ ಪಾತ್ರವಾಗಲು ಹೊಸ ಸಫಾರಿಗೆ ಸಾಧ್ಯವಾಗಲಿದೆಯೇ ಎಂಬುದಕ್ಕೆ ಮುಂದಿನ ದಿನಗಳಲ್ಲಿ ಉತ್ತರ ಲಭಿಸಲಿದೆ. ವಾಹನೋದ್ಯಮದ ಕ್ಷಣ ಕ್ಷಣ ಸುದ್ದಿಗಳಿಗಾಗಿ ಡ್ರೈವ್‌ಸ್ಪಾರ್ಕ್‌ಗೆ ಭೇಟಿ ಕೊಡಲು ಮರೆಯದಿರಿ...

More from DriveSpark

Article Published On: Saturday, June 28, 2014, 12:28 [IST]
English summary
Tata Motors has announced the release of the new Safari Storme. The new Safari Storme will have many changes on the outside as well as the inside. The major noticeable changes would the reworked engine which will help the new Storme to be sportier than its predecessor.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+